Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 4 ಜನವರಿ 2019 (09:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ವೃತ್ತಿ ರಂಗದಲ್ಲಿ ಒತ್ತಡದ ಕೆಲಸ ಕಾರ್ಯಗಳು ಮುಂದುವರಿಯಲಿವೆ. ಎದುರಾಗುವಂತಹ ತೊಂದರೆಗಳನ್ನು ನಿವಾರಿಸಿಕೊಂಡು ಮುಂದುವರಿಯಬೇಕಿದೆ.
 
ವೃಷಭ: ಕೈಗೊಳ್ಳುವ ವ್ಯವಹಾರಗಳಲ್ಲಿ ಯಶಸ್ಸು ಸಿಕ್ಕಿ ಆರ್ಥಿಕ ಲಾಭ ಸಿಗುತ್ತದೆ. ಹಿರಿಯರನ್ನು ಪುಣ್ಯ ಕ್ಷೇತ್ರಗಳಿಗೆ ಕರೆದೊಯ್ಯುವಿರಿ. ಅನಿರೀಕ್ಷಿತವಾಗಿ ಬರುವ  ಅತಿಥಿಗಳಿಂದ ಶುಭ ಸುದ್ದಿ.
 
ಮಿಥುನ: ಉದ್ಯೋಗದಲ್ಲಿ ನೀವು ಬಯಸಿದ ವಾತಾವರಣವಿರುತ್ತದೆ. ಆದರೆ ಕುಟುಂಬದಲ್ಲಿ ಕೆಲವೊಂದು ವಿಚಾರಕ್ಕೆ ಭಿನ್ನಾಬಿಪ್ರಾಯ ಮಾಡಿಕೊಳ್ಳುವಿರಿ. ಇದರಿಂದ ಮನಸ್ಸಿಗೆ ನೆಮ್ಮದಿ ಇರದು.
 
ಕರ್ಕಟಕ: ಅವಿವಾಹಿತರಿಗೆ ವಿವಾಹ ಭಾಗ್ಯ. ಶುಭ ಕಾರ್ಯಗಳನ್ನು ನೆರವೇರಿಸುವಿರಿ. ಸಾಮಾಜಿಕವಾಗಿ ನಿಮಗೆ ಸಿಗಬೇಕಾದ ಗೌರವ, ಸ್ಥಾನ ಮಾನ ಸಿಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.
 
ಸಿಂಹ: ಆರೋಗ್ಯದಲ್ಲಿ ಏರುಪೇರಾಗಬಹುದು. ಆರೋಗ್ಯ ವಿಚಾರಕ್ಕೆ ಖರ್ಚು ವೆಚ್ಚಗಳು ಅಧಿಕವಾಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಬಾಯ್ತಪ್ಪಿ ಆಡುವ ಮಾತಿನಿಂದ ಸಂಬಂಧ ಹಾಳಗಾಬಹುದು. ಎಚ್ಚರಿಕೆಯಿರಲಿ.
 
ಕನ್ಯಾ: ಕಷ್ಟಗಳು ಎದುರಾದರೂ ಮಿತ್ರರ ಸಹಕಾರ ಸಿಕ್ಕಿ ಕಾರ್ಯ ಸಾಧನೆಯಾಗಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು. ಕುಟುಂಬದವರ ಸಲಹೆ ಪಡೆದು ಕಾರ್ಯ ಕ್ಷೇತ್ರದಲ್ಲಿ ಮುಂದುವರಿಯಿರಿ.
 
ತುಲಾ: ಹೊಸ ಉದ್ದಿಮೆಗೆ ಕೈ ಹಾಕಲು ಹೇಳಿ ಮಾಡಿಸಿದ ಕಾಲ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು. ಸಂಗಾತಿಯ ಪ್ರೀತಿ ನಿಮ್ಮ ಉತ್ಸಾಹ ಇಮ್ಮಡಿಗೊಳಿಸಲಿದೆ. ಆರ್ಥಿಕ ಲಾಭ ಸಿಗುತ್ತದೆ.
 
ವೃಶ್ಚಿಕ: ಉದ್ಯೋಗದಲ್ಲಿ ಯಶಸ್ಸು ಸಿಕ್ಕಿ, ಬಡ್ತಿಯೂ ಸಿಗುತ್ತದೆ. ಖಾಸಗಿ ಉದ್ಯೋಗಿಗಳಿಗೆ ಶುಭ ದಿನ. ನಿರುದ್ಯೋಗಿಗಳಿಗೆ ಪ್ರಯತ್ನಬಲ ಅಗತ್ಯ. ದೇವರ ಪ್ರಾರ್ಥನೆ ಮಾಡಿ.
 
ಧನು: ಅನಗತ್ಯವಾಗಿ ಕೆಟ್ಟ ಮಾತು ಕೇಳಿಬಂದೀತು. ದೃತಿಗೆಡಬೇಡಿ. ಕ್ರಿಯಾಶೀಲ ಕೆಲಸ ಮಾಡುವವರಿಗೆ ಯಶಸ್ಸು ಸಿಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಆಸ್ಪತ್ರೆಗೆ ಅಲೆದಾಡಬೇಕಾದೀತು.
 
ಮಕರ: ವಿದ್ಯಾರ್ಥಿಗಳಿಗೆ ಯಶಸ್ಸು, ಉದ್ಯೋಗಿಗಳಿಗೆ ನಿರೀಕ್ಷಿತ ಮುನ್ನಡೆ ಸಿಕ್ಕೀತು. ಆರ್ಥಿಕವಾಗಿ ಇದ್ದ ಕಷ್ಟಗಳು ದೂರವಾಗಿ ಚೇತರಿಕೆ ಕಂಡುಬಂದೀತು. ಹೊಸ ವಾಹನ, ವಸ್ತು ಖರೀದಿಗೆ ಮುಂದಾಗುವಿರಿ.
 
ಕುಂಭ: ಅಂದುಕೊಂಡ ಕಾರ್ಯಗಳು ನೆರವೇರುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಹಿತಶತ್ರುಗಳ ಕಾಟ ಇರುವುದು. ಅತಿಯಾದ ನಂಬಿಕೆ ಯಾರಲ್ಲೂ ಇಡಬೇಡಿ.
 
ಮೀನ: ಮಹಿಳೆಯರಿಂದ ಶುಭ ಸುದ್ದಿ ಕೇಳುತ್ತೀರಿ. ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿ ಕಾಣುವಿರಿ. ಆದರೆ ಖರ್ಚು ವೆಚ್ಚಗಳು ಮಿತಿ ಮೀರಲಿವೆ. ಹೆಚ್ಚಿನ ಕಾಳಜಿ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              


ಇದರಲ್ಲಿ ಇನ್ನಷ್ಟು ಓದಿ :