ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ಪ್ರಾಮಾಣಿಕವಾಗಿದ್ದರೂ ವಿನಾಕಾರಣ ಅಪವಾದದಿಂದಾಗಿ ಬೇಸರವಾದೀತು. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿರುವುದು.ವೃಷಭ: ಅನವಶ್ಯಕವಾಗಿ ಕಲಹಕ್ಕೆ ಎಡೆಮಾಡಿಕೊಡದಿರಿ. ಆರೋಗ್ಯ ಭಾಗ್ಯ ಸುಧಾರಿಸಲಿದೆ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ನೂತನ ದಂಪತಿಗಳಿಗೆ ಸಂತಸದ ವಾರ್ತೆಯಿದೆ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇದ್ದರೂ ನಿಮ್ಮ ಮುನ್ನಡೆಗೆ ತೊಂದರೆಯಾಗದು. ಸರ್ಕಾರಿ ಕೆಲಸ ಕಾರ್ಯಗಳಿಂದ ಕಾರ್ಯ ಸಾಧನೆಗೆ