ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಮನೆ ರಿಪೇರಿ, ನವೀಕರಣದಲ್ಲಿ ತೊಡಗಿಸಿಕೊಳ್ಳುವಿರಿ. ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಸಂಗಾತಿ ಜತೆ ಮನಸ್ತಾಪಕ್ಕಿಂತ ಮೌನವಾಗಿರುವುದೇ ಲೇಸು.ವೃಷಭ: ಎಂದೋ ಮಾಡಿದ ನಿಮ್ಮ ಒಳ್ಳೆಯ ಕೆಲಸಗಳು ಇಂದು ಪ್ರಯೋಜನಕ್ಕೆ ಬರಲಿವೆ. ನಿಮ್ಮ ವ್ಯಕ್ತಿತ್ವದಿಂದಲೇ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಕೊಂಚ ಅಡಚಣೆಯಾದೀತು.ಮಿಥುನ: ಯಾವುದೇ ಕೆಲಸಕ್ಕೆ ಹೊರಡುವುದಿದ್ದರೂ ಮನೆ ದೇವರಿಗೆ ಪ್ರಾರ್ಥನೆ ಮಾಡಿ ಹೊರಡಿ.