ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯಕ್ಷೇತ್ರದಲ್ಲಿ ಹಲವು ಅಡ್ಡಿ ಆತಂಕಗಳು ಎದುರಾಗಲಿವೆ. ಮಿತ್ರರ ಸಹಕಾರ ದೊರೆಯುವುದು. ಶುಭ ಮಂಗಲ ಕಾರ್ಯಗಳಿಗೆ ಚಿಂತನೆ ನಡೆಸುವಿರಿ. ಕಷ್ಟಕಾಲದಲ್ಲಿ ಹಿರಿಯರ ಸಲಹೆಗೆ ಕಿವಿಗೊಡಿ.ವೃಷಭ: ಆರೋಗ್ಯ ಕೈಕೊಟ್ಟು ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಬಹುದು. ಮೈ ಕೈ ನೋವಿನಂತಹ ಸಮಸ್ಯೆ ಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.ಮಿಥುನ: ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಹಿನ್ನಡೆ ಭೀತಿಯಿದೆ.