ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕೌಟುಂಬಿಕವಾಗಿ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಕುಲದೇವರ ದರ್ಶನ ಪಡೆಯುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಲಭಿಸುವುದು. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಾಗದು.ವೃಷಭ: ಉದ್ಯೋಗ ಬದಲಾವಣೆ ಮಾಡುವಿರಿ. ಅಂದುಕೊಂಡ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ಸಾಲ ಪಡೆದಿದ್ದರೆ ತೀರಿಸಿ. ಹೊಸ ವ್ಯವಹಾರಕ್ಕೆ ಕೈ ಹಾಕಿದರೆ ನಷ್ಟ ಅನುಭವಿಸಬೇಕಾಗುತ್ತದೆ.ಮಿಥುನ: ಕಾರ್ಯನಿಮಿತ್ತ ದೂರ ಸಂಚಾರ ಕೈಗೊಳ್ಳಲಿದ್ದೀರಿ. ಆದರೆ ಅಡೆತಡೆಗಳು ತೋರಿಬಂದಾವು. ಮಕ್ಕಳ ವಿಚಾರದಲ್ಲಿ