Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 16 ಡಿಸೆಂಬರ್ 2018 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಚಿಂತಿತರಾಗುವಿರಿ. ದೂರ ಪ್ರಯಾಣದ ಸಾಧ್ಯತೆಯಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.
 
ವೃಷಭ: ಅಂದುಕೊಂಡ ಕಾರ್ಯಗಳು ನೆರವೇರಿ ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ. ಬಂಧು ಮಿತ್ರರ ಆಗಮನವಾಗಲಿದೆ. ಆರ್ಥಿಕ ಲಾಭವಾಗಲಿದೆ.
 
ಮಿಥುನ: ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಎಚ್ಚರಕೆ ವಹಿಸಿ. ಬರುವ ಅವಕಾಶಗಳನ್ನು ಬಳಸಿಕೊಳ್ಳಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
 
ಕರ್ಕಟಕ: ಋಣಾತ್ಮಕ ಚಿಂತನೆ ನಡೆಸುವಿರಿ. ಕುಟುಂಬದ ಹಿರಿಯರೊಂದಿಗೆ ಎಚ್ಚರಿಕೆಯಿಂದ ಮಾತನಾಡಿ. ಮಾತು ಮನ ಕೆಡಿಸುವ ಸಾಧ್ಯತೆಯಿದೆ.
 
ಸಿಂಹ: ದೂರ ಸಂಚಾರದ ಯೋಗವಿದ್ದು, ನಿಮ್ಮ ಅಪೇಕ್ಷಿತ ಕೆಲಸ ಕಾರ್ಯಗಳು ನೆರವೇರುವುದು. ಆರ್ಥಿಕವಾಗಿ ಖರ್ಚು ವೆಚ್ಚಗಳನ್ನು ಮಾಡಬೇಕಾಗುವುದು.
 
ಕನ್ಯಾ: ಆಪ್ತರೊಂದಿಗೆ ಪ್ರವಾಸ ಹೋಗಿ ಸಂತಸ ಕಾಣುವಿರಿ. ಕುಟುಂಬದವರ ಸಹಕಾರ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ ಸಿಗಲಿದೆ.
 
ತುಲಾ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ದೂರ ಸಂಚಾರ ಯೋಗವಿದ್ದು, ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಶ್ಚಿಕ: ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಆದಾಯ ಬಂದಷ್ಟೂ ಖರ್ಚು ವೆಚ್ಚಗಳೂ ಆಗಲಿದೆ. ಹಾಗಂತ ನಿರಾಸೆ ಬೇಡ. ಮುಂದೆ ಒಳ್ಳೆಯದ ದಿನಗಳಿವೆ.
 
ಧನು: ಆರೋಗ್ಯದಲ್ಲಿ ಏರುಪೇರಾಗಬಹುದು. ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ರೋಗ ಮತ್ತೆ ಕಾಣಿಸಿಕೊಳ್ಳಬಹುದು. ಆದರೆ ಕುಟುಂಬದವರ ಸಹಕಾರ, ಕಾಳಜಿಯಿಂದ ನೆಮ್ಮದಿ ಕಾಣುವಿರಿ.
 
ಮಕರ: ಆರ್ಥಿಕವಾಗಿ ಚೇತರಿಸಿಕೊಳ್ಳಲಿದ್ದು, ಕೈ ಗೊಂಡ ಕಾರ್ಯದಲ್ಲಿ ಲಾಭ ಕಾಣುವಿರಿ. ಕಾರ್ಯಸಾನೆಯಿಂದಾಗಿ ಮನಸ್ಸಿಗೂ ಸಂತೋಷ, ನೆಮ್ಮದಿ ಸಿಗಲಿದೆ.
 
ಕುಂಭ: ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಮನಃಶಾಂತಿಗೆ ಭಂಗವಾದಲ್ಲಿ ದೇವರ ಪ್ರಾರ್ಥನೆ ಮಾಡಿ. ಅನಿರೀಕ್ಷಿತವಾಗಿ ಅತಿಥಿಗಳು ಬಂದು ಸಂತಸ ನೀಡುವರು.
 
ಮೀನ: ವ್ಯವಹಾರದಲ್ಲಿ ಲಾಭ ಸಿಗಲಿದೆ. ಆದರೆ ಓಡಾಟಗಳಿಂದ ದೇಹಾರೋಗ್ಯವನ್ನು ಅಲಕ್ಷಿಸಬೇಡಿ. ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಶುಭ ಕಾಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        
ಇದರಲ್ಲಿ ಇನ್ನಷ್ಟು ಓದಿ :