ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಮ್ಮ ಕ್ರಿಯಾತ್ಮಕ ಆಲೋಚನೆಗಳು ಹೆಚ್ಚು ಪ್ರಯೋಜನಕ್ಕೆ ಬರುವುದು. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಹೊಸ ವ್ಯವಹಾರಕ್ಕೆ ಕೈಹಾಕಿದರೆ ಲಾಭವಾಗುವುದು.ವೃಷಭ: ನಿಮ್ಮ ತ್ಯಾಗದ ಮನೋಭಾವ ನಿಮ್ಮನ್ನು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಕರೆದೊಯ್ಯಲಿದೆ. ಯಾವುದೇ ಕೆಲಸಕ್ಕೂ ಮುನ್ನ ದುಡುಕದೆ ತಾಳ್ಮೆಯಿಂದ ಮುಂದುವರಿದರೆ ಇಂದಿನ ದಿನ ಯಶಸ್ಸು ನಿಮ್ಮದಾಗುವುದು.ಮಿಥುನ: ಯಾವುದೋ ಕೆಲಸಕ್ಕೆ ತೊಡಗುವ ಮುನ್ನ ಮಾಡಬೇಕೋ ಬೇಡವೋ ಎಂದ ಧ್ವಂದ್ವ ಕಾಡಲಿದೆ.