ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಕಿರಿ ಕಿರಿ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಕಾರ್ಯದೊತ್ತಡ ಹೆಚ್ಚಾಗುವುದು. ದೃಢ ನಿಲುವಿನಿಂದ ಮುಂದುವರಿಯಬೇಕಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿರುತ್ತದೆ.ವೃಷಭ: ಪ್ರಯತ್ನಬಲವಿಲ್ಲದೇ ಉದ್ಯೋಗದಲ್ಲಿ ನಿರೀಕ್ಷಿತ ಮುನ್ನಡೆ ಲಭಿಸದು. ಆದರೆ ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚುವುದು. ಪ್ರಶಂಸೆಗೊಳಗಾಗುವಿರಿ. ಮನೆಯವರೊಂದಿಗೆ ಕಲಹ ಮಾಡಿಕೊಳ್ಳದಂತೆ ಎಚ್ಚರವಹಿಸಿ.ಮಿಥುನ: ನೆಂಟರೊಡನೆ ವಾಗ್ವಾದಕ್ಕಿಳಿಯಬೇಕಾದೀತು. ಆದರೆ ನಿಮ್ಮ ಕಾರ್ಯಶೀಲತೆಯನ್ನು ಸಮಾಜ ಗುರುತಿಸಲಿದೆ. ವಿನಾಕಾರಣ ಹತ್ತಿರದವರನ್ನೇ ಸಂಶಯಿಸುವ ಅಭ್ಯಾಸ ಬಿಡಿ.