ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಳೆಯ ಸಂಬಂಧವೊಂದು ಹುಡುಕಿಕೊಂಡು ಬರಲಿದೆ. ಉದ್ದಿಮೆದಾರರಿಗೆ ಲಾಭದಾಯಕ ದಿನ. ಕುಟುಂಬದಲ್ಲಿ ಬಂಧು ಮಿತ್ರರ ಆಗಮನದಿಂದ ಸಂತಸ ನೆಲೆಯಾಗಲಿದೆ.ವೃಷಭ: ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಧನಾಗಮನವಾದಷ್ಟೇ ಖರ್ಚೂ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು. ದೂರ ಸಂಚಾರದಲ್ಲಿ ಎಚ್ಚರಿಕೆ.ಮಿಥುನ: ಹಳೇ ಬಾಕಿಗಳು ಪಾವತಿಯಾಗುವುದು. ಆರ್ಥಿಕವಾಗಿ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಅಡೆತಡೆಗಳು ತೋರಿಬಂದೀತು. ಸಹೋದ್ಯೋಗಿಗಳ ಅಸಹಕಾರ ಅನುಭವಕ್ಕೆ