Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 25 ಫೆಬ್ರವರಿ 2019 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಾರ್ಯದೊತ್ತಡ ಹೈರಾಣಾಗಿಸಲಿದೆ. ಆರೋಗ್ಯವೂ ಹದಗೆಡುವುದು. ಉಸಿರಾಟ ಸಂಬಂಧೀ ಖಾಯಿಲೆಗಳು ಆತಂಕಕ್ಕೆ ಕಾರಣವಾಗುತ್ತದೆ. ಆದರೆ ಆರ್ಥಿಕವಾಗಿ ಬಾಕಿ ಬರಬೇಕಿದ್ದ ಹಣ ಪಾವತಿಯಾಗಿ ಅಭಿವೃದ್ಧಿ ಕಾಣುವಿರಿ.
 
ವೃಷಭ: ಸಹೋದರರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಸಮಾಧಾನವೇ ಇಂದು ನಿಮ್ಮನ್ನು ಕಾಪಾಡುವ ಅಸ್ತ್ರವಾಗಲಿದೆ. ನೆರೆಹೊರೆಯವರ ಸಹಕಾರ ಸಿಕ್ಕಿ ಸಂಭಾವ್ಯ ತೊಂದರೆ ನಿವಾರಣೆಯಾಗಲಿದೆ.
 
ಮಿಥುನ: ಕಾರ್ಯಕ್ಷೇತ್ರದಲ್ಲಿ ಒತ್ತಡವಿದ್ದರೂ ಸಹೋದ್ಯೋಗಿಗಳ ಸಹಕಾರದಿಂದ ಜಯ ಸಿಗುವುದು. ಆದರೆ ಮಾನಸಿಕವಾಗಿ ಯಾವುದೋ ಚಿಂತೆ ಆವರಿಸಲಿದೆ. ವ್ಯಾಪಾರಿಗಳಿಗೆ ಲಾಭಕರ ದಿನ. ಆದರೆ ಹಿತಶತ್ರುಗಳಿಂದ ವಂಚನೆ ಭೀತಿಯಿದೆ.
 
ಕರ್ಕಟಕ: ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ದಾಯಾದಿಗಳಿಂದ ಕೆಟ್ಟ ಮಾತು ಕೇಳಿಬಂದೀತು. ಕೃಷಿ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಸಾಕಷ್ಟು ಹಣಕಾಸಿನ ಹರಿವಿಲ್ಲದೇ ಒದ್ದಾಡಬೇಕಾಗುತ್ತದೆ.
 
ಸಿಂಹ: ಕಷ್ಟ ಬಂದಾಗ ನಿಮ್ಮ ಸ್ವ ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ನೆರೆಹೊರೆಯವರೊಂದಿಗೆ ಸಣ್ಣ ಪುಟ್ಟ ಘರ್ಷಣೆಯಾಗುವುದು. ಆಸ್ತಿ ಮಾರಾಟ, ಖರೀದಿ ವ್ಯವಹಾರ ಮಾಡುವಿರಿ. ಹಾಗಿದ್ದರೂ ಸಾಕಷ್ಟು ಲಾಭವಿರದು.
 
ಕನ್ಯಾ: ಕೌಟುಂಬಿಕವಾಗಿ ನೆಮ್ಮದಿ ಕಾಣಲಿದ್ದೀರಿ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಆದರೆ ವೃತ್ತಿ ರಂಗದಲ್ಲಿ ಕಾರ್ಯದೊತ್ತಡವಿರುತ್ತದೆ. ಮನೆಯಲ್ಲಿ ಅವಿವಾಹಿತರಿದ್ದರೆ ಅವರ ಮದುವೆ ಕಾರ್ಯಗಳಿಗೆ ಓಡಾಟ ನಡೆಸಲಿದ್ದೀರಿ.
 
ತುಲಾ: ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಾಣುವಿರಿ. ಹಿರಿಯರ ಉಪೇಕ್ಷೆ ನಿಮ್ಮ ಮನಸ್ಸಿಗೆ ಬೇಸರವುಂಟುಮಾಡುವುದು. ಅವಿವಾಹಿತರು ಸ್ವಲ್ಪ ದಿನ ಕಾಯಬೇಕಾಗುತ್ತದೆ. ಮನಸ್ಸಿಗೆ ನೆಮ್ಮದಿಗೆ ದೇವರ ಮೊರೆ ಹೋಗಿ.
 
ವೃಶ್ಚಿಕ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗದು. ಮನೆಕೆಲಸದವರ ಮೈಗಳ್ಳತನದಿಂದ ನಷ್ಟ ಅನುಭವಿಸುವಿರಿ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಆರೋಗ್ಯ ಭಾಗ್ಯ ಕೈಕೊಡುವುದು. ಸಂಗಾತಿಯಿಂದ ಸಹಕಾರವಿರುವುದು.
 
ಧನು: ಮಕ್ಕಳಿಂದ ಶುಭ ಸುದ್ದಿ. ಆದರೆ ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾಗಲಿದೆ. ಸಾಮಾಜಿಕವಾಗಿ ಉನ್ನತ ಸ್ಥಾನಮಾನ ಪಡೆಯುವಿರಿ. ಸಹೋದರರಿಂದ ಉಪೇಕ್ಷೆಗೊಳಗಾಬೇಕಾಗುತ್ತದೆ.
 
ಮಕರ: ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಆದರೆ ಖರ್ಚು ಹೆಚ್ಚಾಗುವುದು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಕಾಣುವರು. ಮಿತ್ರರಿಂದ ಸಹಕಾರ ದೊರೆಯುವುದು. ದಿನದಂತ್ಯಕ್ಕೆ ಶುಭ ಸುದ್ದಿ.
 
ಕುಂಭ: ಹಠಾತ್ ಉಸಿರಾಟ ಸಂಬಂಧೀ ಕಾಯಿಲೆ ಬಂದು ತೊಂದರೆಗೆ ಸಿಲುಕಿಕೊಳ್ಳಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ವರ್ಗಾವಣೆ ಯೋಗವಿದೆ. ಕೃಷಿಕರು ಲಾಭ ಪಡೆಯುವರು. ಆರ್ಥಿಕವಾಗಿ ಚೇತರಿಕೆ ಕಾಣುವುದು.
 
ಮೀನ: ಮಾತಿನ ಮೇಲೆ ನಿಗಾ ಇರಲಿ. ದಾಯಾದಿಗಳೊಂದಿಗೆ ವಾಗ್ವಾದಕ್ಕಿಳಿಯಬೇಕಾಗುತ್ತದೆ. ಆಸ್ತಿ ವ್ಯವಹಾರಗಳು ಕಗ್ಗಂಟಾಗಲಿವೆ. ಖರ್ಚು ವೆಚ್ಚಗಳೂ ಅಧಿಕವಾಗಲಿದೆ. ಮನಸ್ಸಿನ ನೆಮ್ಮದಿಗೆ ಮೌನವೇ ಮದ್ದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  
ಇದರಲ್ಲಿ ಇನ್ನಷ್ಟು ಓದಿ :