ಭವಿಷ್ಯ ಕುರಿತು ಆತಂಕವಾಗಿದೆಯಾ, ಇಲ್ಲಿದೆ ಪರಿಹಾರೋಪಾಯಗಳು

ನವದೆಹಲಿ, ಬುಧವಾರ, 22 ಜೂನ್ 2016 (13:27 IST)

ನೀವು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದೀರಾ? ನೀವು ಭವಿಷ್ಯದ ಬಗ್ಗೆ ಯೋಚಿಸುವುದು, ಯೋಜಿಸುವುದು ಅವಶ್ಯಕ. ಪ್ರಸಕ್ತ ಸ್ಥಿತಿಗೆ ಹಿಂದಿನ ಕರ್ಮಫಲವೇ ಕಾರಣವಾಗಿರುತ್ತದೆ ಮತ್ತು ಪ್ರಸಕ್ತ ಕೆಲಸವು ಮುಂದಿನ ಭವಿಷ್ಯಕ್ಕೆ ಆಧಾರವಾಗಿರುತ್ತದೆ. ಆದ್ದರಿಂದ ಭವಿಷ್ಯದ ಕುರಿತು ಚಿಂತನೆ ಸಮರ್ಥನೀಯವಾಗಿದೆ. ಆದರೆ ಒಬ್ಬರು ಭವಿಷ್ಯದ ಬಗ್ಗೆ ಚಿಂತಿಸಿ ಮಾನಸಿಕ ಒತ್ತಡಕ್ಕೆ ಗುರಿಯಾದರೆ ಆಗ ಸಮಸ್ಯೆ ಉದ್ಭವಿಸುತ್ತದೆ.
 
 ಈ ಒತ್ತಡವು ಖಿನ್ನತೆಗೆ ದೂಡುವುದಲ್ಲದೇ ಪ್ರಸಕ್ತ ಕಾಲವನ್ನು ಒತ್ತಡಮಯವಾಗಿ ಮಾಡುತ್ತದೆ. ಇದು ಚಂದ್ರ ಮತ್ತು ಕೇತು ಹಾಗೂ ಅಥವಾ ಚಂದ್ರ ಮತ್ತು ಶನಿಯ ನಕಾರಾತ್ಮಕ ಸಂಯೋಜನೆಯಿಂದ ಉಂಟಾಗುತ್ತದೆ. 
 
ನಿಮ್ಮ  ಗೃಹಗತಿಗಳ ಸಂಯೋಜನೆಯನ್ನು ಬದಲಾಯಿಸಲು ಸುಲಭವಲ್ಲ. ಆದರೆ ಕೆಲವು ಜ್ಯೋತಿಷ್ಯ ನೆರವಿನಿಂದ ನೀವೇ ಬದಲಾಗಬಹುದು.
 
ಪ್ರತಿ ದಿನ  3 ನಾಯಿಗಳಿಗೆ ಆಹಾರ ಉಣಿಸಿ. ಅಥವಾ ಸಾಕು ನಾಯಿಯನ್ನು ನೀವೇ ಚೆನ್ನಾಗಿ ನೋಡಿಕೊಳ್ಳಿ, ಇದು ನಿಮ್ಮ ಭವಿಷ್ಯದ ಕುರಿತ ಆತಂಕವನ್ನು ತಗ್ಗಿಸುತ್ತದೆ. 2. ನಿಮ್ಮಹಾಸಿಗೆಯ ಪಕ್ಕದಲ್ಲಿ ನೀರನ್ನು ಇಟ್ಟು ಬೆಳಿಗ್ಗೆ ಅದನ್ನು ಕುಡಿಯಿರಿ. ಇದು ನಿಮ್ಮ ಮನಸನ್ನು ಶಾಂತಗೊಳಿಸುತ್ತದೆ ಮತ್ತು ಮನಸ್ಸು ಸ್ಥಿರವಾಗುತ್ತದೆ.  ನೀವು ಆತಂಕದಿಂದ ಕೂಡಿದ್ದರೆ ಅದು ಖಂಡಿತವಾಗಿ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.
 ಆತಂಕಕ್ಕೆ ಪರಿಹಾರಗಳು
ಸಾಕಷ್ಟು ನೀರನ್ನು ಕುಡಿಯಿರಿ.  ಬೆಳ್ಳಿಯ ಲೋಟ ಅಥವಾ ಪಾತ್ರೆಯಿಂದ ನೀರನ್ನು ಕುಡಿಯಿರಿ. ಕ್ಯಾಲ್ಸಿಯಂ ಕೊರತೆಯಿಂದ ನರಳದಂತೆ, ನಿಮ್ಮ ಮೆದುಳಿನ ಕೋಶಗಳು ದುರ್ಬಲವಾಗದಂತೆ ಖಚಿತಪಡಿಸಿಕೊಳ್ಳಿ, ನೀವು ಚಕಪ್‌ಗೆ ಹೋಗಲು ಸಾಧ್ಯವಾಗದಿದ್ದರೆ ಕ್ಯಾಲ್ಸಿಯಂ ಪೂರಕಗಳನ್ನು ಸೇವಿಸುವುದು ನೆರವಾಗುತ್ತದೆ. ಸಾಕಷ್ಟು ಆಮ್ಲಜನಕವನ್ನು ಸೇವಿಸಿ, ಸಾಧ್ಯವಾದಾಗಲೆಲ್ಲಾ ಧ್ಯಾನ ಮಾಡುವುದನ್ನು ಕಲಿಯಿರಿ, ಅಶ್ವಗಂಧ, ವಾಚ್, ಮಿಶ್ರಿ, ಜೀರಾ, ಸೋಂಪು ಬೀಜಗಳನ್ನು ಅರೆದು ಪುಡಿ ಮಾಡಿ ಅದಕ್ಕೆ ಮುಲೇತಿ ಪುಡಿ ಮಿಶ್ರಮಾಡಿ. ಆತಂಕ ನಿವಾರಣೆಗೆ ಅದನ್ನು ಕೆಲವು ದಿನ ಸೇವಿಸಿ. ಸಿಗರೇಟ್ ಮತ್ತು ಗುಟ್ಕಾ ಸೇರಿ ತಂಬಾಕಿನ ಅವಲಂಬನೆಯನ್ನು ಕೂಡ ಅದು ನಿವಾರಿಸುತ್ತದೆ.
 
ಬಕುಲ ಮರದ ಬೇರನ್ನು ಬಿಳಿಯ ದಾರದಲ್ಲಿ ಕಟ್ಟಿ ಸೋಮವಾರ ನಿಮ್ಮ ಕುತ್ತಿಗೆಗೆ ಧರಿಸಿ, ಪರ್ಯಾಯವಾಗಿ ನೀವು ಸಮುದ್ರಿ ಪನ್ನಾ ಧರಿಸಬಹುದು. ಸಮುದ್ರಿ ಪನ್ನಾ ಕರಾವಳಿ ಪ್ರದೇಶಗಳಲ್ಲಿ ಸಿಗುವ ಹಸಿರು ಮುತ್ತಾಗಿದೆ.
 
ಉಂಗುರದಲ್ಲಿ ಇದರ ಹರಳುಗಳನ್ನು ಸೋಮವಾರ ಅಥವಾ ಬುಧವಾರ ಮುಂಜಾನೆ ಧರಿಸಿ, ಇದರಿಂದ ಆತಂಕದಿಂದ ಉಂಟಾಗುವ ನಕಾರಾತ್ಮಕ ಭಾವನೆ ಕಡಿಮೆಯಾಗುತ್ತದೆ ಮತ್ತು ಓಮ್ ಮಂತ್ರವನ್ನು ಜಪಿಸುವುದನ್ನು ಆರಂಭಿಸಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಅದೃಷ್ಟಬಲದಿಂದ ಶ್ರೀಮಂತರಾಗಲು ಪರಿಹಾರಗಳು

ಶ್ರೀಮಂತರಾಗುವುದು ಪ್ರತಿಯೊಬ್ಬರ ಮೂಲಭೂತ ಕನಸಾಗಿದ್ದು, ಹಣವನ್ನು ಆಕರ್ಷಿಸಿ ಶ್ರೀಮಂತರಾಗಲು ...

news

ಮಗುವಿನ ವೃತ್ತಿಜೀವನ ರೂಪಿಸಲು ಐದು ನಿಯಮಗಳು

ತಂದೆ, ತಾಯಿಗಳು ಬರೀ ತಮ್ಮ ಕನಸುಗಳನ್ನು ಮಾತ್ರ ಮಕ್ಕಳ ಮೇಲೆ ಹೇರದೇ ಮಕ್ಕಳ ಯಶಸ್ವಿ ಭವಿಷ್ಯಕ್ಕೆ ...

news

ನಿಮ್ಮ ಭವಿಷ್ಯದ ಮುನ್ಸೂಚನೆಗೆ ಕನಸುಗಳು ನೆರವಾಗುತ್ತವೆಯೇ?

ಮಾನವ ಜೀವನದಲ್ಲಿ ಕನಸುಗಳಿಗೆ ಪ್ರಾಮುಖ್ಯತೆ ಮತ್ತು ಉದ್ದೇಶವಿರುವುದು ಸಂಶೋಧನೆ ಮತ್ತು ವೈಜ್ಞಾನಿಕ ...

news

ವೃತ್ತಿಜೀವನದ ಹಾದಿಯಲ್ಲಿ ಜೋತಿಷ್ಯದ ಪರಿಣಾಮ

ಜೀವನದ ಸಾಗರವನ್ನು ಮಾನವ ದಾಟಲು ಜಾತಕಕ್ಕಿಂತ ಉತ್ತಮ ದೋಣಿ ಬೇರೊಂದಿಲ್ಲ ಎಂಬ ಮಾತಿದೆ. ಸಂಪೂರ್ಣ ...