Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಮಂಗಳವಾರ, 8 ಜನವರಿ 2019 (09:14 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಸಾಂಸಾರಿಕವಾಗಿ ಕಿರಿ ಕಿರಿ ತಪ್ಪದು. ಮಕ್ಕಳ ಕಾರಣಕ್ಕೆ ಸಂಗಾತಿ ಜತೆ ಕಲಹ. ತಾಳ್ಮೆಯಿಂದ ನಿಭಾಯಿಸಿದರೆ ಎಲ್ಲರಿಗೂ ನೆಮ್ಮದಿ. ಆಪ್ತೇಷ್ಟರ ಸಹಕಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.
 
ವೃಷಭ: ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದು ಆಸ್ಪತ್ರೆಗೆ ಅಲೆದಾಡಬೇಕಾದೀತು. ಉದ್ಯೋಗದಲ್ಲಿ ಮುನ್ನಡೆಯ ಸಂಭವವಿದೆ. ಖರ್ಚು ವೆಚ್ಚಗಳು ಅಧಿಕವಾದೀತು.  
 
ಮಿಥುನ: ದೊಡ್ಡ ಗಂಡಾಂತರವೊಂದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗುವಿರಿ. ಮಂಗಲ ಕಾರ್ಯಗಳನ್ನು ನೆರವೇರಿಸುವಿರಿ. ಅವಿವಾಹಿತರಿಗೆ ಕಂಕಣ ಬಲ ಒದಗಿ ಬರಲಿದೆ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
 
ಕರ್ಕಟಕ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬಂದು ಹೆಮ್ಮೆಯಾದೀತು. ಮಿತ್ರರ ಸಹಕಾರದಿಂದ ದೊಡ್ಡ ಅಪಾಯಗಳು ಕಳೆದುಹೋಗಲಿವೆ. ಅನಿರೀಕ್ಷಿತ ಧನಾಗಮನವಾದೀತು. ಆದರೆ ಖರ್ಚುಗಳು ಮಿತಿ ಮೀರದಂತೆ ಎಚ್ಚರವಹಿಸಿ.
 
ಸಿಂಹ: ಸರ್ಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡವಿರಲಿದೆ. ಮನೆ ವಸ್ತುಗಳು, ವಾಹನ ಖರೀದಿಗಾಗಿ ಧನವ್ಯಯ ಮಾಡುವಿರಿ. ವಿದ್ಯಾರ್ಥಿಗಳು ಕೊಂಚ ನಿರಾಸೆ ಎದುರಿಸಬೇಕಾದೀತು. ದೇವತಾ ಪ್ರಾರ್ಥನೆ ಮಾಡಿ.
 
ಕನ್ಯಾ: ಸಮಾಧಾನದಿಂದ ಮುಂದುವರಿದರೆ ಯಶಸ್ಸು ಸಿಗುತ್ತದೆ. ಹಿತ ಶತ್ರುಗಳಿಂದ ವಂಚನೆಗೊಳಗಾಗುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಯಾರನ್ನೂ ಅತಿಯಾಗಿ ನಂಬುವುದು ಬೇಡ. ದಿನದಂತ್ಯಕ್ಕೆ ಶುಭ ಸುದ್ದಿ.
 
ತುಲಾ: ಬಹುದಿನಗಳಿಂದ ಬಾಕಿಯಿದ್ದ ಸಾಲ ಮರುಪಾವತಿಯಾಗಲಿದೆ. ಬಂಧುಮಿತ್ರರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ. ಬಾಯ್ತಪ್ಪಿ ಆಡುವ ಮಾತುಗಳು ಸಂಬಂಧ ಹಾಳು ಮಾಡಬಹುದು. ದೇವರ ದರ್ಶನ ಮಾಡುವಿರಿ.
 
ವೃಶ್ಚಿಕ: ಮನೆಯಲ್ಲಿ ಶುಭಮಂಗಲ ಕಾರ್ಯ ನೆರವೇರಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಮುನ್ನಡೆ ಸಿಗದು. ವ್ಯವಹಾರದಲ್ಲಿ ಕೊಂಚ ಅಡೆತಡೆ ತೋರಿಬಂದೀತು. ಆದರೆ ದಿನದಂತ್ಯಕ್ಕೆ ಎಲ್ಲವೂ ಶುಭವಾಗಲಿದೆ.
 
ಧನು: ನಿಮ್ಮ ಮಾತೇ ನಿಮಗೆ ಶತ್ರುವಾಗಲಿದೆ. ಮನೆ ಒಳಗೆ ಕಿರಿ ಕಿರಿ ವಾತಾವರಣವಿರುತ್ತದೆ. ಅನಿರೀಕ್ಷಿತವಾಗಿ ಆರ್ಥಿಕ ಲಾಭ ಗಳಿಸುತ್ತೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಭ್ಯಾಸದಲ್ಲಿ ತೊಡಗಬೇಕು.
 
ಮಕರ: ಅನವಶ್ಯಕವಾಗಿ ನಿಮ್ಮ ಬಾಯ್ತಪ್ಪಿನಿಂದ ಆಗುವ ಅನಾಹುತಗಳು ಸಂಬಂಧದಲ್ಲಿ ಬಿರುಕಿಗೆ ಕಾರಣವಾಗುತ್ತದೆ. ಉದ್ಯೋಗದಲ್ಲಿ ಪ್ರಾಮಾಣಿಕತೆ ತೋರುವಿರಿ. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು.
 
ಕುಂಭ: ಹೊಸ ಕೆಲಸ ಕಾರ್ಯಗಳನ್ನು ಮಾಡುವಾಗ ದುಡುಕದಿರಿ. ಮನೆಯವರ ಅಭಿಪ್ರಾಯ ಆಲಿಸಿ ಮುಂದುವರಿಯಿರಿ. ಆರೋಗ್ಯ ಸಮಸ್ಯೆಗಳು ದೂರವಾಗಲಿವೆ. ಆರ್ಥಿಕವಾಗಿ ಲಾಭ ಪಡೆಯುವಿರಿ.
 
ಮೀನ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಪ್ರೇಮಿಗಳಿಗೆ ಶುಭ ವಾರ್ತೆ. ಕೆಲಸದಲ್ಲಿ ಉದಾಸೀನತೆ ಮಾಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          


ಇದರಲ್ಲಿ ಇನ್ನಷ್ಟು ಓದಿ :