Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 9 ಡಿಸೆಂಬರ್ 2018 (08:22 IST)
ಮೇಷ: ಹೊಸ ಬಟ್ಟೆ, ವಸ್ತು ಖರೀದಿ ಸಾಧ್ಯತೆಯಿದ್ದು, ಖರ್ಚು ವೆಚ್ಚ ಅಧಿಕವಾಗಲಿದೆ. ಆದರೆ ಕುಟುಂಬದವರೊಂದಿಗೆ ಸಂತಸದಿಂದ ಕಳೆಯಲಿದ್ದೀರಿ.

 
ವೃಷಭ: ಹಿತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಇಂತಹವರನ್ನು ಜಾಣ್ಮೆಯಿಂದ ಎದುರಿಸಿದರೆ ಇಂದಿನ ದಿನ ಶುಭದಿನವಾಗಲಿದೆ.
 
ಮಿಥುನ: ತುಸು ಆಲಸ್ಯ ಕಾಡಲಿದೆ. ಹಾಗಿದ್ದರೂ ಸಂಗಾತಿ ಜತೆಗೆ ಸರಸದ ಸಮಯ ಕಳೆಯಲಿದ್ದೀರಿ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಕಠಿಣ ತಯಾರಿ ನಡೆಸಬೇಕಾಗಬಹುದು. ದೇವತಾನುಗ್ರಹದಿಂದ ಅಂದುಕೊಂಡ ಕಾರ್ಯ ಸಾಧುವಾಗಲಿದೆ.
 
ಸಿಂಹ: ಶತ್ರುಕಾಟವಿದ್ದರೂ, ನಿಮ್ಮ ವ್ಯಕ್ತಿತ್ವದಿಂದ ಎಲ್ಲವನ್ನೂ ಎದುರಿಸಲು ಸಾಧ್ಯವಾಗುವುದು. ದೈವ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
 
ಕನ್ಯಾ: ಈ ದಿನ ಮನೆಗೆ ನೆಂಟರು ಬರಲಿದ್ದು, ಖರ್ಚು ವೆಚ್ಚ ಅಧಿಕವಾಗಲಿದೆ. ಹಿತಮಿತವಾಗಿ ನಡೆದುಕೊಂಡರೆ ಎಲ್ಲರಿಗೂ ನೆಮ್ಮದಿ.
 
ತುಲಾ: ಮಿತಿ ಮೀರಿ ಖರ್ಚು ಮಾಡದಿರಿ. ಅಳೆದು ತೂಗಿ ನಡೆದುಕೊಂಡರೆ ಇಂದಿನ ದಿನ ನಿಮ್ಮದಾಗಲಿದೆ.
 
ವೃಶ್ಚಿಕ: ಕುಟುಂಬ ಸಂಬಂಧಿತ ಹಳೆಯ ವ್ಯಾಜ್ಯವೊಂದು ತಾನಾಗಿಯೇ ನಿವಾರಣೆಯಾಗಲಿದೆ. ದೇವರ ಪ್ರಾರ್ಥನೆಗಳಲ್ಲಿ ತೊಡಗುವಿರಿ.
 
ಧನು: ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೊಸ ವಸ್ತುಗಳು ನಿಮ್ಮದಾಗಲಿವೆ. ಉತ್ಸಾಹ ಕಳೆದುಕೊಳ್ಳಬೇಡಿ.
 
ಮಕರ: ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಹಲವು ಬಾರಿ ಯೋಚನೆ ಮಾಡುವಿರಿ. ಚಂಚಲ ಮನಸ್ಸು ನಿಮ್ಮದಾಗಿರುತ್ತದೆ. ಕುಟುಂಬದವರೊಂದಿಗೆ ಚರ್ಚಿಸಿ ಮುಂದುವರಿಯುವುದು ಒಳ್ಳೆಯದು.
 
ಕುಂಭ: ಹಳೆಯ ಬಾಕಿಯೊಂದು ಪಾವತಿಯಾಗಲಿದೆ. ಧನಾಗಮನದ ಖುಷಿಯಲ್ಲಿ ಮಿತಿ ಮೀರಿ ಖರ್ಚು ಮಾಡಬೇಡಿ.
 
ಮೀನ: ಮಾನಸಿಕ ವೇದನೆ ಅನುಭವಿಸುವಿರಿ. ಹಾಗಿದ್ದರೂ ದೇವರ ಪ್ರಾರ್ಥನೆಯಿಂದ ನೆಮ್ಮದಿ ಕಂಡುಕೊಳ್ಳುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :