Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 9 ಜನವರಿ 2019 (08:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾದೀತು. ಹಣಕಾಸಿನ ಮುಗ್ಗಟ್ಟು ತೋರಿಬಂದೀತು. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಹಣಕಾಸಿನ ವಿಚಾರದಲ್ಲಿ ಹಿಡಿತ ಅಗತ್ಯ.
 
ವೃಷಭ: ಕೋರ್ಟು ಕಚೇರಿ ಕೆಲಸಗಳಿಗೆ ಅಲೆದಾಡಬೇಕಾಗುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಯಿದೆ. ದೇವತಾ ಆರಾಧನೆಯಿಂದ ಅಂದುಕೊಂಡ ಕಾರ್ಯಗಳು ನೆರವೇರಲಿವೆ.
 
ಮಿಥುನ: ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದೂರ ಸಂಚಾರ ಯೋಗವಿದೆ. ಮಿತ್ರರಿಗೆ ತೊಂದರೆಯ ಸಮಯದಲ್ಲಿ ಸಹಾಯ ಮಾಡುವಿರಿ. ಕಾರ್ಯದೊತ್ತಡಗಳು ಇದ್ದರೂ ಜಯ ಸಿಗುತ್ತದೆ.
 
ಕರ್ಕಟಕ: ಧನಲಾಭವಾಗಲಿದ್ದು, ಹೊಸ ವಸ್ತು, ಆಭರಣ, ವಾಹನ ಖರೀದಿಗೆ ಮುಂದಾಗುವಿರಿ. ಉದ್ಯೋಗದಲ್ಲಿ ಕೊಂಚ ಕಿರಿ ಕಿರಿ ಇದ್ದೀತು. ಆದರೆ ವಿದ್ಯಾರ್ಥಿಗಳ ಮಟ್ಟಿಗೆ ಶುಭ ದಿನ. ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದ್ದೇ ಇರುತ್ತದೆ.
 
ಸಿಂಹ: ಉದ್ಯೋಗದಲ್ಲಿ ಮುನ್ನಡೆ ಹೊಂದಿ ಆರ್ಥಿಕ ಲಾಭ ಗಳಿಸುತ್ತೀರಿ. ಮಿತ್ರರೊಡನೆ ಪ್ರವಾಸ ಕೈಗೊಳ್ಳುವಿರಿ. ಕುಲದೇವರ ದರ್ಶನ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನವಿಲ್ಲದೇ ಫಲ ದೊರೆಯದು.
 
ಕನ್ಯಾ: ಯಾವುದೇ ಕೆಲಸ ಮಾಡುವುದಿದ್ದರೂ ಸಂಗಾತಿಯ ಒಪ್ಪಿಗೆ ಪಡೆದು ಮುಂದುವರಿಯಿರಿ. ಉದ್ಯೋಗದಲ್ಲಿ ಬಡ್ತಿ ಸಿಗಲಿದ್ದು, ಧನ ಲಾಭವಾಗಲಿದೆ. ಮೇಲಧಿಕಾರಿಗಳೊಂದಿಗೆ ಕೊಂಚ ಸಹನೆಯಿಂದ ವರ್ತಿಸಿ.
 
ತುಲಾ: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವರು. ಅಂದುಕೊಂಡ ಕಾರ್ಯಗಳು ನೆರವೇರಲಿವೆ. ಉದ್ಯೋಗದಲ್ಲೂ ಸಹೋದ್ಯೋಗಿಗಳಿಂದ ಸಹಕಾರ ದೊರೆಯುವುದು. ವ್ಯವಹಾರದಲ್ಲಿ ಲಾಭ ಗಳಿಸುವಿರಿ.
 
ವೃಶ್ಚಿಕ: ಆರ್ಥಿಕ ಲಾಭವಾಗಲಿದ್ದು, ಆಸ್ತಿ ಖರೀದಿಗೆ ಮನಸ್ಸು ಮಾಡುವಿರಿ. ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಬೇಕಾದೀತು. ಅಪವಾದದ ಭೀತಿಯೂ ಇದೆ. ಇತರರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಬೇಡದ ವಾದ ವಿವಾದಕ್ಕೆ ತಲೆ ತೂರಿಸಲು ಹೋಗಬೇಡಿ.
 
ಧನು: ಉದ್ಯೋಗದಲ್ಲಿ ನೀವು ಅಂದುಕೊಂಡ ಪ್ರಗತಿ ದೊರೆತು ಸಂತಸವಾಗಲಿದೆ. ಖರ್ಚು ಇದ್ದಷ್ಟೇ ಆದಾಯವೂ ಇದ್ದೀತು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದೀತು. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಮೂಡುವುದು.
 
ಮಕರ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಶುಭ ದಿನ. ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಆದರೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ.
 
ಕುಂಭ: ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡೆತಡೆಗಳು ಕಂಡುಬಂದೀತು. ಉದ್ಯೋಗದಲ್ಲಿ ಕೊಂಚ ಹಿನ್ನಡೆ ಅನುಭವಿಸಬೇಕಾದೀತು. ಮೌನವಾಗಿದ್ದಷ್ಟೂ ನಿಮಗೇ ಒಳ್ಳೆಯದು. ದುಡುಕಿನ ವರ್ತನೆಯಿಂದ ಅನಾಹುತ ತಂದುಕೊಳ್ಳಬೇಡಿ.
 
ಮೀನ: ಎಷ್ಟೋ ದಿನಗಳಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ಕಾರ್ಯದೊತ್ತಡ ಹೆಚ್ಚಾಗಲಿದೆ. ಆದರೆ ಕುಟುಂಬದವರ, ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಲಭವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        
ಇದರಲ್ಲಿ ಇನ್ನಷ್ಟು ಓದಿ :