ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ದಿನ ನಿಮ್ಮದಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಚಿಂತೆಯಾಗುವುದು. ಆರ್ಥಿಕವಾಗಿ ಸಮಾಧಾನಕರ ದಿನ. ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಉದ್ಯೋಗ ಸಿಗಲಿದೆ.ವೃಷಭ: ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ನೆರೆಹೊರೆಯವರೊಂದಿಗೆ ಕಿರಿ ಕಿರಿಯಾಗುವುದು. ಅಂದುಕೊಂಡ ಕಾರ್ಯಗಳಿಗೆ ಹಣದ ಅಡಚಣೆಯಾಗುವುದು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಖರ್ಚು ವೆಚ್ಚದಲ್ಲಿ ಹಿಡಿತವಿರಲಿ.ಮಿಥುನ: ಹಣ ಗಳಿಕೆಯ ನಾನಾ ಮಾರ್ಗಗಳ ಬಗ್ಗೆ ಚಿಂತನೆ ಮಾಡುವಿರಿ.