Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 12 ಏಪ್ರಿಲ್ 2019 (07:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಆದಾಯ ಖರ್ಚು ಸಮನಾಗಿರಲಿದೆ. ಆರೋಗ್ಯ ಚೆನ್ನಾಗಿದ್ದು, ಕುಟುಂಬದಲ್ಲಿ ಶುಭ ಕಾರ್ಯ ನೆರವೇರಿಸಲು ಮುಂದಾಗುವಿರಿ. ವ್ಯಾಪಾರದಲ್ಲಿ ಲಾಭ, ಉದ್ಯೋಗ ವ್ಯವಹಾರಗಳು ಸುಗಮವಾಗಿ ನಡೆಯುವುದು.
 
ವೃಷಭ: ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಆದರೆ ಋಣ ಬಾಧೆಯಿಂದ ಮುಕ್ತರಾಗುವಿರಿ. ಆರೋಗ್ಯ ಸುಧಾರಿಸುವುದು. ಸರ್ಕಾರಿ ಕೆಲಸಗಳಲ್ಲಿ ವಿಳಂಬ. ವ್ಯವಹಾರಗಳಲ್ಲಿ ಲಾಭ. ಕೊಡು-ಕೊಳ್ಳುವಿಕೆ ವ್ಯವಹಾರ ಮಾಡುವಿರಿ.
 
ಮಿಥುನ: ಆರ್ಥಿಕವಾಗಿ ಸಾಕಷ್ಟು ಉಳಿತಾಯ ಮಾಡುವಿರಿ. ಆರೋಗ್ಯ ಚೆನ್ನಾಗಿರಲಿದ್ದು, ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣುವಿರಿ. ಉದ್ಯೋಗ, ವ್ಯವಹಾರಗಳು ಸುಗಮವಾಗಿ ಸಾಗುವುದು. ಸರ್ಕಾರಿ ಕೆಲಸಗಳಲ್ಲಿ ವಿಘ್ನ ಕಂಡುಬರಬಹುದು.
 
ಕರ್ಕಟಕ: ಹೆಚ್ಚು ಶುಭ ಫಲಗಳನ್ನು ಪಡೆಯುವಿರಿ. ವಿದೇಶ ಪ್ರಯಾಣ, ತೀರ್ಥಯಾತ್ರೆ, ಪ್ರವಾಸ ಭಾಗ್ಯವಿರಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರಲಿವೆ. ಕಷ್ಟದಲ್ಲಿದ್ದ ಬಂಧುಮಿತ್ರರಿಗೆ ಸಹಾಯ ಮಾಡುವಿರಿ.
 
ಸಿಂಹ: ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಚಿಂತೆಗೀಡಾಗುವಿರಿ. ಉದ್ಯೋಗ, ವ್ಯವಹಾರಗಳಿಗೆ ಹಣಕಾಸಿನ ತೊಂದರೆ ಎದುರಾಗುವುದು. ಆರೋಗ್ಯ ಚೆನ್ನಾಗಿರುವುದು. ಸರ್ಕಾರಿ ಕೆಲಸಗಳು ಸುಗಮವಾಗುವುದು. ಪ್ರಯಾಣ ಮಾಡಬೇಕಾಗಿ ಬರುತ್ತದೆ. ವಿವಾಹ ಕಾರ್ಯಗಳು ಜರಗುವುದು.
 
ಕನ್ಯಾ: ಆರ್ಥಿಕವಾಗಿ ಸಾಕಷ್ಟು ಧನಾಗಮನವಾಗಲಿದ್ದು, ಖರ್ಚು ವೆಚ್ಚಗಳು ಕಡಿಮೆಯಾಗುವುದು. ವಿದೇಶ ಪ್ರಯಾಣ ಯೋಗವಿದೆ. ಮಿತ್ರರಿಂದ ಅನುಕೂಲವಾಗಲಿದೆ. ವಿವಾಹ ಇತ್ಯಾದಿ ಮಂಗಲ ಕಾರ್ಯಗಳು ನೆರವೇರುವುದು.
 
ತುಲಾ: ವ್ಯಾಪಾರ, ವ್ಯವಹಾರಗಳಲ್ಲಿ ದೈವಾನುಗ್ರಹದಿಂದ ಲಾಭ ಗಳಿಸುವಿರಿ. ಆದಾಯ ಹೆಚ್ಚುವುದು. ಸಾಲ, ಬಾಕಿ ಹಣ ತೀರಿಸುವಿರಿ. ಮನೆಯಲ್ಲಿ ವಿವಾಹ, ಗೃಹಪ್ರವೇಶ ಇತ್ಯಾದಿ ಶುಭ ಕಾರ್ಯ ನಡೆಸಲು ಚಿಂತನೆ ಮಾಡುವಿರಿ.
 
ವೃಶ್ಚಿಕ: ಖರ್ಚು ಇದ್ದಷ್ಟೇ ಆದಾಯವೂ ದೊರೆಯುವುದರಿಂದ ಚಿಂತೆ ಬೇಡ. ಆರೋಗ್ಯ ಸುಧಾರಿಸುವುದು. ಆದರೆ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ವ್ಯಾಪಾರ, ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಸಾರ್ವಜನಿಕವಾಗಿ ಗೌರವ ಸಂಪಾದಿಸಲಿದ್ದೀರಿ.
 
ಧನು: ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಗುರುವಿನ ಅನುಗ್ರಹದಿಂದ ಶುಭ ಫಲಗಳನ್ನೂ ಕಾಣುವಿರಿ. ಕೆಲಸ ಕಾರ್ಯಗಳಲ್ಲಿ ಅಡಚಣೆಯಿದ್ದರೂ ಕಾರ್ಯ ಸಿದ್ಧಿಯಾಗುವುದು. ಬಂಧು ಮಿತ್ರರ ಸಹಕಾರ ದೊರೆಯುವುದು.
 
ಮಕರ: ಸಾಕಷ್ಟು ಧನಲಾಭವಾಗಲಿದೆ. ಆದಾಯಕ್ಕೇನೂ ಕೊರತೆಯಾಗದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಆದರೆ ಬಂಧು ಮಿತ್ರರು ಮುನಿಸಿಕೊಂಡಾರು. ಸರ್ಕಾರಿ ಕೆಲಸಗಳಲ್ಲಿ ಜಯ ಕಾಣುವಿರಿ.
 
ಕುಂಭ: ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಆರೋಗ್ಯ ಸುಧಾರಿಸುವುದು. ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಬಂಧು ಮಿತ್ರರಿಗೆ ಸಹಾಯ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ವ್ಯಾಪಾರದಲ್ಲಿ ಲಾಭ ಗಳಿಸುವಿರಿ.
 
ಮೀನ: ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಚಿಂತೆಗೀಡಾಗುವಿರಿ. ಮನಸ್ಸಿನ ಚಿಂತೆಯಿಂದ ಆರೋಗ್ಯ ಕೆಡಿಸಿಕೊಳ್ಳಬೇಡಿ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಕಂಡುಬರುವುದು. ವಿದೇಶ ಯಾತ್ರೆ ಸಾಧ್ಯತೆಯಿದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ತಯಾರಿ ನಡೆಸುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :