ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 23 ಮೇ 2019 (06:29 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮನೆ ರಿಪೇರಿ ಕೆಲಸ ಮಾಡುವಿರಿ. ಇದರಿಂದಾಗಿ ಕೆಲವು ಖರ್ಚು ವೆಚ್ಚಗಳಾಗಬಹುದು. ಕಾರ್ಯದೊತ್ತಡ ಹೆಚ್ಚಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಆತಂಕ ಕ್ಷಣ ಎದುರಾದರೂ ಕೊನೆಗೆ ಶುಭ ಫಲ.
 
ವೃಷಭ: ಅಧಿಕಾರಿ ವರ್ಗದವರಿಗೆ ಮಹಿಳೆಯರಿಂದ ಅಪವಾದದ ಭೀತಿಯಿದೆ. ಎಚ್ಚರಿಕೆಯಿಂದ ವರ್ತಿಸಿ. ಕೌಟುಂಬಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ಆದಾಯದಷ್ಟೇ ಖರ್ಚೂ ಇರಲಿದೆ. ಪಾಲು ಬಂಡವಾಳ ಹೂಡಿಕೆಯಿಂದ ಲಾಭ.
 
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಹಿತ ಶತ್ರುಗಳ ಕಾಟವಿರಲಿದೆ. ಮಿತ್ರರ ಸಹಕಾರ ಸಕಾಲಕ್ಕೆ ದೊರೆಯುವುದರಿಂದ ಕಾರ್ಯ ಸುಸ್ರೂತ್ರವಾಗಲಿದೆ. ವಾಹನ ಸವಾರರಿಗೆ ಅಪಘಾತದ ಭಯವಿದೆ. ದಿನದಂತ್ಯಕ್ಕೆ ಶುಭಸುದ್ದಿ.
 
ಕರ್ಕಟಕ: ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಯಶಸ್ಸು ಕಂಡುಬರಲಿದೆ. ಇಷ್ಟ ದೇವತಾ ದರ್ಶನದಿಂದ ಕಾರ್ಯಸಿದ್ಧಿ. ನೂತನ ವೃತ್ತಿಯವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನಾನಾ ಮೂಲಗಳಿಂದ ಧನಾಗಮನವಾಗಲಿದೆ.
 
ಸಿಂಹ: ಅಂದುಕೊಂಡ ಕಾರ್ಯಗಳು ದೈವಾನುಕೂಲದಿಂದ ಸುಗಮವಾಗಿ ನೆರವೇರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ತಾತ್ಕಾಲಿಕ ವೃತ್ತಿಯವರಿಗೆ ಬಡ್ತಿ ಯೋಗ.
 
 
ಕನ್ಯಾ: ಪ್ರಾಮಾಣಿಕತೆಯಿಂದ ವರ್ತಿಸಿದರೆ ಸಂಭಾವ್ಯ ಅಪವಾದಗಳಿಂದ ದೂರವಿರಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ.
 
ತುಲಾ: ವಿದ್ಯಾವಂತರಿಗೆ ತಮ್ಮ ಪ್ರತಿಭೆಗೆ ತಕ್ಕ ಉದ್ಯೋಗಾವಕಾಶಗಳು ದೊರೆಯಲಿದೆ. ಸಾಂಸಾರಿಕವಾಗಿ ಬಂಧು ಮಿತ್ರರ ಆಗಮನ ಮನಸ್ಸಿಗೆ ಸಂತಸ ನೀಡಲಿದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.
 
ವೃಶ್ಚಿಕ: ಹಿರಿಯರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾಗುತ್ತದೆ. ಆದಾಯವಿದ್ದಷ್ಟೇ ಖರ್ಚೂ ತಲೆದೋರುವುದು. ಹಾಗಿದ್ದರೂ ಅಭಿವೃದ್ಧಿಗೆ ಭಂಗವಿರದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
 
ಧನು: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ವೈವಾಹಿಕ ಪ್ರಸ್ತಾಪಗಳು ಬರಲಿವೆ. ಪ್ರವಾಸದಿಂದ ಮನಸ್ಸಿಗೆ ನೆಮ್ಮದಿ, ಖುಷಿ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದುಡುಕು ವರ್ತನೆ ತೋರದಿರಿ.
 
ಮಕರ: ಮಕ್ಕಳಿಗೆ ಸಮಯೋಚಿತ ಸಲಹೆ ನೀಡಿ ಮೆಚ್ಚುಗೆಗೆ ಪಾತ್ರರಾಗುವಿರಿ. ರಾಜಕೀಯವಾಗಿ ಸ್ಥಾನ ಮಾನ ಹೆಚ್ಚುವುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ವಿದ್ಯಾರ್ಥಿಗಳು ಶಿಕ್ಷಕರ ಮೆಚ್ಚುಗೆ ಗಳಿಸುವರು.
 
ಕುಂಭ: ದೂರ ಸಂಚಾರದಿಂದ ದೇಹಾಯಾಸವಾದರೂ ಕಾರ್ಯಸಾಧನೆಯಾದೀತು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ. ಶುಭ ಫಲಗಳಿಗೆ ದೇವತಾ ಪ್ರಾರ್ಥನೆ ಮಾಡಿ.
 
ಮೀನ: ವೃತ್ತಿ ಬದಲಾವಣೆಗೆ ಇದು ಸಕಾಲ. ಆಸ್ತಿ ವ್ಯವಹಾರ ನಡೆಸಿದರೆ ಲಾಭವಾಗಲಿದೆ. ದಾಯಾದಿಗಳೊಂದಿಗೆ ಮನಸ್ತಾಪ ದೂರವಾಗಲಿದೆ. ದೈವಾನುಕೂಲದಿಂದ ಇಂದು ನಿಮಗೆ ಶುಭ ದಿನವಾಗಿರಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             


ಇದರಲ್ಲಿ ಇನ್ನಷ್ಟು ಓದಿ :