Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 13 ಏಪ್ರಿಲ್ 2019 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ರಾಹು ಲಾಭದಾಯಕನಾಗಿದ್ದು, ಎಲ್ಲಾ ಕ್ಷೇತ್ರದಲ್ಲೂ ಸಹಕಾರ ನೀಡುತ್ತಾನೆ. ನಿಮ್ಮ ಪರಿಶ್ರಮ, ಕ್ರಿಯಾಶೀಲತೆಗೆ ಉದ್ಯೋಗ ಕ್ಷೇತ್ರದಲ್ಲಿ ಸರಿಯಾದ ಸ್ಥಾನ ಮಾನ ದೊರಕುತ್ತದೆ. ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುವಿರಿ.
 
ವೃಷಭ: ಹಲವು ದಿನಗಳಿಂದ ಪತಿ-ಪತ್ನಿಯರ ಮಧ್ಯೆ ಇದ್ದ ಮುನಿಸು, ಅಸಮಾಧಾನಗಳು ನಿವಾರಣೆಯಾಗಲಿದ್ದು, ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದೈವಾನುಗ್ರಹದಿಂದ ಶುಭ ದಿನ ನಿಮ್ಮದಾಗಲಿದೆ.
 
ಮಿಥುನ: ನಿಮಗೆ ಅನುಕೂಲಕರವಲ್ಲದ ಪರಿಸ್ಥಿತಿಗಳು ಎದುರಾಗಲಿದ್ದು, ಸಂಷಕ್ಟಕ್ಕೆ ಸಿಲುಕುವಿರಿ. ನ್ಯಾಯಾಲಯದಲ್ಲಿ ವಾದ ವಿವಾದಗಳಲ್ಲಿ ಅಪಜಯದ ಭೀತಿ. ಖರ್ಚೂ ಹೆಚ್ಚುವುದು. ತಾಳ್ಮೆಯಿಂದ ಮುನ್ನಡೆಯಬೇಕಾದ ಅಗತ್ಯವಿದೆ.
 
ಕರ್ಕಟಕ: ಸಂಗಾತಿಯ ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚಿನ ಧನವ್ಯಯವಾದೀತು. ಆದರೆ ಸಂತೋಷಕ್ಕೆ ಕೊರತೆಯಿಲ್ಲ. ಇಷ್ಟ ಮಿತ್ರರ ಭೇಟಿ, ಭೋಜನ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಸಿಂಹ: ಹಿರಿಯರನ್ನು ಪುಣ್ಯ ಕ್ಷೇತ್ರಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುವಿರಿ.ಶೈಕ್ಷಣಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಮುನ್ನಡೆ ಸಿಗಲಿದೆ. ಆದರೆ ಆಗಾಗ ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಂದ ಹಿನ್ನಡೆ ಅನುಭವಿಸುವಿರಿ.
 
ಕನ್ಯಾ: ತಾಳ್ಮೆ, ಸಮಾಧಾನದಿಂದ ಮುನ್ನಡೆದರೆ ಕಾರ್ಯ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚಗಳಾಗಬಹುದು.
 
ತುಲಾ: ಹೊಸ ಉದ್ಯೋಗಕ್ಕೆ ಕೈ ಹಾಕಿದರೆ ಆರ್ಥಿಕವಾಗಿ ಲಾಭ ಪಡೆಯುವಿರಿ. ದಾಯಾದಿಗಳೊಂದಿಗೆ ಇದುವರೆಗೆ ಇದ್ದ ಅಸಮಾಧಾನಗಳು ದೂರವಾಗಿ ಉತ್ತಮ ಬಾಂಧವ್ಯ ಹೊಂದುವಿರಿ. ವೃತ್ತಿರಂಗದಲ್ಲಿ ಕ್ರಿಯಾಶೀಲರಾಗಿರಬೇಕಾಗುತ್ತದೆ.
 
ವೃಶ್ಚಿಕ: ಆರ್ಥಿಕ ಸಮಸ್ಯೆಗಳಿಂದಾಗಿ ಅಂದುಕೊಂಡ ಕಾರ್ಯ ನೆರವೇರದು. ಆದರೆ ದಿನದಂತ್ಯಕ್ಕೆ ಅನಿರೀಕ್ಷಿತವಾಗಿ ಧನಾಗಮನವಾಗಲಿದೆ. ವಿದ್ಯಾರ್ಥಿಗಳು ಉತ್ತಮ ಫಲ ಪಡೆಯುವರು. ವ್ಯಾಪಾರಿಗಳು ಲಾಭ ಗಳಿಸುವರು.
 
ಧನು: ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಬಹುದು. ಸಹೋದರರಿಂದ ಕಿರಿ ಕಿರಿ ಉಂಟಾಗಬಹುದು. ಸಂಗಾತಿಯ ಮಾತಿಗೆ ಕಿವಿಗೊಡಿ. ಅನವಶ್ಯಕವಾಗಿ ಅಪವಾದಕ್ಕೆ ಗುರಿಯಾಗುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಕರ: ಗೃಹ ನಿರ್ಮಾಣ, ಆಸ್ತಿ ಖರೀದಿ ಇತ್ಯಾದಿ ಕೆಲಸಗಳಿಗೆ ಕೈ ಹಾಕುವಿರಿ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಓಡಾಟ ನಡೆಸುವಿರಿ. ದೂರ ಸಂಚಾರದಿಂದ ಕಾರ್ಯ ಸಿದ್ಧಿ. ಆದರೆ ಖರ್ಚು ವೆಚ್ಚಗಳು ಅಧಿಕವಾಗುವುದು. ಎಚ್ಚರಿಕೆ ಅಗತ್ಯ.
 
ಕುಂಭ: ಅವಿವಾಹಿತರು ಯೋಗ್ಯ ವಿವಾಹ ಪ್ರಸ್ತಾಪಕ್ಕೆ ಕೆಲವು ದಿನ ಕಾಯುವುದು ಒಳ್ಳೆಯದು. ಆತ್ಮಸ್ಥೈರ್ಯದಿಂದ ಮುನ್ನಡೆದರೆ ಕಾರ್ಯ ಸಿದ್ಧಿ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಕಂಡುಕೊಳ್ಳುವರು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮೀನ: ಉದ್ಯೋಗ ಕ್ಷೇತ್ರದಲ್ಲಿ, ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ಕೊಂಚ ಪರಿಶ್ರಮವಿದ್ದರೂ ಕಾರ್ಯ ಸಾಧನೆಯಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :