ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 25 ಮೇ 2019 (07:14 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಆರ್ಥಿಕವಾಗಿ ಶುಭ ಸೂಚನೆಗಳಿರುತ್ತವೆ.  ಬಾಕಿ ಹಣ ಪಾವತಿಯಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸ ಮೆಚ್ಚುಗೆಗೆ ಪಾತ್ರವಾಗುವುದು. ಆದರೆ ಕೌಟುಂಬಿಕವಾಗಿ ಒತ್ತಡದ ದಿನ. ಕೆಲಸ ಕಾರ್ಯಗಳಿಗೆ ಓಡಾಟ ಹೆಚ್ಚಿರುತ್ತದೆ.
 
ವೃಷಭ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬರುವುದು. ದೇವರ ಅನುಗ್ರಹ ನಿಮ್ಮ ಮೇಲಿದ್ದು ಅಂದುಕೊಂಡ ಕಾರ್ಯಗಳು ನೆರವೇರಲಿದೆ. ಹಿರಿಯರಿಗೆ ಸಂತಸದ ವಾರ್ತೆಯಿದೆ. ಆರ್ಥಿಕವಾಗಿ ಅಭಿವೃದ್ಧಿ.
 
ಮಿಥುನ: ಆಸ್ತಿ, ಮನೆ ಖರೀದಿಗೆ ಅವಸರದ ನಿರ್ಧಾರ ಕೈಗೊಳ್ಳಬೇಡಿ. ಪ್ರತಿಕೂಲ ಫಲಗಳಿಂದ ವಿಚಲಿತರಾಗದಿರಿ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಕ್ಕಾಗಿ ಕೆಲವು ದಿನ ಕಾಯಬೇಕಾದೀತು. ದಿನದಂತ್ಯಕ್ಕೆ ಶುಭ ಸುದ್ದಿ.
 
ಕರ್ಕಟಕ: ಸಾಂಸಾರಿಕವಾಗಿ ಅಭಿವೃದ್ಧಿ ನೆಮ್ಮದಿ ಇರುವುದು. ಪತ್ನಿ ಮಕ್ಕಳೊಂದಿಗೆ ಸಂತಸದ ಸಮಯ ಕಳೆಯುವಿರಿ. ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
 
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಹಕಾರ, ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಬದಲಾವಣೆಯಾಗಲಿದೆ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚುವುದು.
 
 
ಕನ್ಯಾ: ಆರೋಗ್ಯ ಹದಗೆಡುವ ಸಂಭವವಿದ್ದು, ಅತೀವ ಕಾಳಜಿ ವಹಿಸಬೇಕಾಗುತ್ತದೆ. ಶೈಕ್ಷಣಿಕ ವೃತ್ತಿಯಲ್ಲಿರುವವರಿಗೆ ಶುಭ. ಸಂಸಾರದಲ್ಲಿ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಆರ್ಥಿಕವಾಗಿ ಸಮಸ್ಥಿತಿ.
 
ತುಲಾ: ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಆದರೆ ಹೊಸ ಕೆಲಸಗಳಿಗೆ ಕೈ ಹಾಕಿದರೆ ಯಶಸ್ಸು ಗಳಿಸುವಿರಿ. ದೂರ ಸಂಚಾರದಿಂದ ಕಾರ್ಯಪ್ರಾಪ್ತಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಸಿಗಲಿದೆ.
 
ವೃಶ್ಚಿಕ: ನೂತನ ದಂಪತಿಗಳಿಗೆ ಏಕಾಂತ ಭಂಗ. ಅನಿರೀಕ್ಷಿತವಾಗಿ ಮನೆಗೆ ಬಂಧು ಮಿತ್ರರ ಆಗಮನ. ಖರ್ಚು ವೆಚ್ಚಗಳು ಹೆಚ್ಚುವುದು. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.
 
ಧನು: ಆಸ್ತಿ ವಿಚಾರಕ್ಕೆ ದಾಯಾದಿಗಳೊಂದಿಗಿನ ಮನಸ್ತಾಪ ನಿಧಾನವಾಗಿ ಪರಿಹಾರವಾಗುವುದು. ಸಂಗಾತಿಯ ಆಸೆಗಳಿಗೆ ಕಿವಿಗೊಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ. ಹಳೇ ಮಿತ್ರರ ಭೇಟಿ.
 
ಮಕರ: ಹಿರಿಯರ ತೀರ್ಥ ಯಾತ್ರೆಗೆ ಸಿದ್ಧತೆ ಮಾಡುವಿರಿ. ಪಾಲು ಬಂಡವಾಳ ಹೂಡಿಕೆಯಲ್ಲಿ ಲಾಭ ಗಳಿಸುವಿರಿ. ತಾತ್ಕಾಲಿಕ ಉದ್ಯೋಗಿಗಳಿಗೆ ಖಾಯಂ ಉದ್ಯೋಗ ದೊರಕಲಿದೆ. ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ.
 
ಕುಂಭ: ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ಮಿತ್ರರೊಂದಿಗೆ ಪ್ರವಾಸ, ಭೋಜನ ಸಾಧ್ಯತೆ. ದೂರ ಸಂಚಾರದಲ್ಲಿ ತೊಂದರೆ ಎದುರಾಗಲಿದೆ. ವಾಹನ ಸವಾರರು ಎಚ್ಚರವಾಗಿರಬೇಕು.
 
ಮೀನ: ಸಂತಾನಹೀನ ದಂಪತಿಗಳ ಇಷ್ಟ ನೆರವೇರಲಿದೆ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯ.  ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ಋಣಾತ್ಮಕ ಚಿಂತನೆಗಳಿಗೆ ಅವಕಾಶ ನೀಡದಿರಿ.
ಇದರಲ್ಲಿ ಇನ್ನಷ್ಟು ಓದಿ :