ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವೃತ್ತಿ ಜೀವನದಲ್ಲಿ ಎಷ್ಟೋ ದಿನದಿಂದ ಇದ್ದ ಗೊಂದಲಗಳು ಇಂದು ನಿವಾರಣೆಯಾಗುವುದು. ಅಧಿಕಾರಿ ವರ್ಗದವರಿಂದ ಕಿರಿ ಕಿರಿ ಇದ್ದರೂ ನಿಮ್ಮ ಏಳಿಗೆಯನ್ನು ತಡೆಯಲಾಗದು. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವುದು.ವೃಷಭ: ಆರ್ಥಿಕ ಲಾಭವಾಗಿ ಸಾಲಬಾಧೆಗಳು ನಿವಾರಣೆಯಾಗುವುದು. ಕುಟುಂಬದಲ್ಲಿ ಕೆಲವೊಂದು ವಿಚಾರಕ್ಕೆ ಭಿನ್ನಾಭಿಪ್ರಾಯಗಳಿದ್ದರೂ ಮಂಗಲ ಕಾರ್ಯ ನೆರವೇರಿಸುವಿರಿ. ಆರೋಗ್ಯದಲ್ಲೂ ಸುಧಾರಣೆಯಾಗಲಿದೆ.ಮಿಥುನ: ಹೊಸ ವ್ಯವಹಾರಕ್ಕೆ ಕೈ ಹಾಕುವುದಿದ್ದರೆ ಇಂದು ಅಷ್ಟೊಂದು ಒಳ್ಳೆಯ ದಿನವಲ್ಲ.