Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 28 ಮಾರ್ಚ್ 2019 (08:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮನೆಯಲ್ಲಿ ಇದುವರೆಗೆ ಸಂಗಾತಿ ಜತೆಗಿದ್ದ ಮನಸ್ತಾಪಗಳೊಂದಿಗೆ ನೀವೇ ರಾಜಿಮಾಡಿಕೊಂಡು ನೆಮ್ಮದಿ ಕಾಣುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಬಿಡುವಿರಲಿದೆ. ಕಿರು ಸಂಚಾರದ ಯೋಗವೂ ಇದೆ.
 
ವೃಷಭ: ಎದುರಾಳಿಗಳನ್ನು ಎದುರಿಸುವಾಗ ತಾಳ್ಮೆಯಿಂದ ಹೆಜ್ಜೆಯಿಡುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಶತ್ರುಗಳು ಹುಟ್ಟಿಕೊಂಡಾರು. ಆದರೆ ಗುರುವಿನ ಬಲದಿಂದ ನಿಮಗೆ ಕಾರ್ಯಸಿದ್ಧಿ, ಲಾಭವಾಗಲಿದೆ.
 
ಮಿಥುನ: ಮಹಿಳೆಯರಿಂದ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಕಾರ್ಯನಿಮಿತ್ತ ದೂರ ಸಂಚಾರ ಹೊರಟರೆ ನಾನಾ ವಿಘ್ನಗಳು ಎದುರಾದೀತು. ಆರ್ಥಿಕವಾಗಿಯೂ ಖರ್ಚು ವೆಚ್ಚಗಳು ಅಧಿಕವಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.
 
ಕರ್ಕಟಕ: ಆರ್ಥಿಕವಾಗಿ ವಿವಿಧ ಮೂಲಗಳಿಂದ ಧನಾಗಮನವಾಗಿ ಚೇತರಿಕೆ ಕಾಣುವಿರಿ. ಸಾಲಗಳು ಪಾವತಿಯಾಗಲಿವೆ. ಆದರೆ ದಾಯಾದಿಗಳೊಂದಿಗೆ ಅನಗತ್ಯವಾಗಿ ವಾದ-ವಿವಾದ ಮಾಡಿಕೊಳ್ಳುವಿರಿ.  ಹೊಂದಾಣಿಕೆಯಿಂದ ಜೀವನ ನಡೆಸಿ.
 
ಸಿಂಹ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವ ಹೊಣೆಗಾರಿಕೆ ನಿಮ್ಮ ಹೆಗಲಿಗೇರಲಿದೆ. ಖರ್ಚು ವೆಚ್ಚಗಳು ಅಧಿಕವಾಗುವುದು. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ.
 
ಕನ್ಯಾ: ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ. ಸಾಂಸಾರಿಕವಾಗಿ ಸುಖ-ದುಃಖ ಸಮನಾಗಿ ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಆರ್ಥಿಕವಾಗಿ ಸಮಾಧಾನಕರ ದಿನ. ದಿನದಂತ್ಯಕ್ಕೆ ಶುಭ ಸುದ್ದಿ.
 
ತುಲಾ: ದೈವಾನುಗ್ರಹ ನಿಮ್ಮ ಮೇಲಿದ್ದು, ಇಂದು ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ ಯಶಸ್ಸು ಸಂಪಾದಿಸುತ್ತೀರಿ. ಬಾಕಿ ಹಣ ಸಂದಾಯವಾಗಿ ಆರ್ಥಿಕವಾಗಿಯೂ ಸಬಲರಾಗುತ್ತೀರಿ. ವಿದ್ಯಾರ್ಥಿಗಳಿಗೆ ಉದಾಸೀನ ಪ್ರವೃತ್ತಿ ಕಂಡುಬಂದೀತು.
 
ವೃಶ್ಚಿಕ: ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಸಂತಸವಾಗಲಿದೆ. ಕೌಟುಂಬಿಕವಾಗಿ  ನೆಮ್ಮದಿಯ ವಾತಾವರಣವಿದ್ದರೂ ಹಿರಿಯರ ಆರೋಗ್ಯ ಕೈಕೊಡುವುದು. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದೆ.
 
ಧನು: ವ್ಯಾಪಾರ, ವಹಿವಾಟು ನಡೆಸುವಿರಿ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಧನವ್ಯಯವಾದೀತು. ಪೋಷಕರ ಮಾತು ನಿಮಗೆ ಅಪಥ್ಯವೆನಿಸಬಹುದು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಪ್ರಗತಿ ಕಾಣುವರು.
 
ಮಕರ: ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡಬಹುದು. ಬಹುದಿನಗಳಿಂದ ಅಂದುಕೊಂಡಿದ್ದ ಕಾರ್ಯಗಳಿಗೆ ಚಾಲನೆ ದೊರಕಿ ಹಂತ ಹಂತವಾಗಿ ಅಭಿವೃದ್ಧಿ ಅನುಭವಕ್ಕೆ ಬರುವುದು. ಸಾಮಾಜಿಕವಾಗಿಯೂ ಗೌರವ ಗಳಿಸುತ್ತೀರಿ.
 
ಕುಂಭ: ಕಾರ್ಯ ಸಾಧನೆಗೆ ಹಲವು ವಿಘ್ನಗಳು ತಲೆದೋರುತ್ತವೆ. ಆದರೆ ನಿಮ್ಮ ಆತ್ಮಸ್ಥೈರ್ಯವೇ ನಿಮಗೆ ಶ್ರೀರಕ್ಷೆಯಾಗಲಿದೆ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿದ್ದೀತು. ತಾಳ್ಮೆಯಿಂದ ನಿಭಾಯಿಸಿ.
 
ಮೀನ: ಮಾನಸಿಕ ಚಂಚಲತೆಯಿಂದ ಅಂದುಕೊಂಡ ಕಾರ್ಯಗಳಿಗೆ ಅಡ್ಡಿ ಆತಂಕಗಳು ಎದುರಾಗಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ಮಾಡುವಿರಿ. ಅನಿರೀಕ್ಷಿತವಾಗಿ ಬರುವ ಬಂಧುವಿನಿಂದ ಶುಭ ಸುದ್ದಿ ನಿರೀಕ್ಷಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             


ಇದರಲ್ಲಿ ಇನ್ನಷ್ಟು ಓದಿ :