ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸುದೀರ್ಘ ಕಾಲದಿಂದ ಕಾಡುತ್ತಿದ್ದ ಸಾಂಸಾರಿಕ ಸಮಸ್ಯೆಗೆ ಇಂದು ಪರಿಹಾರ ಸಿಕ್ಕಿ ನೆಮ್ಮದಿ ಕಾಣುವಿರಿ. ಮೇಲಧಿಕಾರಿಗಳೊಂದಿಗೆ ವರ್ತಿಸುವಾಗ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಶುಭ ದಿನ.ವೃಷಭ: ಧನ ಲಾಭದ ಯೋಗವಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲವಿದ್ದರೆ ಯಶಸ್ಸು ಸಾಧ್ಯ.ಮಿಥುನ: ವ್ಯಾಜ್ಯ ವಿಚಾರವಾಗಿ ನ್ಯಾಯಕ್ಕಾಗಿ ಓಡಾಡಬೇಕಾದೀತು. ಪ್ರಯತ್ನದಿಂದ ಯಶಸ್ಸು ಸಾಧ್ಯ. ಅಂದುಕೊಂಡ ಫಲ ಸಿಗದಿದ್ದರೆ ನಿರಾಸೆ ಬೇಡ.ಕರ್ಕಟಕ: ದೇವತಾ ಕಾರ್ಯಗಳನ್ನು ಕೈಗೊಳ್ಳುವಿರಿ.