ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 24 ಮೇ 2019 (06:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮನೆಯಲ್ಲಿ ಕಿರಿ ಕಿರಿ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಮುನಿಸು ಮುಂದುವರಿಯುವುದು. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಖರ್ಚು ವೆಚ್ಚಗಳು ಹೆಚ್ಚಾಗಲಿವೆ.
 
ವೃಷಭ: ದೂರ ಸಂಚಾರದಲ್ಲಿ ಅಡೆತಡೆಗಳಿದ್ದರೂ ಕಾರ್ಯಾನುಕೂಲವಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಕಷ್ಟಕ್ಕೆ ಮರುಗುವ ನಿಮ್ಮ ಗುಣವನ್ನು ಇತರರು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿ.
 
ಮಿಥುನ: ಕೆಲವೊಮ್ಮೆ ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಚಾಡಿ ಮಾತು ಕೇಳಬೇಕಾಗುತ್ತದೆ. ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಧನಾಗಮನವಿದ್ದರೂ ಖರ್ಚು ವೆಚ್ಚದ ಬಗ್ಗೆ ಕಡಿವಾಣ ಅಗತ್ಯ.
 
ಕರ್ಕಟಕ: ಆರೋಗ್ಯ ಭಾಗ್ಯ ಸುಧಾರಿಸುವುದು. ಆಸ್ತಿ ಖರೀದಿ, ಗೃಹ ನಿರ್ಮಾಣ ಕೆಲಸದಲ್ಲಿ ಪ್ರಗತಿ ಕಂಡುಬರುವುದು. ವಾಹನ ಚಾಲಕರು ಎಚ್ಚರಿಕೆ ವಹಿಸಬೇಕಾಗುತ್ತದೆ. ನೂತನ ಬಂಡವಾಳ ಹೂಡಿಕೆಯಲ್ಲಿ ಎಚ್ಚರ.
 
ಸಿಂಹ: ಕಾರ್ಮಿಕ ವರ್ಗದವರಿಗೆ ಮಾಲಿಕರಿಂದ ಕಿರಿ ಕಿರಿ. ಮೇಲ್ವರ್ಗದ ಉದ್ಯೋಗಿಗಳಿಗೆ ಬಡ್ತಿ ಯೋಗವಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ. ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚುವುದು.
 
 
ಕನ್ಯಾ: ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಇದರಿಂದ ಅಂದುಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು. ಕೃಷಿಕರಿಗೆ ನೀರಿನ ತೊಂದರೆ ತಪ್ಪದು. ವ್ಯಾಪಾರ ವಹಿವಾಟಿನಲ್ಲಿ ಸಮಾಧಾನಕರ ಲಾಭ ಸಿಗಲಿದೆ.
 
ತುಲಾ: ತಾಳ್ಮೆಯಿದ್ದಷ್ಟೂ ನೀವು ಗೆದ್ದಂತೆ. ದುಡುಕು ಮಾತನಾಡಿ ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಕಳೆದುಕೊಳ್ಳಬೇಡಿ. ಆರ್ಥಿಕವಾಗಿ ಸಾಲಗಳು ಪಾವತಿಯಾಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ.
 
ವೃಶ್ಚಿಕ: ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಕೆಟ್ಟ ನಿರ್ಧಾರ ಕೈಗೊಂಡರೆ ಕೈ ಸುಟ್ಟುಕೊಳ್ಳಬೇಕಾದೀತು. ಸಂಚಾರದಲ್ಲಿ ಕಷ್ಟಗಳು ಎದುರಾಗಬಹುದು. ಸಂಗಾತಿಯ ಮಾತಿಗೆ ಕಿವಿಗೊಡಿ. ನಾನಾ ಖರ್ಚುಗಳು ಎದುರಾಗಲಿವೆ. ತಾಳ್ಮೆ ಅಗತ್ಯ.
 
ಧನು: ಮಕ್ಕಳ ಬಗ್ಗೆ ಅಸಮಾಧಾನವಾಗುವುದು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಧನಾಗಮನಕ್ಕೆ ಕೊರತೆಯಿಲ್ಲ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಪ್ರಯಾಣ ಮಾಡುವಾಗ ಎಚ್ಚರ.
 
ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ಫಲಿತಾಂಶ ಸಿಗುವುದು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ. ಕಚೇರಿಯಲ್ಲಿ ಮಾನಹಾನಿಯಾಗುವ ಸಂಭವವಿದೆ. ಸಹನೆಯಿಂದ ವರ್ತಿಸಿ.
 
ಕುಂಭ: ಮಕ್ಕಳ ವೈವಾಹಿಕ ಪ್ರಸ್ತಾಪಗಳಿಗೆ ಕೆಲವು ಅಡೆತಡೆಗಳು ತೋರಿಬಂದು ಚಿಂತೆಯಾದೀತು. ಆದರೆ ಕುಲದೇವರ ಪ್ರಾರ್ಥನೆ ನಡೆಸಿದರೆ ವಿಘ್ನಗಳು ನಿವಾರಣೆಯಾಗುವುದು. ನೂತನ ದಂಪತಿಗಳಿಗೆ ಪ್ರವಾಸ ಭಾಗ್ಯ. ಆರ್ಥಿಕವಾಗಿ ಸಮಸ್ಥಿತಿಯಿರಲಿದೆ.
 
ಮೀನ: ಮನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪವಾಗಿ ಅಸಹನೀಯ ವಾತಾವರಣವಿರಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಮಹಿಳೆಯರಿಂದ ಅಪವಾದದ ಭೀತಿಯಿದ್ದು, ಎಚ್ಚರಿಕೆ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  
ಇದರಲ್ಲಿ ಇನ್ನಷ್ಟು ಓದಿ :