ರಾಹುದೆಶೆ ಮತ್ತು ರಾಹು ದೋಷ ಬಗ್ಗೆ ತಿಳಿದಿರಲಿ

ದೆಹಲಿ, ಮಂಗಳವಾರ, 6 ಸೆಪ್ಟಂಬರ್ 2016 (10:28 IST)

ಕಂಟಕಶನಿ, ಸಾಡೆ ಸಾಥ್ ,ದಶಾಸಂಧಿ, ರಾಹು ಕೇತು ಇವೇ ಮೊದಲಾದುವುಗಳು ಗ್ರಹ ದೋಷಗಳಲ್ಲಿ ಪ್ರಧಾನವಾಗಿರುವವುಗಳು.ಜಾತಕ ಪ್ರಕಾರ ರಾಹು ದೆಶೆ ಅನುಭವಿಸುವವರು ಮತ್ತು ರಾಹು ಅನಿಷ್ಟ ಸ್ಥಾನದಲ್ಲಿರುವವರಿಗೆ ಕೆಲವು ಅಡಚಣೆಗಳು, ಮನೋವೇದನೆಗಳು ಅನುಭವಕ್ಕೆ ಬರುವುದು. ನವಗ್ರಹಗಳಲ್ಲಿ ರಾಹುವಿಗೆ ಸರ್ಪದ ರೂಪವಿದೆ ಎಂದು ನಂಬಿಕೆ.

 
ಆದುದರಿಂದಲೇ ಗ್ರಹ ಸ್ಥಾನದಲ್ಲಿ 'ಸ' ಎಂಬ ಅಕ್ಷರವನ್ನು ರಾಹುವಿನ ಸ್ಥಾನವನ್ನು ತೋರಿಸಲು ಬಳಸಲಾಗುತ್ತದೆ. ರಾಹು ಯಾವಾಗಲೂ ಒಂದೂವರೆ ಗಂಟೆಗಳಷ್ಟು ಕಾಲ ವಿಷವನ್ನು ಪಸರಿಸುತ್ತಾನೆ ಎಂಬ ಸಂಕಲ್ಪದಿಂದಾಗಿ ಈ ಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ.ಆದುದರಿಂದಲೇ ಶುಭ ಕಾರ್ಯನಿಮಿತ್ತ ಮನೆಯಿಂದ ಹೊರಡುವುದಾದರೆ ಈ ಘಳಿಗೆಯ ಮೊದಲು ಅಥವಾ ನಂತರ ಹೊರಡುವುದು ಸೂಕ್ತ.
 
ರಾಹುಕಾಲದಲ್ಲಿ ಪ್ರತಿದಿನವೂ ಪ್ರಾರ್ಥನೆ, ಬಲಿವಾಡು ಮೊದಲಾದವುಗಳನ್ನು ಕೈಗೊಂಡಲ್ಲಿ ದೋಷ ಪರಿಹಾರವಾಗುವುದು. ಭಾನುವಾರ ಸಂಜೆ 4.30 ರಿಂದ 6 ಗಂಟೆಯ ವರೆಗೆ ರಾಹುವಿಗೆ ಬಲಿವಾಡು ಅರ್ಪಿಸಲು ತಕ್ಕುದಾದ ಸಮಯವಾಗಿದೆ.
 
ಶಿವನ ಅವತಾರವಾದ ಶರಭೇಶ್ವರನನ್ನು ಪ್ರಾರ್ಥಿಸುವುದರಿಂದ ರಾಹುದೋಷ ಪರಿಹಾರವಾಗುವುದು. ರಾಶಿ ಚಕ್ರದಲ್ಲಿ ರಾಹುವಿನ ಇಷ್ಟ ಸ್ಥಾನವು 3,6,11 ಆಗಿದ್ದು ಮಿಥುನ ರಾಶಿ ಉಚ್ಛವೂ ಧನುರಾಶಿ ನೀಚವೂ ಆಗಿರುವುದು.
 
ಶನಿಮಂಡಲ ಮತ್ತು ಗುರುಮಂಡಲದ ನಡುವೆ ರಾಹು ಕೇತುಗಳ ಸ್ಥಾನವಿರುವುದು. 18 ವರುಷಗಳನ್ನು ಬಳಸಿ ಅವುಗಳು ಸೂರ್ಯನ ಸುತ್ತ ಒಮ್ಮೆ ಭ್ರಮಣ ನಡೆಸುತ್ತವೆ. ಒಂದೂವರೆ ವರ್ಷಗಳಷ್ಟು ಕಾಲ ರಾಹು ಒಂದು ರಾಶಿಯಲ್ಲಿ ತಂಗುತ್ತದೆ.ಆ ರಾಶಿಯ ಏಳನೇ ರಾಶಿಯಲ್ಲಿ ಅಷ್ಟೇ ಸಮಯದ ವರೆಗೆ ಕೇತುವೂ ಇರುತ್ತದೆ. ಆದರೆ ಕೌತುಕದ ವಿಷಯವೇನೆಂದೆರ ರಾಹು ಕೇತುಗಳು ಹಿಂದಕ್ಕೆ ಚಲಿಸುವವುಗಳಾಗಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಪ್ರತಿ ನಿತ್ಯ ದೀಪ ಹಚ್ಚಿ, ಶಾಂತಿ ಸಮೃದ್ಧಿಯಿಂದಿರಿ!

ದೀಪಕ್ಕೊಂದು ಅಜ್ಞಾತ ಅಗಾಧ ಶಕ್ತಿಯಿದೆ. ಕತ್ತಲೆಯನ್ನು ಬೆಳಗುವ ದೀಪ ಮನಸ್ಸಿನ ಎಲ್ಲ ಕಲ್ಮಶಗಳನ್ನೂ ದೂರ ...

news

ಮಚ್ಚೆ ಇದ್ದರೆ ಏನು ಆಗುತ್ತೆ.. ಓದಿ

ಬೆಳ್ಳಗಿನ ಮುಖದಲ್ಲೊಂದು ಗಲ್ಲದ ಬಳಿ ಪುಟ್ಟ ಮಚ್ಚೆಯಿದ್ದರೆ, ಆ ಸುಂದರಿಯನ್ನು ವಿವರಿಸಲು ಶಬ್ದಗಳು ಸಾಲದು ...

news

ಸುಖ ದಾಂಪತ್ಯಕ್ಕೆ ವಾಸ್ತು ಸೂತ್ರಗಳು

ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ...

news

ನಿಮ್ಮ ರಾಶಿಗನುಗುಣವಾಗಿ ಬಟ್ಟೆ ಧರಿಸಿ.. ಖುಷಿಯಾಗಿರಿ ಇಲ್ಲಿದೆ ಸಲಹೆ

ರಾಶಿಗನುಗುಣವಾಗಿ ಬಟ್ಟೆ ಧರಿಸಬೇಕು. ಇದರಿಂದ ನಿಮ್ಮ ಯಶಸ್ಸಿಗೆ ಕಾರಣವಾಗಬಲ್ಲದ್ದು. ಯಾವ್ಯಾವ ರಾಶಿಯವರು ...