Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 9 ಫೆಬ್ರವರಿ 2019 (08:42 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಆರೋಗ್ಯ ಸಮಸ್ಯೆಗಳು ದೂರವಾಗುವುದು. ಆದರೆ ಮಾನಸಿಕ ಕಿರಿ ಕಿರಿ, ಕಾರ್ಯದೊತ್ತಡಗಳಿಂದ ನಿಮಗೆ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು. ಇಂದು ಸಾಲ ನೀಡಲು ಹೋಗಬೇಡಿ.
 
ವೃಷಭ: ಮನೆಗೆ ಬೇಕಾದ ಹೊಸ ವಸ್ತುಗಳ ಖರೀದಿ ಮಾಡುವಿರಿ. ಚಿನ್ನಾಭರಣಗಳ ಖರೀದಿ ಯೋಗವಿದೆ. ಅಪಘಾತದ ಭಯವಿದ್ದು, ವಾಹನ ಚಲಾವಣೆಯಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರುವುದು.
 
ಮಿಥುನ: ಉದ್ಯಮಿಗಳಿಗೆ ಲಾಭದಾಯಕ ದಿನ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕೆಲಸಗಳು ಹೆಚ್ಚಾಗುವುದು. ಧನಾಗಮನ ಸಾಕಷ್ಟು ಆದರೂ ವೆಚ್ಚಗಳೂ ಅಧಿಕವಾಗುವುದು. ಆದರೆ ಯಾವುದೇ ಸಮಸ್ಯೆ ಬಂದರೂ ಸಂಗಾತಿಯ ಸಹಕಾರ ಸಿಕ್ಕಿ ನೆಮ್ಮದಿ ಪಡೆಯುವಿರಿ.
 
ಕರ್ಕಟಕ: ಸಂಗಾತಿಯ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ಮಿತ್ರರ ಸಹಕಾರ ದೊರಕಿ ಲಾಭ ಗಳಿಸುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು.
 
ಸಿಂಹ: ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಹಿತ ಶತ್ರುಗಳ ಮರುಳು ಮಾತಿಗೆ ಬೆಲೆ ಕೊಡಬೇಡಿ. ಆರೋಗ್ಯ ಸಮಸ್ಯೆ ಕಾಡಲಿದೆ. ದೂರ ಸಂಚಾರ ಮಾಡಬೇಕಾಗುತ್ತದೆ.
 
ಕನ್ಯಾ: ಇಂಜಿನಿಯರಿಂಗ್ ವೃತ್ತಿಯವರಿಗೆ ಇಂದು ಶುಭ ದಿನ. ಉದ್ಯೋಗದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಹಿರಿಯರ ತೀರ್ಥಯಾತ್ರೆಗೆ ವ್ಯವಸ್ಥೆ ಮಾಡುವಿರಿ. ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ಎದುರಾಗುವುದು.
 
ತುಲಾ: ಸಾಕಷ್ಟು ಆರ್ಥಿಕ ಲಾಭ ಗಳಿಸುವಿರಿ. ಬಂಧು ಮಿತ್ರರೊಡನೆ ಪ್ರವಾಸ ಹೋಗಿ ರಸಮಯ ಕ್ಷಣ ಕಳೆಯುವಿರಿ. ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ಆಸ್ತಿ ವಿಚಾರಗಳಲ್ಲಿ ಕೋರ್ಟು ಕಚೇರಿ ಎಂದು ಅಲೆದಾಡಬೇಕಾದೀತು.
 
ವೃಶ್ಚಿಕ: ನೀವು ಮಾಡುವ ಕೆಲಸಗಳಿಗೆ ಮನ್ನಣೆ ಸಿಕ್ಕಿ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಗಳಿಸುವಿರಿ. ಪ್ರೇಮಿಗಳಿಗೆ ಹಿರಿಯರಿಂದ ಸಮ್ಮತಿ ಸಿಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.
 
ಧನು: ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ನಿಮ್ಮ ಮಾತಿನಿಂದ ಇತರರೊಂದಿಗೆ ನಿಷ್ಠುರರಾಗುತ್ತೀರಿ. ಉದ್ಯಮಿಗಳಿಗೆ ಕೆಲವು ಅಡೆತಡೆಗಳು ಎದುರಾಗುತ್ತವೆ. ಆದರೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.
 
ಮಕರ: ಸಂಗಾತಿಯ ಸಹಕಾರ ಸಿಕ್ಕಿ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಣುತ್ತೀರಿ. ಕುಲದೇವರ ಆರಾಧನೆ ಮಾಡಿ. ಹಣಕಾಸಿನ ವಿಚಾರದಲ್ಲೂ ಚೇತರಿಕೆ ಕಾಣುವಿರಿ. ಸಾಲಗಾರರು ನಿಮ್ಮ ಹಣ ಮರಳಿಸುತ್ತಾರೆ.
 
ಕುಂಭ: ಹೊಸ ವೃತ್ತಿಗೆ ಕೈ ಹಾಕುವುದಿದ್ದರೆ ಸಕಾಲ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ದೇವರ ಅನುಗ್ರಹ ನಿಮ್ಮ ಮೇಲಿರಲಿದೆ. ನಿಮಗೇ ತಿಳಿಯದೇ ಇನ್ನೊಬ್ಬರಿಗೆ ಸಹಾಯ ಮಾಡುತ್ತೀರಿ. ಅನಾಹುತಗಳಾಗದಂತೆ ಎಚ್ಚರವಹಿಸಿ.
 
ಮೀನ: ಬೇಡದ ವಿಚಾರಕ್ಕೆ ನಿಮ್ಮ ಹೆಸರು ಥಳುಕು ಹಾಕಿ ಅವಮಾನ ಅನುಭವಿಸುವಿರಿ. ಆದರೆ ತಾಳ್ಮೆಯಿಂದಿರುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ಧಾರಿ ನಿಮ್ಮ ಹೆಗಲೇರಲಿದೆ. ಎಚ್ಚರಿಕೆ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        
ಇದರಲ್ಲಿ ಇನ್ನಷ್ಟು ಓದಿ :