Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 20 ಫೆಬ್ರವರಿ 2019 (08:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ದೈವ ಭಕ್ತಿ ಹೆಚ್ಚುವುದು. ಕಚೇರಿಯಲ್ಲಿ ಉಲ್ಲಾಸದಾಯಕ ವಾತಾವರಣವಿರಲಿದೆ. ಆದರೆ ಸಂಗಾತಿ ಜತೆಗೆ ಕಿರಿ ಕಿರಿಯಾಗುವುದು. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಿರದು. ಹೊಸ ಉದ್ಯೋಗಾವಕಾಶಗಳಿಗಾಗಿ ಹುಡುಕಾಟ ನಡೆಸುವಿರಿ.
 
ವೃಷಭ: ಆದಾಯ ಹೆಚ್ಚಿದಷ್ಟೇ ಖರ್ಚು ವೆಚ್ಚಗಳೂ ಹೆಚ್ಚುವುದು. ಹೊಸ ಯೋಜನೆಗಳಿಗೆ ಕೈ ಹಾಕುವಿರಿ. ಮಹಿಳೆಯರಿಗೆ ತವರು ಮನೆಯಿಂದ ಶುಭ ಸುದ್ದಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರಕಲಿದೆ.
 
ಮಿಥುನ: ಕುಟುಂಬದ ಕಾರ್ಯ ನಿಮಿತ್ತ ದೂರ ಸಂಚಾರ ಕೈಗೊಳ್ಳಬೇಕಾಗುತ್ತದೆ. ಸಾಮಾಜಿಕವಾಗಿ ನೀವು ಮಾಡುವ ಕೆಲಸಗಳಿಂದ ಹೆಸರು, ಗೌರವ ಸಂಪಾದಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಅಗತ್ಯ.
 
ಕರ್ಕಟಕ: ಸಹೋದರ ಅಥವಾ ಮಕ್ಕಳ ವಿವಾಹ ಸಂಬಂಧ ಓಡಾಟ ನಡೆಸುವಿರಿ. ಕುಲದೇವರ ದರ್ಶನ ಪಡೆದರೆ ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರುವುದು. ವಾಸ ಸ್ಥಳ ಬದಲಾವಣೆಗೂ ಚಿಂತನೆ ಮಾಡುವಿರಿ.
 
ಸಿಂಹ: ಸಾಲ ಕೇಳಿಕೊಂಡು ಬಂದವರಿಗೆ ಸಾಲ ಕೊಡುವ ಮುನ್ನ ಎಚ್ಚರಿಕೆ ಅಗತ್ಯ. ಕ್ಷುಲ್ಲುಕ ಕಾರಣಕ್ಕೆ ಮನಸ್ಸಿಗೆ ಬೇಸರವುಂಟುಮಾಡಿಕೊಳ‍್ಳುವಿರಿ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಚಾಡಿ ಮಾತಿಗೆ ಕಿವಿಗೊಡಬೇಡಿ.
 
ಕನ್ಯಾ: ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹಿರಿಯರ ಮಾರ್ಗದರ್ಶನ ಪಡೆಯಿರಿ. ಖರ್ಚು ವೆಚ್ಚಗಳು ಅಧಿಕವಾಗುವುದು. ಸಂಗಾತಿಗೆ ಅಲಂಕಾರಿಕ ವಸ್ತುಗಳ ಖರೀದಿ ಮಾಡುವಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರುವುದು. ತಾಳ್ಮೆಯಿಂದ ನಿಭಾಯಿಸಿ.
 
ತುಲಾ: ಬಾಕಿ ಇದ್ದ ಹಣ ಮರು ಪಾವತಿಯಾಗಿ ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಕಾರ್ಯನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡುವಿರಿ. ಅಪರಿಚಿತರಿಂದ ಸಹಾಯ ಒದಗಿ ಬರಲಿದೆ. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಗುವುದು.
 
ವೃಶ್ಚಿಕ: ಹೊಸ ಯೋಜನೆಗಳಿಗೆ ಕೈ ಹಾಕಿದರೂ ಸಾಕಷ್ಟು ಹಣವಿಲ್ಲದೇ ಒದ್ದಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲೂ ಕೆಲವೊಂದು ವಿಘ್ನಗಳು, ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ವಾಸ ಸ್ಥಳ ಬದಲಾವಣೆ ಸಾಧ್ಯತೆಯಿದೆ.
 
ಧನು: ಆರೋಗ್ಯ ಭಾಗ್ಯ ಸುಧಾರಿಸುವುದು. ಆರ್ಥಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಆದರೆ ಕೆಲವೊಂದು ವಿನಾಕಾರಣ ಖರ್ಚುಗಳು ಕಂಗೆಡಿಸುವುದು. ಆರೋಗ್ಯದ ದೃಷ್ಟಿಯಿಂದ ಇಂದು ಹೊರಗಡೆ ಆಹಾರ ಸೇವಿಸದೇ ಇರುವುದೇ ಉತ್ತಮ.
 
ಮಕರ: ಸಂಗಾತಿಯ ಮುನಿಸು ಅರ್ಥವಾಗದೇ ಮನೆಯಲ್ಲಿ ಒಂದು ರೀತಿಯ ಅಸಮಾಧಾನದ ವಾತಾವರಣವಿರುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗುತ್ತದೆ. ಹಿರಿಯರ ಅಭಿಪ್ರಾಯಗಳಿಗೆ ಬೆಲೆ ಕೊಡಿ.
 
ಕುಂಭ: ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವ ಮೊದಲು ಹಿರಿಯರ ಅಭಿಪ್ರಾಯಗಳಿಗೆ ಬೆಲೆ ಕೊಡಿ. ಬಹುದಿನಗಳ ಆರೋಗ್ಯ ಸಮಸ್ಯೆಗೆ ಇಂದು ಮುಕ್ತಿ. ಇದರಿಂದ ಮನಸ್ಸಿಗೂ ನೆಮ್ಮದಿ ಸಿಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.
 
ಮೀನ: ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ನೂತನ ದಂಪತಿಗಳಿಗೆ ಸಂತಾನ ಭಾಗ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಕುಲದೇವರ ಸ್ಮರಣೆ ಮಾಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :