ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದರೂ ಅಂತಿಮವಾಗಿ ನಿಮ್ಮ ಕಾರ್ಯಸಾಧನೆಯಾಗಬಹುದು. ಸಂಗಾತಿಯೊಂದಿಗೆ ಮನಸ್ತಾಪವಾಗಬಹುದು. ಆರ್ಥಿಕವಾಗಿ ಧನಾಗಮನವಾಗಲಿದೆ.ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ವಿದೇ ಪ್ರಯಾಣ ಯೋಗವಿದೆ. ಆರ್ಥಿಕವಾಗಿ ಧನಾಗಮನವಾದಷ್ಟೇ ಖರ್ಚೂ ಹೆಚ್ಚಲಿದೆ.ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದಾದರೂ ಮನಸ್ಸಿಗೆ ಹಿಡಿಸದು. ವ್ಯಾಪಾರಿಗಳು ಕೊಂಚ ನಷ್ಟ ಅನುಭವಿಸಬೇಕಾದೀತು.