Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 16 ಮೇ 2019 (07:46 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ಕೂಡಿಟ್ಟ ಹಣವನ್ನು ಸುರಕ್ಷಿತವಾಗಿ ಕಾಪಾಡುವ ಚಿಂತೆ ಕಾಡಲಿದೆ. ಸಾಂಸಾರಿಕವಾಗಿ ಹಿರಿಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದೆ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಕೆಳಹಂತದ ನೌಕರ ವರ್ಗದವರಿಗೆ ಬಡ್ತಿ, ಮುನ್ನಡೆ ಯೋಗವಿದೆ. ಆರ್ಥಿಕವಾಗಿ ಸುಧಾರಣೆ ಕಂಡುಬರಲಿದೆ. ಮಕ್ಕಳ ವಿವಾಹ ಪ್ರಯತ್ನಕ್ಕೆ ಫಲ ದೊರಕೀತು. ದೇವತಾ ಪ್ರಾರ್ಥನೆ ಮಾಡಿ.
 
ಮಿಥುನ: ಕಾರ್ಯನಿಮಿತ್ತ ನಿರಂತರ ಪ್ರಯಾಣ ಮಾಡುವುದರಿಂದ ದೇಹಾರೋಗ್ಯ ಕೈಕೊಟ್ಟೀತು. ಮಕ್ಕಳ ವಿವಾಹ ಪ್ರಯತ್ನಕ್ಕೆ ಹಿನ್ನಡೆಯಾದರೂ ಪ್ರಯತ್ನ ಬಿಡಬೇಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ತೋರಿಬರಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ವ್ಯಾಪಾರ ವಹಿವಾಟಿನಲ್ಲಿ ಲಾಭ ಸಿಗಲಿದೆ. ಆದರೆ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಬೇಕು.
 
ಸಿಂಹ: ಆಪ್ತರೊಂದಿಗೆ ಮಾತಿನಲ್ಲಿ ದುಡುಕಿ ಸಂಬಂಧ ಹಾಳುಮಾಡಿಕೊಳ್ಳಬೇಡಿ. ಆದಾಯದಲ್ಲಿ ಲಾಭವಿದ್ದರೂ ಅಧಿಕ ಖರ್ಚು ವೆಚ್ಚಗಳಗಾದಂತೆ ನೋಡಿಕೊಳ್ಳಬೇಕು. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.
 
 
ಕನ್ಯಾ: ಹಿರಿಯರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ವರ್ಗಾವಣೆಯಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ತುಲಾ: ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿರುವವರಿಗೆ ಅಧಿಕ ಲಾಭದ ಸಾಧ್ಯತೆಯಿದ್ದರೂ ವಂಚನೆಗೊಳೊಗಾದಂತೆ ಎಚ್ಚರಿಕೆ ವಹಿಸಬೇಕಿದೆ. ಅಧಿಕಾರಿ ವರ್ಗದವರಿಗೆ ಕಾರ್ಯದೊತ್ತಡ ಹೆಚ್ಚಲಿದೆ. ತಾಳ್ಮೆ ಅಗತ್ಯ.
 
ವೃಶ್ಚಿಕ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಉತ್ತಮಗೊಳ್ಳುವುದು. ಆದರೆ ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ವಿನಾಕಾರಣ ಅಪವಾದಕ್ಕೆ ಗುರಿಯಾಗುವ ಸಂಭವವೂ ಇದೆ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ.
 
ಧನು: ಇಷ್ಟ ಮಿತ್ರರ ಭೇಟಿ, ಭೋಜನ ಸಾಧ್ಯತೆಯಿದೆ. ಕೌಟುಂಬಿಕವಾಗಿ ವಿನಾಕಾರಣ ಮಾನಸಿಕ ಕ್ಷೋಭೆ ಮಾಡಿಕೊಂಡು ಮನೆಯವರ ಅಸಮಾಧಾನಕ್ಕೆ ಗುರಿಯಾಗುವಿರಿ. ದಾಯಾದಿಗಳ ಕಿರಿ ಕಿರಿ ಇರಬಹುದು.
 
ಮಕರ: ವಾಹನ, ಭೂಮಿ ಖರೀದಿಗೆ ಉತ್ತಮ ಸಮಯ. ಆದರೆ ಸಾಲ ಮಾಡಲು ಹೋಗಬೇಡಿ. ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ ನಿಮ್ಮದಾಗುವುದು. ನಿರುದ್ಯೋಗಿಗಳು ಉದ್ಯೋಗ ಅರಸಿಕೊಂಡು ದೂರ ಸಂಚಾರ ಮಾಡಬೇಕಾಗುತ್ತದೆ.
 
ಕುಂಭ: ದಾಯಾದಿಗಳೊಂದಿಗೆ ಆಸ್ತಿ ವಿಚಾರಗಳ ವ್ಯಾಜ್ಯವಿದ್ದರೆ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿ. ವಾತ ಪ್ರಕೃತಿಯ ಶರೀರದವರಿಗೆ ಆರೋಗ್ಯ ಸಮಸ್ಯೆ ಕಂಡುಬರಬಹುದು. ಖರ್ಚು ವೆಚ್ಚಗಳ ಬಗ್ಗೆ ಕಾಳಜಿ ವಹಿಸಿ.
 
ಮೀನ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ಸಾಮಾಜಿಕ ಕೆಲಸಗಳಿಗೆ ಮನ್ನಣೆ ಸಿಗುವುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಕುಲದೇವರ ಪ್ರಾರ್ಥನೆ ಮಾಡಿದರೆ ಎಲ್ಲವೂ ಒಳ್ಳೆಯದಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :