ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 27 ಏಪ್ರಿಲ್ 2019 (06:32 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಆಪ್ತೇಷ್ಟರ ಭೇಟಿ ಮನಸ್ಸಿಗೆ ಸಂತಸ ನೀಡುವುದು. ಮಕ್ಕಳಿಂದ ಖುಷಿಯ ವಾತಾವರಣ. ಪಾಲು ಬಂಡವಾಳ ಹೂಡಿಕೆ ವಿಚಾರದಲ್ಲಿ ಲಾಭ ಗಳಿಸುವಿರಿ. ಆರ್ಥಿಕವಾಗಿ ಸಮಾಧಾನಕರ ದಿನ. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಷಭ: ಬಯಸಿದ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುವುದು. ಆದರೆ ಹಿತಶತ್ರುಗಳಿಂದ ಮನಸ್ಸಿಗೆ ಕಿರಿ ಕಿರಿಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ಮುನ್ನಡೆ ಸಾಧ್ಯತೆಯಿದೆ. ವ್ಯಾಪಾರ ವ್ಯವಹಾರಗಳಿಂದ ಲಾಭ.
 
ಮಿಥುನ: ಕಷ್ಟದ ಸಂದರ್ಭದಲ್ಲಿ ಮಹಿಳೆಯರಿಂದ ಪರಿಹಾರ ಸಿಗುವುದು. ಆರ್ಥಿಕವಾಗಿ ಸಂಕಷ್ಟದ ಸಮಯ. ವಿವಾಹ ಪ್ರಸ್ತಾಪಗಳು ಬಂದರೂ ಮನಸ್ಸಿಗೆ ಹಿಡಿಸದು. ಬಂಡವಾಳ ಹೂಡಿಕೆಯಲ್ಲಿ ಎಚ್ಚರ ವಹಿಸಿ.
 
ಕರ್ಕಟಕ: ಸಂಗಾತಿಯಿಂದ ಸಹಾಯ ಸಿಗುವುದು. ಪತ್ನಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಂಡುಬರಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಸಿಂಹ: ಆಗಾಗ ಆರ್ಥಿಕ ಮುಗ್ಗಟ್ಟುಗಳು ಎದುರಾಗುವುದು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಆದರೆ ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬೇಕಾಗುತ್ತದೆ.
 
 
ಕನ್ಯಾ: ಇಂದು ದೈವಾನುಕೂಲದಿಂದ ಕೈಗೊಂಡ ಕಾರ್ಯಗಳು ಸುಗಮವಾಗಿ ನೆರವೇರುವುದು. ವ್ಯಾಪಾರ, ವ್ಯವಹಾರಗಳಲ್ಲಿ ಜಯ. ಆರ್ಥಿಕವಾಗಿ ಲಾಭ ಗಳಿಸುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.
 
ತುಲಾ: ನಿಮ್ಮ ಉತ್ತಮ ನಡವಳಿಕೆಗೆ ಶತ್ರುಗಳೇ ಮನಸೋಲುವರು. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
 
ವೃಶ್ಚಿಕ: ವ್ಯಾಪಾರ, ವ್ಯವಹಾರಗಳಿಂದ ನಷ್ಟ ಅನುಭವಿಸಬೇಕಾದೀತು. ತಾಳ್ಮೆ ಸಮಾಧಾನದಿಂದಲೇ ಮುಂದುವರಿಯಬೇಕು. ವಿದ್ಯಾರ್ಥಿಗಳಿಗೆ ಕೊಂಚ ನಿರಾಶಾದಾಯಕ ಫಲಿತಾಂಶ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಧನು: ಬಂಧು ಮಿತ್ರರ ಸಹಕಾರ ದೊರೆಯಲಿದೆ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅಲ್ಪ ಮುನ್ನಡೆ ಇರಲಿದೆ. ಆರ್ಥಿಕ ಮುಗ್ಗಟ್ಟುಗಳು ಎದುರಾಗಬಹುದು.
 
ಮಕರ: ಮನೆ ಬದಲಾವಣೆ, ಹೊಸ ವಸ್ತುಗಳ ಖರೀದಿಗೆ ಚಿಂತನೆ ನಡೆಸುವಿರಿ. ವ್ಯವಹಾರಗಳಲ್ಲಿ ಜಯ ಕಾಣುವಿರಿ. ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.
 
ಕುಂಭ: ಮಾತಿನಲ್ಲಿ ದುಡುಕದಿರಿ. ವಾದ ವಿವಾದಗಳಾಗುವ ಸಾಧ್ಯತೆಯಿದೆ. ಕಾರ್ಯದೊತ್ತಡ ಹೆಚ್ಚಿ ದೇಹ ಹೈರಾಣಾಗಲಿದೆ. ಮಕ್ಕಳ ಬಗ್ಗೆ ಚಿಂತೆ ಮಾಡಬೇಕಾಗುವುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಮೀನ: ಅವಿವಾಹಿತರಿಗೆ ವಿವಾಹ ಭಾಗ್ಯ. ಸಂತಾನಹೀನರಿಗೆ ಶುಭ ಸೂಚಕ ಫಲಗಳಿರಲಿದೆ. ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಮನಸ್ಸಿಗೆ ಸಂತಸವಾಗುವುದು. ಶುಭ ಮಂಗಲಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...

news

ಕುಜ ಅಥವಾ ಬುಧ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

ಬೆಂಗಳೂರು: ಹೆಚ್ಚಿನವರು ಕುಜ ಮತ್ತ ಬುಧ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಶ್ರೀಕೃಷ್ಣ ದೇವರು ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?

ಬೆಂಗಳೂರು: ಗುಜರಾತ್ ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥ ಸ್ಥಳವಾಗಿದೆ. ಇದು ಕೇವಲ ...