Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 19 ಡಿಸೆಂಬರ್ 2018 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಕಾರ್ಯದ ನಿಮಿತ್ತ ವಿಪರೀತ ಓಡಾಟ ಮಾಡಿ ಆಯಾಸಗೊಳ್ಳುತ್ತೀರಿ. ಹಾಗಿದ್ದರೂ ಕಾರ್ಯಸಾಧನೆಗೆ ಅನುಕೂಲವಾದ ವಾತಾವರಣವಿರಲಿದೆ. ಮಕ್ಕಳ ವಿಚಾರದಲ್ಲಿ ಆಸಕ್ತಿ ತೋರಬೇಕಾಗುತ್ತದೆ.
 
ವೃಷಭ: ಹೊಸ ಕೆಲಸಗಳಿಗೆ ಹೂಡಿಕೆ ಮಾಡಿ ಲಾಭ ಗಳಿಸುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಸಂಚಾರದಲ್ಲಿ ಎಚ್ಚರಿಕೆಯಿರಲಿ.
 
ಮಿಥುನ: ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ಸಾರ್ವಜನಿಕವಾಗಿ ಗೌರವ, ಸ್ಥಾನ ಮಾನಗಳು ದೊರಕುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು.
 
ಕರ್ಕಟಕ: ಸಂಗಾತಿ ಜತೆ ರಸಮಯ ಕ್ಷಣ ಕಳೆಯುವಿರಿ. ವ್ಯವಹಾರ ಮಾಡುವಾಗ ಮೋಸ ವಂಚನೆಗೊಳಗಾಗುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು.
 
ಸಿಂಹ: ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಧನ ವಿನಿಯೋಗ ಮಾಡಬೇಕಾದೀತು. ವಂಚಕರ ಬಗ್ಗೆ ಎಚ್ಚರವಾಗಿರಿ. ಪ್ರಯತ್ನ ಬಲವಿದ್ದಲ್ಲಿ ಕಾರ್ಯ ಸಾಧನೆಯಾಗಲಿದೆ.
 
ಕನ್ಯಾ: ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿಭಾಯಿಸಿ. ತಾಳ್ಮೆಯೇ ನಿಮ್ಮ ಇಂದಿನ ಯಶಸ್ಸಿಗೆ ಮೂಲ ಕಾರಣವಾಗಲಿದೆ. ಉದ್ಯೋಗ ಲಾಭವೂ ಆಗಲಿದೆ.
 
ತುಲಾ: ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ಸಂಸಾರದಲ್ಲಿ ಹೊಂದಾಣಿಕೆ ಅಗತ್ಯ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
 
ವೃಶ್ಚಿಕ: ನಿರೀಕ್ಷಿಸದೇ ಇದ್ದ ಅಚ್ಚರಿಯ ವಾರ್ತೆಯೊಂದನ್ನು ಕೇಳುವಿರಿ. ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುವಿರಿ. ಕುಟುಂಬದ ಸದಸ್ಯರೊಂದಿಗೆ ಸಹನೆಯಿಂದ ವರ್ತಿಸಿ.
 
ಧನು: ಕಾರ್ಯ ಸಾಧನೆಗಾಗಿ ದೂರ ಸಂಚಾರ ಕೈಗೊಳ್ಳುವಿರಿ. ಧನ ವ್ಯಯ ಮಾಡಬೇಕಾದೀತು. ದೇವತಾ ದರ್ಶನದಿಂದ ನೆಮ್ಮದಿ ಕಾಣುವಿರಿ.
 
ಮಕರ: ಸಂಗಾತಿ ಜತೆಗೆ ಹೊಂದಾಣಿಕೆ ಅಗತ್ಯ. ವೃತ್ತಿಯಲ್ಲಿ ವಂಚನೆಗೊಳಗಾಗುವ ಸಂಭವವಿದೆ. ಎಚ್ಚರದಿಂದ ವರ್ತಿಸಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕುಂಭ: ಮಂಗಲ ಕಾರ್ಯ ಕೈಗೊಳ್ಳಲು ಮುಂದಾಗುವಿರಿ. ದೇವರ ದರ್ಶನ ಪಡೆಯುವಿರಿ. ಕುಟುಂಬದ ಯಾರಾದರೂ ಒಬ್ಬರಿಂದ ದುಃಖದ ವಾರ್ತೆ ಕೇಳಬೇಕಾದೀತು.
 
ಮೀನ: ದೇವರ ಕಾರ್ಯಗಳಿಗಾಗಿ ದೂರ ಸಂಚಾರ ಮಾಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಸಿಗಲಿದೆ. ಬೇಡದ ಆಲೋಚನೆಗಳನ್ನು ಮನಸ್ಸಲ್ಲಿ ತುಂಬಿಕೊಂಡು ನೆಮ್ಮದಿ ಹಾಳುಮಾಡಬೇಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        
ಇದರಲ್ಲಿ ಇನ್ನಷ್ಟು ಓದಿ :