Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 23 ಡಿಸೆಂಬರ್ 2018 (09:22 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಮಕ್ಕಳ ಆರೋಗ್ಯದ ವಿಚಾರಕ್ಕೆ ತಲೆಕೆಡಿಸಿಕೊಳ್ಳುತ್ತೀರಿ. ಮನೆಯಲ್ಲಿ ಕಿರಿ ಕಿರಿಯ ವಾತಾವರಣವಿರುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಷಭ: ಸಮಾಧಾನದಿಂದ ಕೆಲಸ ಕಾರ್ಯಗಳನ್ನು ಕೈಗೊಂಡರೆ ನಿಶ್ಚಿತ ಜಯ. ಕುಲದೇವರ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದರೆ ಶುಭ ಫಲ.
 
ಮಿಥುನ: ಹೊಸ ಪ್ರಯತ್ನಗಳಿಗೆ ಕೈ ಹಾಕುವಿರಿ. ಆದರೆ ಆರಂಭದಲ್ಲಿ ವಿಘ್ನಗಳಿದ್ದು, ದೇವತಾ ಪ್ರಾರ್ಥನೆಯಿಂದ ವಿಘ್ನಗಳು ದೂರವಾಗಿ ಒಳಿತಾಗುವುದು.
 
ಕರ್ಕಟಕ: ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ. ಹಣಕಾಸಿನ ವಿಚಾರದಲ್ಲಿ ಗೊತ್ತಿರುವವರೇ ಮೋಸ ಮಾಡುವ ಸಾಧ್ಯತೆಯಿದೆ. ಸಂಗಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಿರಿ.
 
ಸಿಂಹ: ಹೆತ್ತವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಸಂಗಾತಿಯೊಡನೆ ಕಿರಿ ಕಿರಿ ಮಾಡಿಕೊಳ್ಳುತ್ತೀರಿ. ಹಾಗಿದ್ದರೂ ದಿನದಂತ್ಯಕ್ಕೆ ಶುಭ ಪ್ರಾಪ್ತಿ.
 
ಕನ್ಯಾ: ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವಿರುವುದಿಲ್ಲ. ಯಾವುದೇ ಕೆಲಸಗಳಿಗೆ ಕೈ ಹಾಕುವ ಮೊದಲು ಹಿರಿಯರ ಸಲಹೆ ಕೇಳಿ ಮುನ್ನಡೆಯಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.
 
ತುಲಾ: ಹೆಚ್ಚುವರಿ ಕೆಲಸಗಳಿಗಾಗಿ ದೂರ ಸಂಚಾರ ಮಾಡಬೇಕಾದೀತು. ವಾಹನ ಚಾಲಕರು ಎಚ್ಚರವಾಗಿರಿ. ಬ್ಯಾಂಕ್ ನೌಕರರಿಗೆ ಶುಭ ದಿನ.
 
ವೃಶ್ಚಿಕ: ಯಾರಿಗೂ ಕೇಡುಬಯಸದ ನಿಮ್ಮ ಸ್ವಭಾವ ನಿಮ್ಮನ್ನು ಕಾಪಾಡಲಿದೆ. ಶುಭ ಮಂಗಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ ಸಿಗಲಿದೆ.
 
ಧನು: ಇಂದಿನ ಮಟ್ಟಿಗೆ ದೂರ ಪ್ರಯಾಣ ಮಾಡದೇ ಇರುವುದೇ ಒಳ್ಳೆಯದು. ಖರ್ಚುಗಳು ಅಧಿಕವಾಗಿದ್ದರೂ ಅಷ್ಟೇ ಆದಾಯವೂ ಸಿಗುವುದು. ದೇವರ ದರ್ಶನ ಮಾಡಿ.
 
ಮಕರ: ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ. ಮಕ್ಕಳಿಂದ ಯಾವುದಾದರೂ ಕಾರಣಕ್ಕೆ ಸಂತಸ ಸಿಗುತ್ತದೆ. ಸಂಗಾತಿಯ ಸಹಕಾರದಿಂದ ಕಾರ್ಯ ಸಿದ್ಧಿ.
 
ಕುಂಭ: ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ. ಹೊಸಬರೊಂದಿಗೆ ವ್ಯವಹರಿಸುವ ಮುನ್ನ ಎಚ್ಚರಿಕೆ ಅಗತ್ಯ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ಅಶಕ್ತರಿಗೆ ದಾನ ಮಾಡುವುದರಿಂದ ಒಳಿತಾಗುವುದು.
 
ಮೀನ: ಅನಿರೀಕ್ಷಿತ ಬಂಧುಗಳು, ಆಪ್ತ ಮಿತ್ರರ ಆಗಮನದಿಂದ ಸಂತಸದ ಕ್ಷಣಗಳನ್ನು ಕಳೆಯುವಿರಿ. ಪ್ರವಾಸ ಮಾಡಲು ಯೋಜನೆ ರೂಪಿಸುವಿರಿ. ಆದರೆ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              


ಇದರಲ್ಲಿ ಇನ್ನಷ್ಟು ಓದಿ :