Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 14 ಏಪ್ರಿಲ್ 2019 (05:09 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಬಂಧು ಮಿತ್ರರನ್ನು ಕೂಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ ಯೋಗವಿದೆ. ವ್ಯಾಪಾರಿಗಳಿಗೆ ಕೊಂಚ ನಷ್ಟವಾಗಬಹುದು.
 
ವೃಷಭ: ಮಕ್ಕಳ ಅಭವೃದ್ಧಿ ಮನಸ್ಸಿಗೆ ಸಂತೋಷ ನೀಡಲಿದೆ. ಹಿರಿಯರ ಆರೋಗ್ಯದಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗವಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ.
 
ಮಿಥುನ: ಕಷ್ಟ ಕಾಲದಲ್ಲಿ ಬಂಧು ಮಿತ್ರರ ಸಹಕಾರ, ನೆರವು ದೊರೆಯಲಿದೆ. ಹಿರಿಯರ ಮಾತಿಗೆ ಬೆಲೆ ಕೊಡಬೇಕಾಗುತ್ತದೆ. ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿ ನಿಭಾಯಿಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಾಧ್ಯತೆಯಿದೆ.
 
ಕರ್ಕಟಕ: ಯಾವುದೇ ಕೆಲಸಕ್ಕೆ ಹೊರಟರೂ ಗುರುಹಿರಿಯರ ಅನುಗ್ರಹ ಪಡೆದೇ ಮುನ್ನಡೆಯಿರಿ. ಬಂಧುಗಳೊಂದಿಗೆ ವಾದ-ವಿವಾದವಾಗುವ ಸಾಧ್ಯತೆಯಿದೆ. ಕೆಲಸ ಕಾರ್ಯದಲ್ಲಿ ನಿರೀಕ್ಷಿತ ಮುನ್ನಡೆ, ಜಯ ಸಿಗುವುದು.
 
ಸಿಂಹ: ಸಾಮಾಜಿಕವಾಗಿ ನಿಮ್ಮೆ ಕೆಲಸಗಳಿಗೆ ಮುನ್ನಡೆ, ಪ್ರಶಂಸೆ ದೊರೆಯಲಿದೆ. ಸರಕಾರಿ ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಸಂಭವವಿದೆ. ಆದರೂ ವಿನಾಕಾರಣಕ್ಕೆ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಎಚ್ಚರವಾಗಿರಿ.
 
ಕನ್ಯಾ: ಮನೆ ಮಂದಿಗೆ ಯಾರಿಗಾದರೂ ಹುಷಾರು ತಪ್ಪಿ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಉದ್ಯೋಗಿಗಳಿಗೆ ಹಿನ್ನಡೆ ಅನುಭವವಾಗಲಿದೆ. ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ. ಕೋರ್ಟು ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ.
 
ತುಲಾ: ಭೂಮಿ, ಮನೆ, ವಾಹನ ಖರೀದಿ ಯೋಗವಿದೆ. ಆದರೆ ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸಬೇಕು. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಅವಿವಾಹಿತರು ಕಂಕಣ ಬಲ ಕೂಡಿ ಬರಲು ಕೆಲವು ಸಮಯ ಕಾಯಬೇಕಾಗುತ್ತದೆ.
 
ವೃಶ್ಚಿಕ: ಬಂಧು ಮಿತ್ರರು, ಕುಟುಂಬ ಸದಸ್ಯರೊಳಗೇ ಕಲಹವಾಗುವ ಸಂಭವವಿದೆ. ದಾಂಪತ್ಯದಲ್ಲಿ ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಭೋಜನ ಮಾಡುವಾಗ ಹಿತಮಿತವಾಗಿರಿ.
 
ಧನು: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಹೆಚ್ಚಿನ ಧನವ್ಯಯವಾದೀತು. ಮಕ್ಕಳಿಂದ ಸಂತೋಷ ಸಿಗಲಿದೆ. ದೂರ ಪ್ರಯಾಣ ಸಾಧ್ಯತೆಯಿದೆ. ದಾಯಾದಿಗಳು ವಂಚನೆ ಮಾಡುವರು. ಹಾಗಾಗಿ ಎಚ್ಚರಿಕೆಯಿಂದಿರಿ.
 
ಮಕರ: ಹೆಚ್ಚಿನ ಆತ್ಮವಿಶ್ವಾಸದಿಂದ ಮುನ್ನಡೆಯಬೇಕಾದ ಕಾಲವಿದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರಗಳಲ್ಲಿ ಜಯ.
 
ಕುಂಭ: ಕೃಷಿ ಕ್ಷೇತ್ರದಲ್ಲಿರುವವರು ನೀರಿಗಾಗಿ ಪರದಾಟ ನಡೆಸಬೇಕಾಗಬಹುದು. ಕಾರ್ಯನಿಮಿತ್ತ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಂಡುಬರಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.
 
ಮೀನ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಕ್ಕಿ ಮುನ್ನಡೆ ಕಾಣುವಿರಿ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳಾಗಬಹುದು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :