Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 17 ಡಿಸೆಂಬರ್ 2018 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಕಷ್ಟು ಜನರೊಂದಿಗೆ ಒಡನಾಟ ನಡೆಸುವಿರಿ. ಬಯಸಿದ ಕಾರ್ಯ ನಡೆಯುವುದು.
 
ವೃಷಭ: ಅವಿವಾಹಿತರಿಗೆ ವಿವಾಹ ಸೇರಿದಂತೆ ಮಂಗಲ ಕಾರ್ಯ ನೆರವೇರುವುದು. ಖರ್ಚು ವೆಚ್ಚಗಳು ಅಧಿಕವಾಗುವುದು.
 
ಮಿಥುನ: ಆರೋಗ್ಯದಲ್ಲಿ ವ್ಯತ್ಯಯವಾಗುವುದು. ಮನಸ್ಸಿಗೆ ಏನೋ ಅರಿಯದ ತಳಮಳ ಇರುವುದು. ಕೈ ಹಿಡಿದ ಕಾರ್ಯದಲ್ಲಿ ಲಾಭವಾಗದೇ ಇದ್ದರೂ ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಕಾಣುವಿರಿ.
 
ಕರ್ಕಟಕ: ಹಲವು ಕಾರ್ಯಕ್ರಮಗಳಿಗಾಗಿ ಖರ್ಚು ಮಾಡಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ ನಡೆಸುವಿರಿ. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.
 
ಸಿಂಹ: ಮಹಿಳೆಯರು ಮಾನಸಿಕ ಕಿರಿ ಕಿರಿ ಅನುಭವಿಸುವರು. ವೃತ್ತಿ ರಂಗದಲ್ಲಿ ಪ್ರಯತ್ನವಿದ್ದಲ್ಲಿ ಕಾರ್ಯಸಿದ್ಧಿ. ಕೊಂಚ ನಿರಾಶೆಯಾದರೂ ಪ್ರಯತ್ನ ಬಲದಿಂದ ಕೈ ಹಿಡಿದ ಕಾರ್ಯ ನೆರವೇರುವುದು.
 
ಕನ್ಯಾ: ದಂಪತಿ ನಡುವೆ ಪರಸ್ಪರ ವಿಶ್ವಾಸ, ಪ್ರೀತಿ ಹೆಚ್ಚಿ ನೆಮ್ಮದಿಯ ವಾತಾವರಣವಿರುವುದು. ದೇವರ ದರ್ಶನಕ್ಕೆ ತೆರಳುವಿರಿ. ಧನ ಲಾಭವಾಗಲಿದೆ.
 
ತುಲಾ: ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ ಇಂದು ಶುಭವಾರ್ತೆಯಿದೆ. ನಾನಾ ಮೂಲಗಳಿಂದ ಧನ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಶ್ಚಿಕ: ಅಂದುಕೊಂಡ ರೀತಿಯಲ್ಲಿ ಕೆಲಸ ನೆರವೇರದೇ ಇದ್ದಾಗ ತಾಳ್ಮೆ ಕಳೆದುಕೊಳ್ಳುವಿರಿ. ಆದರೆ ಆದಷ್ಟು ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಹಾಕಿಕೊಳ‍್ಳುವುದು ಅಗತ್ಯ. ದುಡುಕು ವರ್ತನೆಯಿಂದ ಸಿಕ್ಕ ಅವಕಾಶವನ್ನು ಕೈ ಚೆಲ್ಲಬೇಡಿ.
 
ಧನು: ದೇಹಾರೋಗ್ಯ ಸುಧಾರಿಸಿ ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಧನ ಲಾಭವಾಗಲಿದೆ. ದೂಋ ಸಂಚಾರ ಕೈಗೊಳ್ಳುವ ಯೋಗವಿದೆ.
 
ಮಕರ: ಯಾವತ್ತೋ ಮಾಡಬೇಕಿದ್ದ ಕೆಲಸಗಳನ್ನು ಇಂದು ಮಾಡಿ ಮುಗಿಸುವಿರಿ. ಇದರಿಂದ ನೆಮ್ಮದಿ ಕಾಣುವಿರಿ. ಆರೋಗ್ಯದ ಬಗ್ಗೆ ಕೊಂಚ ಜಾಗರೂಕತೆ ಅಗತ್ಯ.
 
ಕುಂಭ: ಮನಸ್ಸಿಗೆ ಕಿರಿ ಕಿರಿಯಾಗಿ ದೇವರ ದರ್ಶನಕ್ಕೆ ಮನಸ್ಸು ಮಾಡುವಿರಿ. ಕುಟುಂಬದಲ್ಲಿ ಸಂಗಾತಿಯ ವಿಶ್ವಾಸ ಗಳಿಸುವಿರಿ. ಇದರಿಂದಾಗಿ ನೆಮ್ಮದಿ ಸಿಗುವುದು.
 
ಮೀನ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆಯಿದೆ. ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸುವಿರಿ. ಆದರೆ ಹಿತಶತ್ರುಗಳ ಮಾತು ಕೇಳಿಬರಬೇಕಾದೀತು. ಹಾಗಿದ್ದರೂ ಅದಕ್ಕೆ ಕಿವಿಗೊಡಬೇಕಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        
ಇದರಲ್ಲಿ ಇನ್ನಷ್ಟು ಓದಿ :