ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯದೊತ್ತಡದಿಂದ ದೇಹ ಹೈರಾಣಾಗುವುದು. ಆರೋಗ್ಯ ಸಂಬಂಧೀ ಸಮಸ್ಯೆ ಪರಿಹಾರಕ್ಕೆ ಆಸ್ಪತ್ರೆ ಅಲೆದಾಟ ತಪ್ಪದು. ಮೇಲಧಿಕಾರಿಗಳನ್ನು ಸಂತುಷ್ಟಗೊಳಿಸಲು ನಾನಾ ಸರ್ಕಸ್ ಮಾಡಬೇಕಾಗುತ್ತದೆ.ವೃಷಭ: ಸಂಚಾರದಿಂದ ದೇಹಾಯಾಸವಾಗುವುದು. ವ್ಯಾಪಾರ, ವ್ಯವಹಾರದಲ್ಲಿ ಹಣಕಾಸಿನ ತೊಂದರೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ. ನಿರುದ್ಯೋಗಿಗಳಿಗೆ ಕಾಯುವಿಕೆ ಅನಿವಾರ್ಯ.ಮಿಥುನ: ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಕ್ಕಿ ವಿವಾಹಕ್ಕೆ ತಯಾರಿ ನಡೆಸುವಿರಿ. ಖರ್ಚು ವೆಚ್ಚಗಳು ಅಧಿಕವಾಗುವುದು. ಕಷ್ಟದ ಸಂದರ್ಭದಲ್ಲಿ