Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 6 ಫೆಬ್ರವರಿ 2019 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಉದ್ಯೋಗದಲ್ಲಿ ಬದಲಾವಣೆ ಬಯಸುತ್ತಿರುವವರಿಗೆ ಅನಿರೀಕ್ಷಿತವಾಗಿ ಅವಕಾಶವೊಂದು ಒದಗಿ ಬರಲಿದೆ. ಸಂಸಾರಿಕವಾಗಿ ಇದ್ದ ಕಿರಿ ಕಿರಿಗಳು ದೂರವಾಗುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು.
 
ವೃಷಭ: ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಅವರ ಜತೆ ಸರಸದ ಕ್ಷಣ ಕಳೆಯುವಿರಿ. ಆದರೆ ಅಂದುಕೊಂಡಂತೆ ಕಾರ್ಯಗಳು ನೆರವೇರದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿಯೊಂದು ಬರಲಿದೆ.
 
ಮಿಥುನ: ಶುಭ ಮಂಗಲ ಕಾರ್ಯಗಳಿಗೆ ತೆರಳುವಿರಿ. ದೂರ ಸಂಚಾರದಲ್ಲಿ ಕೊಂಚ  ಅಡೆತಡೆಗಳು ಕಂಡುಬಂದೀತು. ವಾಹನ ಖರೀದಿ ಯೋಗವಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರಲಿದೆ. ಧನಾಗಮನವಾದಷ್ಟೇ ಖರ್ಚುಗಳೂ ಅಧಿಕವಾಗಲಿದೆ. ಕುಟುಂಬದಲ್ಲಿ ಸಮಾಧಾನಕರ ವಾತಾವರಣವಿರಲಿದೆ.
 
ಸಿಂಹ: ನಿಮ್ಮ ಬುದ್ಧಿವಂತಿಕೆಯಿಂದ ಬರಬಹುದಾದ ಅಪಾಯಗಳನ್ನು ತಪ್ಪಿಸಬಹುದು. ಯಶಸ್ಸು ಸಿಗಬೇಕಾದರೆ ತೀವ್ರ ಪ್ರಯತ್ನ ಅಗತ್ಯ. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು.
 
ಕನ್ಯಾ: ಕೆಲಸದಲ್ಲಿ ಉದಾಸೀನತೆ ಕಂಡುಬರುವುದು. ಸಂಗಾತಿಯ ಪ್ರಸ್ತಾಪಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ರೂಡಿಸಿಕೊಳ್ಳಿ.ಕುಟುಂಬದ ಹಿರಿಯರ ಮಾತಿಗೆ ಬೆಲೆ ಕೊಡಬೇಕಾಗುತ್ತದೆ. ಅನಿರೀಕ್ಷಿತ ಧನಲಾಭವಾಗಲಿದೆ.
 
ತುಲಾ: ಸಾಲ ಮರುಪಾವತಿಯಾಗುವುದು ಮತ್ತು ವ್ಯವಹಾರದಲ್ಲೂ ಲಾಭ ಗಳಿಸಿ ಹಣಕಾಸಿಗೆ ಯಾವುದೇ ಕೊರತೆಯಾಗದು. ಉದ್ಯೋಗದಲ್ಲಿ ಹೆಚ್ಚಿನ ಕಾರ್ಯದೊತ್ತಡವಿರುವುದು. ಹಿತ ಶತ್ರುಗಳಿಂದ ವಂಚನೆ ಭೀತಿಯಿದೆ. ಎಚ್ಚರ ಅಗತ್ಯ.
 
ವೃಶ್ಚಿಕ: ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಿ ನಿಧಾನವಾಗಿ ಚೇತರಿಕೆ ಕಂಡುಬರುವುದು. ಕುಟುಂಬದಲ್ಲಿ ಸಂಗಾತಿಯ ಸಹಕಾರ ಸಿಕ್ಕಿ ನೆಮ್ಮದಿ  ಇರುವುದು. ದೇವತಾ ಆರಾಧನೆ ಮಾಡಿದರೆ ಮತ್ತಷ್ಟು ಶುಭ ಫಲ.
 
ಧನು: ಖರ್ಚು ವೆಚ್ಚಗಳ ಬಗ್ಗೆ ಹಿಡಿತ ಅಗತ್ಯ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಹೊಸ ವಸ್ತು ಖರೀದಿಗೆ ಸ್ವಲ್ಪ ದಿನ ಕಾಯುವುದು ಒಳಿತು.
 
ಮಕರ: ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ತಾಳ್ಮೆಯಿಂದ ನಿಭಾಯಿಸಿದರೆ ಎಂತಹಾ ಕಷ್ಟವಾದರೂ ಕಷ್ಟವೆನಿಸದು. ಆದರೆ ಅತಿಯಾಗಿ ಯಾರನ್ನೂ ನಂಬಲು ಹೋಗಬೇಡಿ. ವಂಚನೆಗೊಳಗಾಗುವ ಸಾಧ್ಯತೆಯಿದೆ.
 
ಕುಂಭ: ಕಾರ್ಯ ನಿಮಿತ್ತ ದೂರ ಸಂಚಾರ ಮಾಡುವಿರಿ. ದಂಪತಿಗಳು ಮಧು ಚಂದ್ರದ ಭಾಗ್ಯ ಅನುಭವಿಸುವರು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ದೊರಕುವುದು. ಅನಿರೀಕ್ಷಿತ ವಾರ್ತೆಗಳು ಖುಷಿ ಕೊಡುವುದು.
 
ಮೀನ: ದೇವರ ಆರಾಧನೆಯೊಂದಿಗೆ ಇಂದಿನ ದಿನ ಆರಂಭಿಸಿದರೆ ಇಂದು ಅಂದುಕೊಂಡ ಕಾರ್ಯಗಳು ನೆರವೇರುವುದು. ನಿರುದ್ಯೋಗಿಗಳು ತಾತ್ಕಾಲಿಕವಾಗಿಯಾದರೂ ಮನಸ್ಸಿಗೆ ಒಪ್ಪುವ ಕೆಲಸ ಹಿಡಿಯುವರು. ಬೇಡದ ಮಾತುಗಳನ್ನು ಅಲಕ್ಷಿಸುವುದೇ ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        
ಇದರಲ್ಲಿ ಇನ್ನಷ್ಟು ಓದಿ :