ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಆದರೆ ಸೂಕ್ತ ಅವಕಾಶ ಸಿಗದೇ ನಿರಾಸೆ ಅನುಭವಿಸುವಿರಿ. ಸಾಂಸಾರಿಕವಾಗಿ ಕುಟುಂಬ ಸದಸ್ಯರ ಸಹಕಾರ ಸಿಗಲಿದೆ. ಸಮಾಜದಲ್ಲಿ ಗೌರವ ಸಂಪಾದಿಸುತ್ತೀರಿ.ವೃಷಭ: ವಿದ್ಯಾರ್ಥಿಗಳಿಗೆ ಆಲಸ್ಯತನ ಕಾಡಲಿದೆ. ತಾಂತ್ರಿಕ ವೃತ್ತಿಯಲ್ಲಿರುವವರಿಗೆ ಕೆಲಸದೊತ್ತಡ ಹೆಚ್ಚಾಗಲಿದ್ದು, ದೇಹಾಯಾಸವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆದಾಯದಷ್ಟೇ ಖರ್ಚುಗಳೂ ತಲೆದೋರಲಿವೆ.ಮಿಥುನ: ಆಸ್ಥಿ, ಮನೆ ಖರೀದಿ ವ್ಯವಹಾರ ಮಾಡಲು ಸಕಾಲ.