Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 9 ಮೇ 2019 (07:11 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕೌಟುಂಬಿಕ ಜವಾಬ್ಧಾರಿಗಳ ನಿರ್ವಹಣೆಗೆ ಮುಂದಾಗುವರಿ. ದುಡುಕು ಮಾತುಗಳಿಂದ ಸಂಬಂಧ ಹಾಳುಮಾಡಿಕೊಳ್ಳಬೇಡಿ. ಅವಸರದ ನಿರ್ಧಾರಗಳನ್ನು ಮಾಡಬೇಡಿ.
 
ವೃಷಭ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲು ಕಠಿಣ ಪರಿಶ್ರಮದ ಅಗತ್ಯವಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಅವಿವಾಹಿತರಿಗೆ ಕಂಕಣ ಬಲ ಅಗತ್ಯ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಿಥುನ: ಕಾರ್ಯ ಸಾಧನೆ ಮಾಡುವಾಗ ಹಲವು ಅಡಚಣೆಗಳು ಉಂಟಾಗುವುದು. ತಾಳ್ಮೆ ಕಳೆದುಕೊಳ್ಳಬೇಡಿ. ಆರ್ಥಿಕವಾಗಿ ಧನಲಾಭವಾಗಲಿದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ ಲಾಭ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕರ್ಕಟಕ: ವೈವಾಹಿಕ ಜೀವನದಲ್ಲಿ ಇದುವರೆಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ ನೆಮ್ಮದಿ ನೆಲೆಸಲಿದೆ. ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಖರ್ಚು ವೆಚ್ಚಗಳ ಬಗ್ಗೆ ಗಮನಕೊಡಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಸಿಂಹ: ದೇಹಾರೋಗ್ಯದಲ್ಲಿ ಏರುಪೇರಾಗುವುದು ಮತ್ತು ಗಾಬರಿಯಾಗುವುದು ಬೇಡ. ನೌಕರ ವರ್ಗದವರಿಗೆ ಬಡ್ತಿ, ಮುನ್ನಡೆ ಯೋಗ. ಧನಾಮನವಾದಷ್ಟೇ ಖರ್ಚು ವೆಚ್ಚಗಳಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.
 
 
ಕನ್ಯಾ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಸಾಂಸಾರಿಕವಾಗಿ ಸ್ವಲ್ಪ ಎಚ್ಚರತಪ್ಪಿದರೂ ಕಲಹ ತಪ್ಪಿದ್ದಲ್ಲ. ವೈವಾಹಿಕ ಪ್ರಸ್ತಾಪಗಳು ಬರುವುದಾದರೂ ಮನಸ್ಸಿಗೆ ಒಪ್ಪಿಗೆಯಾಗದು. ತಾಳ್ಮೆಯಿಂದಿರಿ.
 
ತುಲಾ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇರಬಹುದು. ಆದರೆ ಸಹೋದ್ಯೋಗಿಗಳ ಸಹಕಾರ ಇರುವುದರಿಂದ ಅಂತಿಮ ಜಯ ಸಾಧಿಸುವಿರಿ. ವಿದ್ಯಾರ್ಥಿಗಳಿಗೆ ಶಿಕ್ಷಕ ವರ್ಗದಿಂದ ಪ್ರಶಂಸೆ ವ್ಯಕ್ತವಾಗುವುದು.
 
ವೃಶ್ಚಿಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ವ್ಯಾಪಾರಿಗಳು ಬಂಡವಾಳ ಹೂಡಿಕೆ ಮಾಡುವಾಗ ಕಾಗದ ಪತ್ರಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ನೆರೆಹೊರೆಯವರೊಂದಿಗೆ ನಿಷ್ಠುರ ಮಾಡಿಕೊಳ್ಳಬೇಡಿ.
 
ಧನು: ನಿಮ್ಮ ಮೂಗಿನ ನೇರಕ್ಕೆ ನಿರ್ಧಾರ ಕೈಗೊಳ್ಳುವುದರಿಂದ ಇತರರ ಅಸಮಾಧಾನಕ್ಕೆ ಕಾರಣರಾಗುವಿರಿ. ಮಕ್ಕಳ ಆಗಮನ ಸಂತಸ ನೀಡಲಿದೆ. ಕೌಟುಂಬಿಕವಾಗಿ ಸಾಕಷ್ಟು ಕೆಲಸದೊತ್ತಡವಿರುವುದು.
 
ಮಕರ: ದೈವಾನುಕೂಲದಿಂದ ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳು ನೆರವೇರಲಿವೆ. ನೂತನ ದಂಪತಿಗಳಲ್ಲಿ ವಿರಸ ಕಂಡುಬರಬಹುದು. ಮಾತಿನ ಮೇಲೆ ನಿಗಾ ಇರಲಿ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ.
 
ಕುಂಭ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಸಿಗಲಿದೆ. ಉದ್ಯೋಗದಲ್ಲಿ ಗೊಂದಲದ ವಾತಾವರಣವಿರಲಿದೆ. ಸಮಾಧಾನದಿಂದ ಸರಿದೂಗಿಸಿಕೊಂಡು ಹೋಗಬೇಕಾಗುವುದು. ದೇವತಾ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ.
 
ಮೀನ: ದೃಢ ಚಿತ್ತದಿಂದ ನಿರ್ಧಾರ ಕೈಗೊಳ್ಳಬೇಕಾದ ಸಮಯವಿದು. ಹೆಚ್ಚಿನ ಕಾರ್ಯಲಾಭವಾಗಬೇಕಾದರೆ ಕುಲದೇವರ ಪ್ರಾರ್ಥನೆ ಮಾಡಿ ಮುಂದುವರಿಯಿರಿ. ಸಾಲಗಳು ಮರುಪಾವತಿಯಾಗಿ ಆರ್ಥಿಕವಾಗಿ ಚೇತರಿಕೆ ಕಾಣುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :