Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 16 ಜನವರಿ 2019 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಅವಿವಾಹಿತರಿಗೆ ವಿವಾಹಕ್ಕಾಗಿ ಮನಸ್ಸಿಗೆ ಒಪ್ಪಿಗೆಯಾಗುವ ಮದುವೆ ಪ್ರಸ್ತಾಪಗಳು ಬರುವುದು. ವೃತ್ತಿಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಮುನ್ನಡೆ.
 
ವೃಷಭ: ಮನೆ ಸಂಬಂಧವಾಗಿ ಹಲವು ಹೊಸ ಖರ್ಚುವೆಚ್ಚಗಳು ತಲೆದೋರಿದಾವು. ಆದರೆ ಆರ್ಥಿಕವಾಗಿಯೂ ಅಷ್ಟೇ ಆದಾಯವಿರುತ್ತದೆ. ವಾಸ ಸ್ಥಳ ಬದಲಾವಣೆ ಮಾಡುವಿರಿ.
 
ಮಿಥುನ: ಸಾಲಗಾರರ ಕಾಟದಿಂದ ಹೈರಾಣಾಗುವಿರಿ. ಸಂಗಾತಿಯೊಂದಿಗೆ ಮನಸ್ತಾಪವಾಗುವುದರಿಂದ ಮನೆ ವಾತಾವರಣ ಹಾಳಾಗುವುದು. ಕಾರ್ಯಕ್ಷೇತ್ರದಲ್ಲಿ ಬೇಡದ ವಿಚಾರಗಳು ನಿಮ್ಮನ್ನು ಕಾಡಲಿವೆ. ಎಚ್ಚರಿಕೆಯಿಂದ ಇರುವುದು ಉತ್ತಮ.
 
ಕರ್ಕಟಕ: ನೀವು ಹೇಳಿದಂತೆ ಮಕ್ಕಳು ಕೇಳುತ್ತಿಲ್ಲ ಎಂದು ಮನಸ್ಸಿಗೆ ಬೇಸರ ಮಾಡಿಕೊಳ್ಳುತ್ತೀರಿ. ಉದ್ಯೋಗದಲ್ಲಿ ಕೊಂಚ ಅಡೆತಡೆ ತೋರಿಬಂದೀತು. ಆದರೆ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಅನಾರೋಗ್ಯ  ಸಮಸ್ಯೆ ಎದುರಾಗುವುದು.
 
ಸಿಂಹ: ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು. ಬಯಸಿದ ಉದ್ಯೋಗ ಸಿಗದ ಬೇಸರ ಕಾಡುವುದು. ದೇವತಾ ಆರಾಧನೆ ಮಾಡಿ.
 
ಕನ್ಯಾ: ಆರ್ಥಿಕವಾಗಿ ಸಮಾಧಾನಕರ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ವ್ಯವಹಾರ ಮಾಡುವವರಿಗೆ ನಷ್ಟ ಸಾಧ್ಯತೆ.  ಅನಿರೀಕ್ಷಿತವಾಗಿ ಅತಿಥಿಗಳ ಆಗಮನ.
 
ತುಲಾ: ವೃತ್ತಿಯಲ್ಲಿ ಪ್ರಶಂಸೆ ಸಿಗಲಿದೆ. ಸ್ಥಾನ ಮಾನ ಉನ್ನತವಾಗಲಿದೆ. ಮನೆಯಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಕೆಲಸಕ್ಕೆ ಕೈ ಹಾಕಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಆರ್ಥಿಕ ಲಾಭವಾಗಲಿದೆ.
 
ವೃಶ್ಚಿಕ: ವಾಯು ಪ್ರಕೃತಿ ಶರೀರದವರಾದರೆ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಎದುರಿಸಬೇಕಾದೀತು. ಸಾಲಗಾರರ ಕಿರಿ ಕಿರಿ ಇರಲಿದೆ. ನಿರೀಕ್ಷಿತ ಲಾಭಾಂಶವಿರದೇ ಮನಸ್ಸಿಗೆ ಬೇಸರ ಮೂಡುವುದು.
 
ಧನು: ಕುಲದೇವರಿಗೆ ಸಂಬಂಧಿಸಿದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರೆ ಶುಭವಾಗುತ್ತದೆ. ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾದೀತು. ಉದ್ಯಮಿಗಳಿಗೆ ಲಾಭ ಸಿಗಲಿದೆ. ದೂರ ಸಂಚಾರ ಸಾಧ್ಯತೆಯಿದೆ.
 
ಮಕರ: ಪರಿಶ್ರಮದಿಂದ ಹೊಸ ಕೆಲಸ ಆರಂಭಿಸಿದರೆ ಲಾಭ ಪಡೆಯುತ್ತೀರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ಇಷ್ಟು ದಿನ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆ ಸುಧಾರಿಸುವುದು. ದಿನದಂತ್ಯಕ್ಕೆ ಮತ್ತಷ್ಟು ಶುಭ ಫಲ ಕಾಣುವಿರಿ.
 
ಕುಂಭ: ದಾಯಾದಿಗಳೊಂದಿಗಿನ ಕಲಹಕ್ಕೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ಸಂಗಾತಿ ಜತೆಗೆ ಕೌಟುಂಬಿಕ ವಿಚಾರಕ್ಕೆ ಕಿರಿ ಕಿರಿ ಆಗುವುದು. ಆದರೂ ಧನಲಾಭ ಯೋಗವಿದೆ.
 
ಮೀನ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ. ಆದರೆ ಅಷ್ಟೇ ಖರ್ಚೂ ಇರುವುದು. ವೃತ್ತಿಯಲ್ಲಿ ಅಧಿಕಾರಿ ವರ್ಗದವರ ಸಹಕಾರದಿಂದ ಮುನ್ನಡೆ ಸಾಧಿಸುತ್ತೀರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              


ಇದರಲ್ಲಿ ಇನ್ನಷ್ಟು ಓದಿ :