Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 29 ಮೇ 2019 (05:24 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ. ಕೆಲಸದೊತ್ತಡ ಹೆಚ್ಚಲಿದೆ.
 
ವೃಷಭ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ತೊಂದರೆ ತಪ್ಪಿದ್ದಲ್ಲ. ಕಾರ್ಯಸಾಧನೆಗೆ ಅಡ್ಡಿಯಾದರೂ ತಾಳ್ಮೆಯಿಂದಿರಬೇಕು. ಕೌಟುಂಬಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ಬಂಧುಗಳ ಆಗಮನ ಖುಷಿ ನೀಡಲಿದೆ.
 
ಮಿಥುನ: ಕಾರ್ಯಸಾಧನೆಗೆ ಹಿತ ಶತ್ರುಗಳ ಅಡ್ಡಿ ಆತಂಕ ಇದ್ದೇ ಇರುತ್ತದೆ. ಆಂಜನೇಯ ಸ್ವಾಮಿ ಪ್ರಾರ್ಥನೆಯಿಂದ ಆತ್ಮಸ್ಥೈರ್ಯ ಹೆಚ್ಚುವುದು. ಆದರೆ ನೀವು ಕಲಿತ ವಿದ್ಯೆಯನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ಅಂತಿಮವಾಗಿ ಜಯ ನಿಮ್ಮದೇ.
 
ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಸಹಕಾರ ಸಿಗಲಿದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ದೂರ ಸಂಚಾರ ಮಾಡುವರು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ಸಿಂಹ: ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ನಿರುದ್ಯೋಗಿಗಳು ಸೂಕ್ತ ಉದ್ಯೋಗಕ್ಕೆ ಕೆಲವು ಕಾಲ ಕಾಯಬೇಕಾಗುತ್ತದೆ. ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು ಖರ್ಚು ವೆಚ್ಚಗಳು ಹೆಚ್ಚಲಿವೆ.
 
 
ಕನ್ಯಾ: ದುಶ್ಚಟಗಳಿಂದ ದೂರವಿರಿ. ದುರ್ಜನರ ಮಾತಿಗೆ ಕಿವಿಗೊಟ್ಟು ಕೆಲಸ ಹಾಳು ಮಾಡಿಕೊಳ್ಳಬೇಡಿ. ಮಕ್ಕಳ ಅಭ್ಯಾಸ ವಿಷಯದಲ್ಲಿ ಚಿಂತೆಯಾಗಬಹುದು. ಅನಿರೀಕ್ಷಿತವಾಗಿ ಖರ್ಚುಗಳು ತೋರಿಬಂದೀತು.
 
ತುಲಾ: ವ್ಯಾಪಾರ ವ್ಯವಹಾರದಲ್ಲಿ ನಿವ್ವಳ ಲಾಭ ಗಳಿಸಬಹುದು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗುವಿರಿ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪಿಗೆಯಾಗುವ ಸಂಬಂಧಗಳು ಕೂಡಿಬರಲಿವೆ.
 
ವೃಶ್ಚಿಕ: ನಿರುದ್ಯೋಗಿಗಳಿಗೆ ಹತಾಶೆಯ ಮನೋಭಾವ ಕಾಡಬಹುದು. ಸ್ವ ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಕೋರ್ಟು ವ್ಯವಹಾರದಲ್ಲಿ ಜಯ.
 
ಧನು: ವೃತ್ತಿರಂಗದಲ್ಲಿ ಯಶಸ್ಸು ನಿಮ್ಮ ಕೈಹಿಡಿಯಲಿದೆ. ಹಂತ ಹಂತವಾಗಿ ಅಭಿವೃದ್ಧಿ ತೋರಿಬರಲಿದೆ. ಪ್ರಯತ್ನ ಬಲವಿದ್ದರೆ ವಿದ್ಯಾರ್ಥಿಗಳಿಗೆ ಯಶಸ್ಸು ಸಾಧ್ಯ. ಆಸ್ತಿ ಖರೀದಿಗೆ ಮುಂದಾಗುವಿರಿ.
 
ಮಕರ: ವೃತ್ತಿ ರಂಗದಲ್ಲಿ ಏನೋ ಒಂದು ರೀತಿಯ ಅಸಮಾಧಾನವಿರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ನೂತನ ವಧೂ ವರರಿಗೆ ಪ್ರವಾಸ ಭಾಗ್ಯ. ಕೌಟುಂಬಿಕವಾಗಿ ಮಕ್ಕಳಿಂದ ಸಂತಸದ ವಾರ್ತೆ.
 
ಕುಂಭ: ಸಂಗಾತಿಯ ಕಿರಿ ಕಿರಿಗೆ ಮನಸ್ಸಿಗೆ ಬೇಸರವಾಗಬಹುದು. ಕಾರ್ಯನಿಮಿತ್ತ ಓಡಾಟ ತಪ್ಪದು. ಆದಾಯ, ಖರ್ಚು ವೆಚ್ಚಗಳ ಬಗ್ಗೆ ಲೆಕ್ಕವಿಟ್ಟುಕೊಳ್ಳದೇ ಇದ್ದರೆ ಮುಂದೆ ತೊಂದರೆಯಾದೀತು. ದೇವತಾ ಪ್ರಾರ್ಥನೆ ಮಾಡಿ.
 
ಮೀನ: ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಸಹೋದರರೊಂದಿಗೆ ಆಸ್ತಿ ವಿಚಾರಕ್ಕೆ ಕಲಹವಾಗದಂತೆ ಹಿರಿಯರ ಸಲಹೆ ಪಡೆಯುವುದು ಉತ್ತಮ. ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :