Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 26 ಮೇ 2019 (08:43 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಸಾಂಸಾರಿಕವಾಗಿ ಪತ್ನಿ ಮಕ್ಕಳಿಂದ ಸಂತಸ. ಬಂಧು ಮಿತ್ರರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ಆದರೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ವೃಷಭ: ಆರ್ಥಿಕವಾಗಿ ನಿಧಾನವಾಗಿ ಅಭಿವೃದ್ಧಿ ತೋರಿಬರುವುದರಿಂದ ಕೈಗೊಂಡ ಕೆಲಸಗಳು ಯಶಸ್ವಿಯಾಗಿ ಮುನ್ನಡೆಯುವುದು. ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.
 
ಮಿಥುನ: ಅನಿರೀಕ್ಷಿತವಾಗಿ ಕೆಲವೊಂದು ಕೆಲಸಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ. ಸಂಗಾತಿಯ ಆಸೆ ಆಕಾಂಕ್ಷೆಗಳಿಗೆ ಕಿವಿಗೊಡಬೇಕಾಗುತ್ತದೆ. ಮಕ್ಕಳಿಂದ ಮನೆಯಲ್ಲಿ ಸಂತಸ. ಓಡಾಟದಿಂದ ದೇಹಾಯಾಸವಾಗಲಿದೆ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ. ವೈಯಕ್ತಿಕವಾಗಿ ಉತ್ತಮ ಸ್ಥಾನಮಾನ ಗಳಿಸುವಿರಿ. ಅನಿರೀಕ್ಷಿತ ಧನಾಗಮನದಿಂದ ಕಾರ್ಯಸಾಧನೆಯಾಗಲಿದೆ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ.
 
ಸಿಂಹ: ಕಚೇರಿಯಲ್ಲಿ ಸಹೋದ್ಯೋಗಿಗಳೇ ನಿಮಗೆ ಕಂಟಕವಾಗಲಿದ್ದಾರೆ. ಹಿತ ಶತ್ರುಗಳು ನಿಮ್ಮ ಏಳಿಗೆಗೆ ಕಲ್ಲು ಹಾಕುವರು. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗಲಿದೆ.
 
 
ಕನ್ಯಾ: ಕೃಷಿ ಕ್ಷೇತ್ರದಲ್ಲಿರುವವರಿಗೆ ನೀರಿನ ತೊಂದರೆ ತಪ್ಪುವುದು. ಉತ್ತಮ ಬೆಳೆ ಪಡೆಯುವರು. ನೌಕರ ವರ್ಗದವರಿಗೆ ಬಡ್ತಿ, ಮುನ್ನಡೆ ಯೋಗ. ಅವಿವಾಹಿತರು ಉತ್ತಮ ಸಂಬಂಧಕ್ಕಾಗಿ ಕೆಲವು ದಿನ ಕಾಯಬೇಕಾಗುತ್ತದೆ.
 
ತುಲಾ: ಸಂತಾನ ಹೀನ ದಂಪತಿಗೆ ಶುಭ ಫಲಗಳು ಗೋಚರಕ್ಕೆ ಬರುವುದು. ಗೃಹೋಪಯೋಗಿ ವಸ್ತುಗಳಿಗಾಗಿ ಹೆಚ್ಚಿನ ಧನವಿನಿಯೋಗ ಮಾಡಬೇಕಾಗುತ್ತದೆ. ದೂರ ಸಂಚಾರದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು.
 
ವೃಶ್ಚಿಕ: ಹಳೆಯ ಮಿತ್ರರೊಬ್ಬರ ಭೇಟಿಯಾಗುವಿರಿ. ಶುಭ ಮಂಗಲ ಕಾರ್ಯ ನೆರವೇರಿಸಲು ಚಿಂತನೆ ನಡೆಸಿದರೂ ಕೆಲವೊಂದು ಅಡ್ಡಿ ಆತಂಕಗಳು ಎದುರಾಗಬಹುದು. ಮಹಿಳೆಯರಿಂದ ಅಪವಾದದ ಭೀತಿ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ.
 
ಧನು: ಹೊಸ ವಾಹನ, ಆಸ್ತಿ, ಮನೆ ಖರೀದಿಗೆ ಇಂದು ಸಕಾಲ. ಹೊಸ ವ್ಯವಹಾರಗಳಿಂದ ಲಾಭ ಪಡೆಯುವಿರಿ. ಆದರೆ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾಗುವುದು. ದೂರ ಪ್ರಯಾಣ ಮಾಡಬೇಕಾಗಬಹುದು.
 
ಮಕರ: ವೃತ್ತಿರಂಗದಲ್ಲಿ ದೃಢತೆಯಿರಲಿ. ಚಂಚಲ ಮನೋಭಾವದಿಂದ ಉದ್ಯೋಗ ಬದಲಾವಣೆಗೆ ಆತುರದ ನಿರ್ಧಾರ ಕೈಗೊಳ್ಳಬೇಡಿ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ದಿನದಂತ್ಯಕ್ಕೆ ಶುಭ ಫಲ.
 
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕುಲದೇವರ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ. ಸಂಗಾತಿಯಿಂದ ಮನಸ್ಸಿಗೆ ಬೇಸರವಾಗುವುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ನಿರುದ್ಯೋಗಿಗಳಿಗೆ ತಾತ್ಕಾಲಿ’ಕ ಉದ್ಯೋಗ ಸಿಗಲಿದೆ.
 
ಮೀನ: ಎಷ್ಟೇ ಕಷ್ಟಗಳು ಬಂದರೂ ತಾಳ್ಮೆಯಿಂದ ಮುನ್ನಡೆದರೆ ಮುಂದೆ ಶುಭ ಫಲಗಳಿವೆ. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣವಿರಲಿದೆ.
ಇದರಲ್ಲಿ ಇನ್ನಷ್ಟು ಓದಿ :