ವಿವಾಹಕ್ಕೆ ಮುಂಚೆ ಸಂಗಾತಿಗಳ ನಡುವೆ ಹೊಂದಾಣಿಕೆ ಅತ್ಯವಶ್ಯಕ

ನವದೆಹಲಿ, ಮಂಗಳವಾರ, 21 ಜೂನ್ 2016 (11:24 IST)

 ವಿವಾಹ ಬಂಧಕ್ಕೆ ಮುಂಚೆ ಸಂಗಾತಿಗಳ ನಡುವೆ ಹೊಂದಾಣಿಕೆ ಗಮನಾರ್ಹ ಅಂಶವಾಗಿದೆ. ವಿವಾಹ ಸಂಬಂಧ ಮುರಿದುಹೋಗುವುದನ್ನು ತಪ್ಪಿಸಲು ನಿಮ್ಮ ರಾಶಿಗಳನ್ನು ಪರೀಕ್ಷಿಸಿ ಮತ್ತು ಸೂಕ್ತ ಜ್ಯೋತಿಷ್ಯದ ಸಲಹೆಗಾರರನ್ನು ಅಂದರೆ ತಜ್ಞರನ್ನು ಆಯ್ಕೆ ಮಾಡಿ. ಹೊಂದಾಣಿಕೆಯ ವರ, ವಧುವನ್ನು ಒಂದು ಮಾಡುವ ವೇದ ಜ್ಯೋತಿಷ್ಯಶಾಸ್ತ್ರ ಇತ್ತೀಚೆಗೆ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಸಂತೋಷದ, ಸಮೃದ್ಧಿಯ ಮತ್ತು ಸ್ಥಿರ ವಿವಾಹಗಳ ಉತ್ತೇಜನಕ್ಕೆ ಇದು ವಿವಿಧ  ಪರಿಹಾರಗಳನ್ನು ನೀಡುತ್ತವೆ.
 
 ವರ, ವಧುವನ್ನು ಒಂದುಗೂಡಿಸುವ ಜ್ಯೋತಿಷ್ಯವು ವಿವಾಹವಾಗುವ ಗಂಡು, ಹೆಣ್ಣಿನ ಜಾತಕಗಳ ದೋಷರಹಿತ ಹೊಂದಾಣಿಕೆಯಾಗಿದೆ. ಗುಣ ಮಿಲನ ಅಥವಾ ಕುಂಡಲಿ ಮಿಲನ, ಕುಜ ದೋಷದ ವಿಶ್ಲೇಷಣೆ, ಇತರೆ ದೋಷಗಳು ಮತ್ತು ಯೋಗಗಳ ವಿಶ್ಲೇಷಣೆ ಇವು ಜ್ಯೋತಿಷ್ಯದ ವಿಧಾನಗಳಾಗಿದ್ದು, ಯಾವುದೇ ವೈವಾಹಿಕ ಸಂಬಂಧ ಅಂತಿಮಗೊಳಿಸುವ ಮುನ್ನ  ಇದನ್ನು ಅನುಸರಿಸಲಾಗುತ್ತದೆ.
 
ರಾಶಿಗಳಲ್ಲದೇ, ಇತರೆ ಅಂಶಗಳ ಕುರಿತು ಹೊಂದಾಣಿಕೆ ಅವಶ್ಯಕವಾಗಿದೆ. ರಾಶಿಗಳು ಗುಣಮಿಲನ ಅಥವಾ ಜಾತಕ ಹೊಂದಾಣಿಕೆಯ ಒಂದು ಅಂಶವನ್ನು ಹೊಂದಿರುತ್ತದೆ. ಆದರೆ ವಿವಾಹ ಹೊಂದಾಣಿಕೆ ಸಂದರ್ಭದಲ್ಲಿ ಹೆಚ್ಚಿನ ಖಚಿತತೆಯಿಂದ ಹೇಳಲು ಜನ್ಮಕುಂಡಲಿ ಮತ್ತು ದಶವನ್ನು ಕೂಡ  ಪರಿಶೀಲಿಸುವ ಅಗತ್ಯವಿರುತ್ತದೆ. 
 
ವಧು, ವರರ ಜಾತಕ ಹೊಂದಾಣಿಕೆಯನ್ನು ಪರಿಶೀಲಿಸುವ ಮುಂಚೆ 8 ಭಿನ್ನ ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಅವು ಮಾನಸಿಕ ಹೊಂದಾಣಿಕೆ, ಲೈಂಗಿಕ ಹೊಂದಾಣಿಕೆ, ತಿಳಿವಳಿಕೆ ಮತ್ತು ವರ್ತನೆ. ವೇದ ಜ್ಯೋತಿಷ್ಯದ ಪ್ರಕಾರ ಎಲ್ಲಾ ಅಂಶಗಳು ಭರವಸೆಯ, ಸುಖಕರ ದಾಂಪತ್ಯ ಜೀವನಕ್ಕೆ ಹೊಂದಿಕೊಳ್ಳಬೇಕು. 
 
ಸೂಕ್ತವಾದ ಜ್ಯೋತಿಷ್ಯ ಸಲಹೆಗಾರರ ಆಯ್ಕೆ:  ವಿವಾಹವು ಒಬ್ಬರ ಜೀವನದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ಸೂಕ್ತ ತಿಳಿವಳಿಕೆ ಮೂಲಕ ಅದನ್ನು ನೆರವೇರಿಸಬೇಕು. ಗಮನಿಸಬೇಕಾದ ಅತ್ಯಂತ ಮುಖ್ಯ ವಿಷಯವು ಸೂಕ್ತ ಲೆಕ್ಕಾಚಾರಗಳು ಮತ್ತು ಆಳವಾದ ವಿಶ್ಲೇಷಣೆ. ಇವೆರಡು ವಿಷಯಗಳ ಬಗ್ಗೆ ಗಮನವಹಿಸಿದರೆ, ಸುಖಕರ ದಾಂಪತ್ಯ ಜೀವನದ ಭರವಸೆ ಸಿಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಹೊಸ ವರ್ಷದಲ್ಲಿ ನಿಮ್ಮ ಭವಿಷ್ಯ ಹೇಗಿರುತ್ತದೆ? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ರಾಶಿಯವರಿಗೆ ಗುರು ಸಪ್ತಮ ಸ್ಥಾನದಲ್ಲಿರುವುದರಿಂದ ಕುಟುಂಬದಲ್ಲಿ ಮಂಗಳ ಕಾರ್ಯಗಳು ನೆರವೇರುತ್ತವೆ, ...

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...