ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕೌಟುಂಬಿಕವಾಗಿ ಸಂತೋಷದ ಸಮಯ ನಿಮ್ಮದಾಗಿರುತ್ತದೆ. ಇಷ್ಟ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ಆದರೆ ದಾಯಾದಿಗಳ ಅಸಮಾಧಾನಕ್ಕೆ ಕಾರಣರಾಗುವಿರಿ.ವೃಷಭ: ಸಾಂಸಾರಿಕವಾಗಿ ಮನಸ್ಸಿಗೆ ನೆಮ್ಮದಿ ಇರುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಇರಲಿದೆ.ಮಿಥುನ: ಕಾರ್ಯ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡವಿರುತ್ತದೆ. ಇದರಿಂದ ದೇಹಾಯಾಸವಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯ