ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯದೊತ್ತಡದಿಂದ ಹೈರಾಣಾಗಲಿದ್ದೀರಿ. ಇದರಿಂದ ಮನೆಯಲ್ಲೂ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಮಾಡಿಕೊಳ್ಳುವಿರಿ. ಆದರೆ ಕೋಪದ ಕೈಗೆ ಬುದ್ಧಿ ಕೊಟ್ಟು ಸಂಬಂಧ ಹಾಳುಮಾಡಿಕೊಳ್ಳಬೇಡಿ. ಹೊಸ ವ್ಯವಹಾರಗಳಿಗೆ ಸದ್ಯಕ್ಕೆ ಕೈ ಹಾಕುವುದು ಬೇಡ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ ಸ್ಥಾನ ಮಾನ ಉತ್ತಮಗೊಳ್ಳುವುದು. ಸಹೋದರರೊಂದಿಗೆ ಮನೆಯಲ್ಲಿ ಮಾಡಬೇಕಾದ ಶುಭ ಕಾರ್ಯಗಳಿಗೆ ಚಾಲನೆ ನೀಡುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ