ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 24 ಜನವರಿ 2019 (09:04 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ವ್ಯಾಪಾರ, ವ್ಯವಹಾರ ಆರಂಭಿಸಿದರೆ ಉತ್ತಮ ಲಾಭ ಪಡೆಯುವಿರಿ. ಉದ್ಯೋಗದಲ್ಲಿ ಸ್ಥಾನ ಮಾನ ಹೆಚ್ಚುವುದು. ಆದರೆ ಕುಟುಂಬದಲ್ಲಿ ಸಂಗಾತಿಯೊಡನೆ ಭಿನ್ನಾಭಿಪ್ರಾಯ ತಪ್ಪಿದ್ದಲ್ಲ. ಬೇಡದ ಅಪವಾದಿಂದ ಮನಸ್ಸು ಬೇಸರಗೊಳ್ಳುವುದು.
 
ವೃಷಭ: ಹಿರಿಯರು ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳಲು ಸಿದ್ಧತೆ ಮಾಡುವಿರಿ. ಹೊಸ ವಸ್ತು ಖರೀದಿ ಮಾಡುವಿರಿ. ಅವಿವಾಹಿತರಿಗೆ ಹೊಸ ಸಂಬಂಧಗಳು ಬರುವುದು. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತ ಅಗತ್ಯ.
 
ಮಿಥುನ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಆರೋಗ್ಯ ಹದಗೆಟ್ಟು ಮನಸ್ಸಿಗೆ ಬೇಸರವೆನಿಸುವುದು. ಉದ್ಯೋಗದಲ್ಲಿ ವರ್ಗಾವಣೆಯ ಯೋಗವಿದೆ. ದಿನದಂತ್ಯಕ್ಕೆ ಶುಭ ಸುದ್ದಿಯೊಂದು ಬರಲಿದೆ.
 
ಕರ್ಕಟಕ: ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದಾದರೂ ಮನಸ್ಸಿಗೆ ಹಿಡಿಸದು. ಕುಟುಂಬ ವಿಚಾರದಲ್ಲಿ ಮಡದಿಯ ಸಲಹೆ ಪಡೆದು ಮುನ್ನಡೆಯಿರಿ. ಆಗಾಗ ಆರ್ಥಿಕವಾಗಿ ಹೆಚ್ಚು ಖರ್ಚು ವೆಚ್ಚಗಳಾಗುವುದರಿಂದ ಹಣಕಾಸಿನ ಮುಗ್ಗಟ್ಟು ಎದುರಿಸುವಿರಿ.
 
ಸಿಂಹ: ಮನೆ ವಿಚಾರಕ್ಕೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಉದ್ಯೋಗ, ವ್ಯವಹಾರದಲ್ಲಿ ವಂಚನೆಯ ಭೀತಿಯಿದೆ. ಸ್ಥಾನ ಮಾನಕ್ಕೆ ಕುತ್ತು ಬರಬಹುದು. ಕುಲದೇವತೆಯ ಪ್ರಾರ್ಥನೆ ಮಾಡಿ.
 
ಕನ್ಯಾ: ದಾಂಪತ್ಯದಲ್ಲಿ ಸಮರಸದಿಂದ ಸುಖವಿರಲಿದೆ. ಉದ್ಯೋಗದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗುತ್ತದೆ. ಆಸ್ತಿ ಖರೀದಿ ವ್ಯವಹಾರ ಮಾಡಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.
 
ತುಲಾ: ಹೊಸ ವೃತ್ತಿ ಇಂದಿನಿಂದ ಪ್ರಾರಂಭಿಸುವಿರಿ. ದೂರ ಸಂಚಾರ ಯೋಗವಿದ್ದು ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರದು. ಬಂಧುಗಳ ಆಗಮನದಿಂದ ಖರ್ಚು ವೆಚ್ಚ ಹೆಚ್ಚುವುದು.
 
ವೃಶ್ಚಿಕ: ಆರೋಗ್ಯ ಕೈ ಕೊಡುವುದು. ನಿರುದ್ಯೋಗಿಗಳಿಗೆ ಮನಸ್ಸಿಗೆ ಒಪ್ಪುವ ಕೆಲಸ ಸಿಗದು. ಕುಟುಂಬದಲ್ಲಿ ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ಜೀವನ ಮಾಡಬೇಕಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ಶುಭ ಫಲಗಳಿಗಾಗಿ ದೇವತಾ ಪ್ರಾರ್ಥನೆ ಮಾಡಿ.
 
ಧನು: ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಹಿಂದೆ ಮಾಡಿದ ತಪ್ಪುಗಳಿಗೆ ಇಂದು ಫಲ ಅನುಭವಿಸುವಿರಿ. ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವಿರಿ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ.
 
ಮಕರ: ಸಂಗಾತಿಯೊಂದಿಗೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳುವಿರಿ. ಇದರಿಂದ ಕುಟುಂಬದ ನೆಮ್ಮದಿ ಹಾಳಾಗುವುದು. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಮನೆಗೆ ಬೇಕಾದ ವಸ್ತು ಖರೀದಿ ಮಾಡುವಿರಿ.
 
ಕುಂಭ: ಸೂಕ್ತ ಉದ್ಯೋಗ ಸಿಗದೇ ಒದ್ದಾಡಬೇಕಾದೀತು. ಉದ್ಯೋಗಿಗಳಿಗೆ ಬಡ್ತಿ, ಮುನ್ನಡೆ ಯೋಗವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಲಸ್ಯ ಬರುವುದು. ಆಸ್ತಿ ವ್ಯವಹಾರಗಳಿಗೆ ಕೈ ಹಾಕಿದರೆ ಲಾಭ ಪಡೆಯಬಹುದು.
 
ಮೀನ: ಮಕ್ಕಳಿಂದ ನಿಮ್ಮ ಕನಸುಗಳು ಈಡೇರುವುದು ಎಂಬ ನಂಬಿಕೆ ಒಡೆದುಹೋಗುವುದು. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುತ್ತೀರಿ. ಆರ್ಥಿಕವಾಗಿಯೂ ಖರ್ಚು ಹೆಚ್ಚುವುದು. ಆದರೆ ತಾಳ್ಮೆಯಿಂದ ನಡೆದರೆ ದಿನದಂತ್ಯಕ್ಕೆ ಶುಭ ಫಲ ಕಾಣುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಗಾಯತ್ರಿ ಹೋಮದ ಮಹತ್ವವೇನು ಗೊತ್ತಾ?

ಬೆಂಗಳೂರು: ಗಾಯತ್ರಿ ಮಂತ್ರ ಜಪಿಸುವುದು ಹಲವು ರೋಗಗಳಿಗೆ ಮುಕ್ತಿ ಕೊಡುವುದಲ್ಲದೆ, ಮನಸ್ಸಿಗೆ ಶಕ್ತಿ ...

news

ಮಹಿಳೆಯರ ಹಣೆ ಹೀಗಿದ್ದರೆ ಅದರ ಅರ್ಥವೇನು ಗೊತ್ತಾ?!

ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ...

news

ಮೀನ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮೀನ ರಾಶಿಯವರ ಗುಣ ...

news

ವೃಷಭ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...