ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯದೊತ್ತಡದ ನಡುವೆ ಕುಟುಂಬಕ್ಕಾಗಿ ಸಮಯ ಮೀಸಲಿಡಲು ಹೆಣಗಾಡಬೇಕಾದೀತು. ಆದರೆ ಕೊನೆಯ ಗಳಿಗೆಯಲ್ಲಿ ಸಹಾಯ ಸಿಕ್ಕಿ ಗಂಡಾಂತರಗಳಿಂದ ಪಾರಾಗುವಿರಿ. ಆರ್ಥಿಕವಾಗಿ ಕೊಂಚ ಚೇತರಿಕೆ ಕಂಡುಬರುವುದು.ವೃಷಭ: ದೂರದ ನೆಂಟರ ಆಗಮನದಿಂದ ಅನಗತ್ಯ ಖರ್ಚು ವೆಚ್ಚಗಳು ತಲೆದೋರಿದಾವು. ಬೇಡದ ಅಪವಾದಕ್ಕೆ ಗುರಿಯಾಗುವಿರಿ. ಆದರೆ ಯಾರಿಗೂ ಕಿವಿಗೊಡದೇ ಮುನ್ನಡೆಯಲು ಸಂಗಾತಿಯ ಸಹಕಾರ ಸಿಗುವುದು.ಮಿಥುನ: ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ.