Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 10 ಏಪ್ರಿಲ್ 2019 (07:09 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಯಾವುದೇ ಕೆಲಸಕ್ಕೆ ಮೊದಲು ಹಿರಿಯರ ಅಭಿಪ್ರಾಯ ಪಡೆದು ಮುಂದುವರಿಯುವುದು ಒಳ್ಳೆಯದು. ವಿದ್ಯಾರ್ಥಿಗಳಲ್ಲಿ ಹೊಸ ವಿಷಯ ಕಲಿಯುವ ಆಸಕ್ತಿ ಕಂಡುಬರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು.
 
ವೃಷಭ: ಪತ್ನಿಯ ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಧನವ್ಯಯವಾದೀತು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಂಡುಬರುತ್ತದೆ. ಕೌಟುಂಬಿಕವಾಗಿ ಇದುವರೆಗೆ ಇದ್ದ ಭಿನ್ನಾಭಿಪ್ರಾಯಗಳು ಹಂತ ಹಂತವಾಗಿ ದೂರವಾಗಿ ನೆಮ್ಮದಿ ಮೂಡುವುದು.
 
ಮಿಥುನ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸದ ವಾತಾವರಣವಿರಲಿದೆ. ಇದರ ಜತೆಗೆ ಖರ್ಚು ವೆಚ್ಚಗಳೂ ಹೆಚ್ಚಾಗಲಿವೆ. ಆಸ್ತಿ ವ್ಯವಹಾರದಲ್ಲಿ ದಾಯಾದಿಗಳು ಅಡ್ಡಗಾಲು ಹಾಕಲಿದ್ದಾರೆ. ಎಚ್ಚರಿಕೆಯಿರಲಿ.
 
ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರುಕುಳ ಉಂಟಾಗಲಿದೆ. ಹಾಗಿದ್ದರೂ ನಿಮ್ಮ ಮುನ್ನಡೆಗೆ ಯಾರೂ ಅಡ್ಡಿ ಮಾಡಲಾಗದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಲಿದೆ. ಓಡಾಟಗಳಿಂದ ದೇಹಾರೋಗ್ಯ ಕ್ಷೀಣಿಸಬಹುದು.
 
ಸಿಂಹ: ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಅನಿರೀಕ್ಷಿತವಾಗಿ ಕೆಲವೊಂದು ಜವಾಬ್ಧಾರಿಗಳು ಹೆಗಲಿಗೇರಲಿವೆ. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ನಡೆಸಬೇಕಾಗುತ್ತದೆ. ಸಂಚಾರದಲ್ಲಿ ಜಾಗ್ರತೆ ಇರಲಿ.
 
ಕನ್ಯಾ: ಮನಸ್ಸಿಗೆ ಹೇಗೆ ತೋಚುತ್ತದೋ ಹಾಗೇ ಕೆಲಸ ಕಾರ್ಯಗಳನ್ನು ನಡೆಸುತ್ತಾ ಹೋಗುವಿರಿ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಮನಸ್ಸು ಚಂಚಲಗೊಳ್ಳದಂತೆ ನೋಡಿಕೊಳ್ಳಿ.
 
ತುಲಾ: ಕಾರ್ಮಿಕ ವರ್ಗದವರಿಗೆ ಕಷ್ಟ ನಷ್ಟಗಳು ಎದುರಾಗಬಹುದು. ವಾಹನ ಚಾಲನೆ ವೃತ್ತಿಯಲ್ಲಿರುವವರಿಗೆ ಅಪಘಾತದ ಭಯವಿದೆ. ಬೇಡದ ಮಾತುಗಳಿಗೆ ಕಿವಿಗೊಡಬೇಡಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಶ್ಚಿಕ: ಉದ್ದೇಶಿತ ಕಾರ್ಯಗಳು ನೆರವೇರಬೇಕಾದರೆ ದೃಢ ಸಂಕಲ್ಪ ಬೇಕು. ಆರ್ಥಿಕವಾಗಿ ತುಸು ಚೇತರಿಕೆ ಕಂಡುಬರುವುದರಿಂದ ನೆಮ್ಮದಿ ಮೂಡುವುದು. ಹೊಸ ವಸ್ತುಗಳ ಖರೀದಿಗೆ ಚಿಂತನೆ ನಡೆಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಧನು: ಹಿತಶತ್ರುಗಳ ವಕ್ರ ದೃಷ್ಟಿ ನಿಮ್ಮ ಮೇಲಿರಲಿದೆ. ವಿದ್ಯಾರ್ಥಿಗಳಿಗೆ ಫಲಿತಾಂಶದಲ್ಲಿ ಕೊಂಚ ನಿರಾಶೆಯಾದೀತು. ಪೋಷಕರ ಚಿಂತೆಗೆ ಕಾರಣರಾಗುವಿರಿ. ಆರ್ಥಿಕ ಸ್ಥಿತಿ ಗತಿ ಉತ್ತಮವಾಗಿರಲಿದೆ. ಆದರೆ ನಿಮ್ಮ ಹಣ ಪೋಲು ಮಾಡದಂತೆ ಎಚ್ಚರಿಕೆ ವಹಿಸುವುದು ಮುಖ್ಯ.
 
ಮಕರ: ಮನೆಯಲ್ಲಿ ಶುಭ ಕಾರ್ಯಗಳು ನೆರವೇರುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸಾಂಸಾರಿಕವಾಗಿ ಶುಭ ವಾರ್ತೆಯೊಂದನ್ನು ಕೇಳುವಿರಿ. ದೈವಾನುಗ್ರಹದಿಂದ ಉದ್ಯೋಗ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸುವಿರಿ.
 
ಕುಂಭ: ದುಡುಕಿನ ವರ್ತನೆಯಿಂದ ಉದ್ದೇಶಿತ ಕಾರ್ಯ ಹಾಳುಮಾಡಿಕೊಳ್ಳಬೇಡಿ. ಬಂಧುಗಳಿಂದ ಕಿರಿ ಕಿರಿ ಇರಬಹುದು. ಎಲ್ಲದಕ್ಕೂ ತಾಳ್ಮೆಯೇ ಉತ್ತರವಾಗಬೇಕು. ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸುವಿರಿ.
 
ಮೀನ: ಕೋರ್ಟು ಕಚೇರಿ ವ್ಯವಹಾರಗಳಿಗೆ ಅಲೆದಾಡಬೇಕಾಗುತ್ತದೆ. ಹೆಚ್ಚಿನ ಹಣ ವ್ಯಯ ಮಾಡಬೇಕಾಗುತ್ತದೆ. ಅವಿವಾಹಿತರಿಗೆ ಸಾಕಷ್ಟು ವಿವಾಹ ಪ್ರಸ್ತಾಪಗಳು ಬರುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :