ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಷ್ಟ ಬಂದಾಗ ಮಿತ್ರರ ನೆರವು ಸಿಗಲಿದೆ. ಆರೋಗ್ಯ ಭಾಗ್ಯ ಸುಧಾರಿಸದೇ ಚಿಂತೆಗೆ ಕಾರಣವಾದೀತು. ಆದರೆ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಸಂಗಾತಿಯ ಮಾತಿಗೆ ಕಿವಿಗೊಡಿ. ಆರ್ಥಿಕವಾಗಿ ಚೇತರಿಕೆ.ವೃಷಭ: ಹಿರಿಯರ ಸಲಹೆಗಳಿಗೆ ಮನ್ನಣೆ ನೀಡಿ. ಕಷ್ಟಕಾಲದಲ್ಲಿ ಇದು ನೆರವಾಗಲಿದೆ. ಖರ್ಚು ವೆಚ್ಚಗಳು ಅಧಿಕವಾಗಲಿದ್ದು, ಚಿಂತೆಗೆ ಕಾರಣವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ.ಮಿಥುನ: ಉದ್ಯಮಿಗಳಿಗೆ ವ್ಯವಹಾರದಲ್ಲಿ ಕೊಂಚ ನಷ್ಟ ಅನುಭವಿಸಬೇಕಾದೀತು.