Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 1 ಏಪ್ರಿಲ್ 2019 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಹೊಸ ವಸ್ತುಗಳ ಖರೀದಿ ಮಾಡುವಿರಿ. ಕಿರು ಸಂಚಾರ ಯೋಗವಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯವಿದೆ. ಸಾಂಸಾರಿಕವಾಗಿ ನೆಮ್ಮದಿ ದಿನ.
 
ವೃಷಭ: ಭೂಮಿ, ಆಸ್ತಿ ಖರೀದಿಗೆ ಚಿಂತನೆ ಮಾಡುವಿರಿ. ಮಿತ್ರರೊಂದಿಗೆ ಪ್ರವಾಸ ತೆರಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಕಾಣುವಿರಿ. ಮನೆಯಲ್ಲಿ ಬಂಧು ಮಿತ್ರರ ಆಗಮನದಿಂದ ಸಡಗರದ ವಾತಾವರಣವಿರುವುದು.
 
ಮಿಥುನ: ಆರ್ಥಿಕ ಅಡಚಣೆಯಿಂದಾಗಿ ಅಂದುಕೊಂಡ ಕಾರ್ಯಗಳಿಗೆ ವಿಘ್ನಗಳು ಎದುರಾಗುವುದು. ಅವಿವಾಹಿತರು ಯೋಗ್ಯ ಸಂಗಾತಿಯ ಆಯ್ಕೆಗಾಗಿ ಕೆಲವು ದಿನ ಕಾಯುವುದು ಒಳ್ಳೆಯದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಕರ್ಕಟಕ: ಯಾರು ಏನೇ ಹೇಳಿದರೂ ನಿಮ್ಮ ದೃಢ ನಿಶ್ಚಯವನ್ನು ಬದಲಿಸಬೇಡಿ. ಹಿತಶತ್ರುಗಳು ಬೇಕೆಂದೇ ನಯವಾಗಿ ಮಾತನಾಡಿಕೊಂಡು ಬರುವರು. ತಾಳ್ಮೆಯಿಂದ ನಿಭಾಯಿಸಿ. ಮೇಲಧಿಕಾರಿಗಳ ಕಿರಿ ಕಿರಿಯಿಂದ ಕಾರ್ಯಾನುಕೂಲಕ್ಕೆ ತೊಂದರೆಯಾದೀತು.
 
ಸಿಂಹ: ಕೈಗೊಂಡ ಕಾರ್ಯಗಳಲ್ಲಿ ವಿಘ್ನಗಳು ಎದುರಾದರೂ ಛಲ ಬಿಡದೇ ಪ್ರಯತ್ನ ಮುಂದುವರಿಸಿದರೆ ಅಂತಿಮವಾಗಿ ಜಯ ಕಾಣುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಸಿಗಲಿದೆ. ಆರೋಗ್ಯದಲ್ಲಿ ಕಾಳಜಿ ಅಗತ್ಯ.
 
ಕನ್ಯಾ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿಬರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು. ಆದರೂ ಮನಸ್ಸಿಗೆ ಹಿಡಿಸಿದ ಸಂಬಂಧ ಕೂಡಿಬರಲು ದೇವರ ಪ್ರಾರ್ಥನೆ ಮಾಡಿ. ಆರ್ಥಿಕವಾಗಿ ಧನಾಗಮನವಾಗಲಿದೆ.
 
ತುಲಾ: ನಿರುದ್ಯೋಗಿಗಳು ಉದ್ಯೋಗ ಅರಸಿಕೊಂಡು ದೂರ ಸಂಚಾರ ಮಾಡುವರು. ಚಾಲನಾ ವೃತ್ತಿಯಲ್ಲಿರುವವರಿಗೆ ಅಪಘಾತ ಭಯವಿದೆ. ದಾಂಪತ್ಯದಲ್ಲಿ ಸಂತಸದ ದಿನ ನಿಮ್ಮದಾಗುವುದು. ನೂತನ ದಂಪತಿಗಳಿಗೆ ಸಂತಾನ ಭಾಗ್ಯವಿದೆ.
 
ವೃಶ್ಚಿಕ: ಮನೆಯಲ್ಲಿ ಭಿನ್ನಾಭಿಪ್ರಾಯಗಳು ತಲೆದೋರುವುದು. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ಆರೋಗ್ಯವೂ ಕೈ ಕೊಡುವುದು. ಆರ್ಥಿಕವಾಗಿ ಸಮಾಧಾನಕರ ದಿನ. ನೆಮ್ಮದಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.
 
ಧನು: ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಚಿಂತೆಯಾಗುವುದು. ಸ್ತ್ರೀಯರಿಂದ ಅಪವಾದದ ಭೀತಿಯಿದೆ. ಆದರೆ ನೀವು ಕೈಗೊಂಡ ಕಾರ್ಯಗಳಲ್ಲಿ ಜಯ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರವಾಗಿರಿ.
 
ಮಕರ: ಅನಿರೀಕ್ಷಿತವಾಗಿ ಬರುವ ಶುಭ ಸುದ್ದಿ ನಿಮ್ಮ ಮನೆ, ಮನಸ್ಸಿಗೆ ಸಂತಸ ತುಂಬುವುದು. ಸಾಧ್ಯವಾದರೆ ಬೇಡಿ ಬಂದವರಿಗೆ ದಾನ ಮಾಡಿ. ಒಳಿತಾಗುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ.
 
ಕುಂಭ: ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಿ ಚೇತರಿಕೆ ಕಾಣುವಿರಿ. ಆಸ್ತಿ, ಮನೆ ಖರೀದಿಗೆ ಚಿಂತನೆ ನಡೆಸುವಿರಿ. ಆದರೆ ಪಾಲು ವ್ಯವಹಾರ ಮಾಡಲು ಹೋದರೆ ವಂಚನೆಗೊಳಗಾಗುವ ಸಾಧ್ಯತೆಯಿದೆ. ಎಚ್ಚರಿಕೆ ಅಗತ್ಯ.
 
ಮೀನ: ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಯಾವುದೇ ಕಷ್ಟಬಂದರೂ ಎದುರಿಸುವ ಧೈರ್ಯ ಬೆಳೆಸಿಕೊಳ್ಳಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರಿ ಕಿರಿ ಉಂಟಾಗಬಹುದು. ಆದಾಯ ಗಳಿಕೆಗೆ ನಾನಾ ಮಾರ್ಗದ ಬಗ್ಗೆ ಯೋಚನೆ ಮಾಡುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :