ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಧನು ರಾಶಿ ನೋಡೋಣ.ಧನು ರಾಶಿಯವರು ಸಾಹಸಪ್ರಿಯರು, ವಿನೋದ ಪ್ರವೃತ್ತಿಯವರು. ಇವರಿಗೆ ಇವರ ಮೂಲ ಸ್ವಭಾವವನ್ನು ಬದಲಾಯಿಸದ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ.ಈ ರಾಶಿಯವರಿಗೆ ಹೆಚ್ಚು ಸ್ಪರ್ಧೆ ಇಲ್ಲದೇ ಇರುವುದು ಮೇಷ ರಾಶಿಯವರಿಂದ. ಹೀಗಾಗಿ ಮೇಷ ರಾಶಿಯವರನ್ನು ಮದುವೆಯಾಗಬಹುದು.