ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಳಕ್ಕೆ ಜ್ಯೋತಿಷ್ಯದ ಪರಿಹಾರಗಳು

ಬೆಂಗಳೂರು, ಶನಿವಾರ, 25 ಜೂನ್ 2016 (12:15 IST)

ಪತಿ ಪತ್ನಿಯರಾಗಿರಲಿ ಅಥವಾ ಗೆಳೆಯ, ಗೆಳತಿಯ ಪ್ರೇಮವಾಗಿರಲಿ, ಪ್ರೀತಿ ಮತ್ತು ವಾತ್ಸಲ್ಯವು ಪ್ರತಿಯೊಂದು ಪ್ರೇಮದ ಪ್ರಮುಖ ಅಂಶ. ಸಂಬಂಧದಲ್ಲಿ ಪ್ರೀತಿ ಮತ್ತು ಅಡಕವಾಗಿದ್ದರೆ, ದಂಪತಿಗೆ ಸ್ವರ್ಗದಂತೆ ಭಾಸವಾಗುತ್ತದೆ. ಆದರೆ ಪ್ರೀತಿ, ವಾತ್ಸಲ್ಯ ಮಾಯವಾದರೆ ಆ ಸಂಬಂಧದಲ್ಲಿ ಅರ್ಥವಿಲ್ಲ.  

ಕೆಲವು ಸಮಸ್ಯೆಗಳಿಂದ ಪ್ರೀತಿ ಮತ್ತು ವಾತ್ಸಲ್ಯ ನಿಮ್ಮ ಸಂಬಂಧದಲ್ಲಿ ಮಾಯವಾಗಿದೆಯೆಂದು ಭಾವಿಸಿದ್ದರೆ, ಕೆಳಗಿನ ಜ್ಯೋತಿಷ್ಯದ ಮತ್ತು ಲಾಲ್ ಕಿತಾಬ್ ಪರಿಹಾರೋಪಾಯಗಳನ್ನು ಬಳಸಿ. 
 
ದಂಪತಿ ನಡುವೆ ಸದಾ ಸಂಘರ್ಷ ಮತ್ತು ತಪ್ಪು ತಿಳಿವಳಿಕೆ ಮೂಡಿದ್ದರೆ ಅವರು ತ್ರಯಾಶರಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ಸಂಘರ್ಷ ಮತ್ತು ತಪ್ಪುತಿಳಿವಳಿಕೆ ಸಮಸ್ಯೆಗಳು ನಿವಾರಣೆಯಾಗುತ್ತದೆ.
 
ಈ ಮಂತ್ರವು ಮೂಲತಃ ''ಊಂ ಹೋಂ ಜೂಂ ಸಃ'' ಅಥವಾ ಊಂ ಜೂಂ ಸಃ. ಶುಕ್ಲ ಪಕ್ಷದ ಮೊದಲ ಸೋಮವಾರ ವ್ಯಕ್ತಿಯು ಈ ಮಂತ್ರವನ್ನು ಜಪಿಸಬೇಕು. ದಂಪತಿಯಿಬ್ಬರೂ ಈ ಮಂತ್ರವನ್ನು ಒಟ್ಟಿಗೆ ಕನಿಷ್ಟ 21 ದಿನಗಳ ಕಾಲ ನಿಯಮಿತವಾಗಿ ಜಪಿಸಿದರೆ ಇದು ಅನುಕೂಲವಾಗುತ್ತದೆ. 
ನೀವು ಪತ್ನಿಯಾಗಿದ್ದು, ನಿಮ್ಮ ಪತಿಗೆ ನಿಮ್ಮಲ್ಲಿ ಆಸಕ್ತಿ ಇಲ್ಲದಿದ್ದರೆ ಮತ್ತು ನಿಮ್ಮಿಂದ ಸದಾ ದೂರವಿರಲು ಪ್ರಯತ್ನಿಸಿದರೆ, ನೀವು ಈ ಮಂತ್ರವನ್ನು ಜಪಿಸಬೇಕು
 
''ಓಮ್ ಮಹಾಯಕ್ಷಿಣಿ ಪತಿ ಮೇಮ್ ವಶ್ಯಂ ಕುರು ಕುರು ಸ್ವಾಹಾ''
ದೀಪಾವಳಿಯ ರಾತ್ರಿ ಅಥವಾ ಗ್ರಹಣದ ಸಂದರ್ಭದಲ್ಲಿ ಈ ಮಂತ್ರವನ್ನು ಜಪಿಸುವ ಮೂಲಕ ನಿಮ್ಮ ಪತಿಯನ್ನು ನಿಮ್ಮ ನಿಯಂತ್ರಣದಲ್ಲಿರಿಸಿಕೊಂಡು ಅವರಿಂದ ಬೇಷರತ್ತಿನ ಪ್ರೀತಿಯನ್ನು ಪಡೆಯಿರಿ. 
 
 ಇಬ್ಬರೂ ಗೌರಿ ಶಂಕರ ರುದ್ರಾಕ್ಷವನ್ನು ಧರಿಸಲು ಸಾಧ್ಯವಾದರೆ ಇದು ವೈವಾಹಿಕ ಸಂಬಂಧಕ್ಕೆ ಅನುಕೂಲಕರ. ಇದು ದಂಪತಿ ನಡುವೆ ಅಪಾರ ಪ್ರೀತಿ ಹುಟ್ಟುವ ಶಕ್ತಿ ಹೊಂದಿದೆ.  11 ಗೋಮ್ತಿ ಚಕ್ರಗಳನ್ನು ಕೆಂಪು ಕುಂಕುಮದ ಪೆಟ್ಟಿಗೆಯಲ್ಲಿ ಇರಿಸುವ ಮೂಲಕ ಪ್ರೇಮ ಜೀವನದ ಎಲ್ಲಾ ಸಮಸ್ಯೆಗಳನ್ನು ಮತ್ತು ಸಂಕಷ್ಟಗಳನ್ನು ನಿವಾರಿಸುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಕರಾಳ ಶಕ್ತಿಯ ನಿವಾರಣೆಗೆ ಉಪ್ಪುನೀರಿನ ಪರಿಹಾರೋಪಾಯ

ದೆವ್ವಗಳು( ನಕಾರಾತ್ಮಕ ಶಕ್ತಿಗಳು, ಭೂತಗಳು) ಅವುಗಳಲ್ಲಿರುವ ಕರಾಳ ಶಕ್ತಿಯ ಮೂಲಕ ಸಂಕಷ್ಟವನ್ನು ...

news

ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿಗೆ 8 ಪರಿಹಾರೋಪಾಯಗಳು

ದುರ್ಬಲ ಶುಕ್ರ ಮತ್ತು ಗುರುವಿನಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ನಿಮ್ಮ ವೈವಾಹಿಕ ...

news

ಅದೃಷ್ಟ ಖುಲಾಯಿಸಲು ಕೆಲವು ಟಿಪ್ಸ್‌ಗಳು

ಈ ಜಗತ್ತಿನಲ್ಲಿ ವ್ಯಕ್ತಿಯೊಬ್ಬ ಪ್ರಾಮಾಣಿಕವಾಗಿ ಶ್ರಮಿಸಿ ಸತತವಾಗಿ ದುಡಿದರೆ ಯಾವುದನ್ನಾದರೂ ಸಾಧಿಸಬಹುದು ...

news

ಪ್ರೇಮ ವಿವಾಹಕ್ಕೆ ಜ್ಯೋತಿಷ್ಯದ ಪರಿಹಾರೋಪಾಯಗಳು

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದು ಅವರನ್ನು ಮದುವೆಯಾಗಲು ಬಯಸಿದ್ದರೂ ಪ್ರೇಮ ವಿವಾಹಕ್ಕೆ ಅನೇಕ ...